ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ-ಪುರಸ್ಕಾರ
ವರದಿ- ಮಂಜುನಾಥ್ ಕೋಳೂರು ಕೊಪ್ಪಳ
ಕೊಪ್ಪಳ ಅಗಸ್ಟ್30 : - ನಗರದ ಡಾ. ಬಿ .ಆರ್ ಅಂಬೇಡ್ಕರ್ ಸಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ಇತ್ತೀಚಿಗೆ ಸಾಹಿತ್ಯ ಭವನದಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಸ್ಥೆ ಮತ್ತು ವೇದಿಕೆ ಪರವಾಗಿ 2022 -23 ಪ್ರಸಕ್ತ ಸಾಲಿನಲ್ಲಿ ಜರುಗಿದ ಎಸ್. ಎಸ್ .ಎಲ್. ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. 2018- 19 ನೇ ಸಾಲಿನಲ್ಲಿ ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ನಡೆಸಿರುವಂತ ಪ್ರತಿಷ್ಠಿತ ಶಾಲೆಗೆ ಆಯ್ಕೆ ಮಾಡುವ ಪ್ರವೇಶ ಪೂರಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಪ್ರತಿಷ್ಠಿತ ಶಾಲೆಗಳಾದ ನಗರದ ಎಸ್. ಎಫ್. ಎಸ್ ಶಾಲೆ ಹಾಗೂ ಸ್ವಾಮಿ ವಿವೇಕಾನಂದ ಶಾಲೆಗೆ ಆಯ್ಕೆಯಾದಂತ ವಿದ್ಯಾರ್ಥಿಗಳಾದ ಕಿರಣ್ ಕುಮಾರ್ ಚಿದಾನಂದಪ್ಪ ಹೊಸಮನಿ , ಚರಣ್ ಮಂಜುನಾಥ ಕೋಳೂರು, ಸಂಜನಾ ಮಲ್ಲೇಶ್ ಬುಲ್ಟಿ, ಸ್ನೇಹ ಸಿದ್ದಪ್ಪ ಮೇದಾರ್, ವೀಣಾ ಹುಲುಗಪ್ಪ ಮೇದಾರ್, ವರ್ಷ ಹುಲಿಗೆಶ ಮೇದರ್, ಕಾಶಿನಾಥ್ ಮೇದರ್, ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ವಿದ್ಯಾರ್ಥಿ ಎಂ. ಡಿ. ಶಮಿ ಉದ್ದಿನ್ ಅಹ್ಮದ್ ಪರವಾಗಿ ತಂದೆಯಾದ ಇಮ್ತಿಯಾಜ್ ಅಹ್ಮದ್ ರವರಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು. 2023 -24ನೇ ಸಾಲಿನ ಪ್ರಸಕ್ತ ವರ್ಷದಲ್ಲಿ ನಗರದ ಪ್ರತಿಷ್ಠಿತ ಸ್ವಾಮಿ ವಿವೇಕಾನಂದ ಕಾಲೇಜಿನ ಮಾಲಿಕತ್ವದ ಶ್ರೀ ಚೈತನ್ಯ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಇವರ ಉನ್ನತ ವಿದ್ಯಾಭ್ಯಾಸದ ಜೊತೆಗೆ ಮುಂಬರುವ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಅವರನ್ನು ಪ್ರೋತ್ಸಾಹಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹಿರಿಯರಾದ ಎಂ ಬಿ ಅಳವಂಡಿ , ಸಾಹಿತಿ ಜಿ.ಎಸ್ ಗೋನಾಳ್ , ಸಮಾಜ ಸೇವಕ ನವೀದ್ ಬದಿ ಉದ್ದಿನ್ ಅಹ್ಮದ್, ನಿವೃತ್ತ ಮುಖ್ಯೋಪಾಧ್ಯಾಯ ಉಮೇಶ್ ಬಾಬು ಸುರ್ವೆ , ಪತ್ರಕರ್ತರಾದ ಸಿದ್ದಪ್ಪ ಹಂಚಿನಾಳ್, ಪ್ರಕಾಶ್ ಪಾಟೀಲ್. ಸಂಘಟಕರಾದ ಮಹೇಶ್ ಬಾಬು ಸರ್ವೆ, ಡಾ. ಬಿ.ಆರ್. ಅಂಬೇಡ್ಕರ್ ಸಂಸ್ಕೃತಿಕ ಕಲಾ ವೇದಿಕೆಯ ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಕೋಳೂರು , ಮೇಸ್ತ್ರಿ ಇಮ್ತಿಯಾಜ್ ಅಹ್ಮದ್ , ಪತ್ರಕರ್ತರಾದ ಉದಯ್ ತೋಟದ, ಉಮೇಶ್ ಪೂಜಾರ್, ಅಮರೇಶ್ ಹಿತ್ತಲ ಮನಿ ಹಾಗೂ ವಿದ್ಯಾರ್ಥಿಗಳ ಪಾಲಕರಾದ ಮಲ್ಲೇಶ್ ಬುಲ್ಟಿ, ಸಿದ್ದಪ್ಪ ಮೇದರ್, ಹುಲಿಗೆ ಮೇದಾರ್ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ