ಭಾರತ ಚಂದಿರನ ದಕ್ಷಿಣಾಪಥೇಶ್ವರ


 

ವರದಿ ಮಂಜುನಾಥ್ ಕೋಳೂರು ಕೊಪ್ಪಳ 

 ಕೊಪ್ಪಳ ಆಗಸ್ಟ್ 24: -ವಿಶ್ವದ ನಾಲ್ಕನೇ ರಾಷ್ಟ್ರ ವಾಗಿ ಪ್ರತಿಷ್ಠಿತ ದೇಶಗಳ ಸಾಲಿಗೆ ಸೇರ್ಪಡೆಗೆ ಭಾರತೀಯರ ಕೀರ್ತಿ ಪತಾಕೆಯನ್ನು ವಿಶ್ವವೇ ನೋಡುವಂತೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದಲ್ಲಿ ಸಡಗರ ಸಂಭ್ರಮಾಚರಣೆ. ಬಾಹ್ಯಾಕಾಶ ವಿಜ್ಞಾನದಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಪ್ರಥಮ ರಾಷ್ಟ್ರ ಭಾರತವೆಂಬ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಕ್ಷಣಗಳಿಗೆ ವಿಶ್ವವೇ ಸಾಕ್ಷಿ ಯಾಗಿ ಚಂದ್ರನ ಮೇಲೆ ಕಾಲಿಟ್ಟ ವಿಶ್ವದ ನಾಲ್ಕನೇ ರಾಷ್ಟ್ರ ವಾಗಿ ಪ್ರತಿಷ್ಠಿತ ದೇಶಗಳ ಸಾಲಿಗೆ ಸೇರ್ಪಡೆ ಯಾದ ಸೂರ್ಯೋದಯದ ಪರ್ವಕಾಲದಲ್ಲಿ ಚಂದಿರನ ಅಂಗಳದ ಮೇಲೆ ಕಾಲಿಟ್ಟ ಭಾರತ ಬಾಹ್ಯಾಕಾಶ ತಂತ್ರಜ್ಞಾನದ ಕ್ಷೇತ್ರದಲ್ಲಿ ಭವ್ಯ ದಾಖಲೆಯನ್ನೇ ಬರೆದಿರುವ ಆ 18 ನಿಮಿಷಗಳು ಇಸ್ರೋ ವಿಜ್ಞಾನಿಗಳ ಪಾಲಿಗೆ ಮಹಾಭಾರತದ 18 ದಿನಗಳ ಮಹಾಯುದ್ಧದಂತೆ ಬಾಸವಾದ ಕ್ಷಣ ಚಂದ್ರಯಾನ -3 ಹೊಸ "ವಿಕ್ರಮ" ಶಕೆ ಪ್ರಾರಂಭಕ್ಕೆ ವಿಶ್ವದ ನಾಲ್ಕನೇ ರಾಷ್ಟ್ರ ವಾಗಿ ಪ್ರತಿಷ್ಠಿತ ದೇಶಗಳ ಸಾಲಿಗೆ ಸೇರ್ಪಡೆಯಾಗಿ ಭಾರತೀಯರ ಕೀರ್ತಿ ಪತಾಕೆಯನ್ನು ವಿಶ್ವಮಟ್ಟಕ್ಕೆ ಏರಿಸಿದ ನಮ್ಮಭಾರತದ ಇಸ್ರೋ ವಿಜ್ಞಾನಿಗಳ ಸಾಹಸಕ್ಕೆ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಸಾರ್ವಜನಿಕರು ದೇಶ ಅಭಿಮಾನಿಗಳು ಪರಸ್ಪರ ಸಿಹಿ ಹಂಚಿ ಪಟಾಕಿ ಸಿಡಿಸಿ ಊರಿನ ಪ್ರತಿಯೊಬ್ಬ ಪ್ರಜೆಯು ವಿಜಯೋತ್ಸವ ಆಚರಿಸಿದರು. 

 ವಿಜಯೋತ್ಸವದ ಕಾರ್ಯಕ್ರಮದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಬಸವರಾಜ ಹಳ್ಳೂರು ಇಸ್ರೋ ವಿಜ್ಞಾನಿಗಳ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮ ಪ ಅಧ್ಯಕ್ಷರಾದ ರುದ್ರಗೌಡ ಗೌಡಪ್ಪನವರ್ , ಸೂಚಪ್ಪ ಬೋವಿ, ಮರೇಗೌಡ ಬೋದೂರು, ಡಾ. ಬಸವರಾಜ ಹಕ್ಕಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಶಿವಪುತ್ರಪ್ಪ ಕೋಳೂರು, ಗ್ರಾಮ ಪಂಚಾಯತ್ ಸದಸ್ಯರಮೇಶ ಬಡಿಗೇರ, ವಿರೇಶ ಈಳಗೇರ, ನಾಗರಾಜ‌ ಕಂದಗಲ್, ಮಂಜುನಾಥ ಶಿರೋಳ, ಬೀಮಣ್ಣ ಮೂಲಿಮನಿ ಹಾಗೂ ಊರಿನ ಸಾರ್ವಜನಿಕರು ಹಿರಿಯರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ