12ನೇ ಶತಮಾನದ ಶ್ರೀ ಶರಣ ನುಲಿಯ ಚಂದಯ್ಯನವರ 916 ನೇ ಜಯಂತಿ ಆಚರಣೆಗೆ ಪೂರ್ವಭಾವಿ ಸಭೆ


ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ.ಕುಮಾರ್ ರವರ ಅಧ್ಯಕ್ಷತೆಯಲ್ಲಿ12 ನೇ ಶತಮಾನದ ಶ್ರೀ ಶರಣ ನುಲಿಯ ಚಂದಯ್ಯನವರ 

916 ನೇ ಜಯಂತಿ ಆಚರಣೆಗೆ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು

ಸದರಿ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಕುಳುವ ಮುಖಂಡರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಸದರಿ ಸಭೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ನುಲಿಯ ಚಂದಯ್ಯನವರ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ವ್ಯವಸ್ಥಿತವಾಗಿ ಆಚರಿಸುವಂತೆ

ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಜೊತೆಗೆ ನುಲಿಯ ಚಂದಯ್ಯನವರ ತತ್ವ ಮತ್ತು ಆದರ್ಶ್ ಗಳ ಬಗ್ಗೆ ಸಾಕ್ಷ್ಯಚಿತ್ರ ಪ್ರದರ್ಶನ, ಪುಸ್ತಕ ಹಾಗೂ ವಚನಗಳ ಉಕ್ತಿಗಳನ್ನು ಪ್ರದರ್ಶನ ಮಾಡುವಂತೆ ಕನ್ನಡ ಸಂಸ್ಕೃತಿ ಇಲಾಖೆಗೆ ಸೂಚಿಸಿದ್ದರು.

ಜೊತೆಗೆ ಜಿಲ್ಲೆಯಲ್ಲಿ ಕುಳುವ ಸಮಾಜದ ಸ್ಥಿತಿಗತಿಗಳನ್ನು ತಿಳಿದುಕೊಂಡು ಜಿಲ್ಲಾ ಮಟ್ಟದ ಸಮುದಾಯ ಭವನ ಹಾಗೂ ಇತರೆ ಅಭಿವೃದ್ಧಿಗೆ ಸಹಕಾರ ಕೊಡುವುದಾಗಿ ತಿಳಿಸಿದರು.

 ಸಮುದಾಯ ಹಾಗೂ ಮಾನ್ಯ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರವಿಕುಮಾರ್ ಗಣಿಗ ರವರ ಮನವಿಗೆ ಸ್ಪಂದಿಸಿ ಜಯಂತಿಯನ್ನು ಆಗಸ್ಟ್ 31 ರ ಬದಲು ಸೆಪ್ಟೆಂಬರ್ 16 ರಂದು ಆಚರಿಸಲು ಸಮುದಾಯದ ಮುಖಂಡರು ಒಕ್ಕೂರಲಿನಿಂದ ಕೋರಿದ್ದರು. ಇದಕ್ಕೆ ಸಮ್ಮತಿಸಿದರು.

ಚಂದಯ್ಯನವರ ಜಯಂತಿಗೆ ವಿಶೇಷ ಒತ್ತು ನೀಡಿ ಅರ್ಥಪೂರ್ಣಯ ಆಚರಿಸಲು ಅಗತ್ಯ ಕ್ರಮಕೈಗೊಳ್ಳವಂತೆ ಸೂಚನೆ ನೀಡಿದರು..

ಸದರಿ ಸಭೆಯಲ್ಲಿ AKMS ರಾಜ್ಯ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ, ಮಂಡ್ಯ ಜಿಲ್ಲಾಧ್ಯಕ್ಷರಾದ ಕೃಷ್ಣ ಕುಮಾರ್ ಗಣಂಗೂರು, ಗೌರವಾಧ್ಯಕ್ಷರಾದ ಕೆ.ವಿ ನಾಗರಾಜು, ಜಿಲ್ಲಾ ಕಾಂಗ್ರೇಸ್ ಮುಖಂಡರಾದ ರಾಮಶೆಟ್ಟಿ ಹನಕೆರೆ, ಅಲೆಮಾರಿ ಮಹಾ ಸಭಾ ಜಿಲ್ಲಾಧ್ಯಕ್ಷರಾದ ವೆಂಕಟೇಶ್ ಗಣಂಗೂರು, ಜಿಲ್ಲಾ ಖಜಾಂಚಿ ಟೆಂಪೋ ರಾಮಕೃಷ್ಣ ಚಾಮಲಾಪುರ,

ಪ್ರಧಾನ ಕಾರ್ಯದರ್ಶಿ ವಿಜಯ್ ತಿರುಮಲಾಪುರ 

ವಿವಿಧ ತಾಲ್ಲೂಕು ಅಧ್ಯಕ್ಷರಾದ ಮಂಡ್ಯ ರಾಮಕೃಷ್ಣ LIC 

ಕೆ.ಆರ್ ಪೇಟೆ, ಮಹೇಶ್ ನಾಯಸಿಂಗನಹಳ್ಳಿ, ನಾಗಮಂಗಲ ಸುರೇಶ್ 

ಗಂಗರಹಳ್ಳಿ,ಮಳವಳ್ಳಿ 

ಶಿವು ಚನ್ನ ಕೂನನಪುರ,

ಪಾಂಡವಪುರ ಶ್ರೀನಿವಾಸ್ ಅರಳುಕುಪ್ಪೆ, ತಾಲ್ಲೂಕು ಇತರ ಪಧಾಧಿಕಾರಿಗಳು ಮತ್ತು ಸಮಾಜದ ಹಿರಿಯರು ಭಾಗವಹಿಸಿದ್ದರು.


ಇಂತಿ..

AKMS

ಮಂಡ್ಯ ಜಿಲ್ಲಾ ಸಮಿತಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ