ದಾವಣಗೆರೆಯಲ್ಲಿ ಹೇಗೆ ಇತ್ತು ಸ್ವತಂತ್ರ ಹೋರಾಟ?

 ದಾವಣಗೆರೆ:ದೇಶದ ಸ್ವಾತಂತ್ರ್ಯಕ್ಕಾಗಿ ದೇಶದ ಲಕ್ಷಾಂತರ ಜನ ಪ್ರಾಣ ತೆತ್ತರು. ಆದರೆ, ನಾವು ಓದುವುದು ಕೆಲವೇ ಕೆಲವು ಸ್ವಾತಂತ್ರ್ಯ ಹೋರಾಟಗಾರರ ಕುರಿತು. ಇದಕ್ಕೆ ಕಾರಣ ನಮ್ಮ ಪಠ್ಯಕ್ರಮ.

ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಭೋಸ್, ಜವಾಹರ್ ಲಾಲ್ ನೆಹರು ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಅನೇಕರು ಮನೆ, ಮಡದಿ ಮಕ್ಕಳ ಬಿಟ್ಟು ಬೀದಿಗೆ ಇಳಿದು ಹೋರಾಟ ಮಾಡಿದರು. ಇವರಿಗೆ ಒತ್ತಾಸೆಯಾಗಿ ಸ್ಥಳೀಯ ಮಟ್ಟದಲ್ಲಿಯೂ ನೂರಾರು ಜನ ಪ್ರಾಣ ತೆತ್ತಿದ್ದಾರೆ. 

ಹೀಗೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಸಾಲಿಗೆ ದಾವಣಗೆರೆಯ ಅರು ಜನ ಸೇರಿದ್ದಾರೆ. ಹಳ್ಳೂರು ನಾಗಪ್ಪ, ಅಕ್ಕಸಾಲಿ ವಿರೂಪಾಕ್ಷಪ್ಪ, ಹಮಾಲಿ ತಿಮ್ಮಣ್ಣ, ಮಗಾನಹಳ್ಳಿ ಹನುಮಂತಪ್ಪ, ಹದಡಿ ನಿಂಗಪ್ಪ, ಬಿದರಕುಂದಿ ನಿಂಗಪ್ಪ. ಮಹಾನಗರ ಪಾಲಿಕೆ ಆವರಣದ ಈ ರಾಷ್ಟ್ರ ಲಾಂಛನದ ಸ್ಮರಣಾರ್ಥ ಸಾಲುಗಳನ್ನು ಓದಬಹುದು.

ನಗರದ ಕಾಸಲ್ ಶ್ರೀನಿವಾಸ ಶ್ರೇಷ್ಟಿ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯಿತು. ಪ್ರತಿ ಹೋರಾಟಕ್ಕೆ ಕರೆ ಬಂದಾಗಲೂ ಸ್ಥಳೀಯ ಮಟ್ಟದಲ್ಲಿ ಹೋರಾಟ ನಡೆಯುತ್ತಿದ್ದವು. ಕಾಂಗ್ರೆಸ್ ರಾಷ್ಟ್ರೀಯ ನಾಯಕ ಎಸ್.ನಿಜಲಿಂಗಪ್ಪ ನೇತೃತ್ವದಲ್ಲಿ ಹೋರಾಟ ನಡೆದವು. ಬಳ್ಳಾರಿ ಸಿದ್ದಮ್ಮ, 

1942ರ ಕ್ವಿಟ್ ಇಂಡಿಯಾ ಚಳವಳಿ ವೇಳೆ ನಗರದ ಈಗಿನ ತಹಸೀಲ್ದಾರ್ ಕಚೇರಿ ಬಳಿ ಗೋಲಿಬಾರ್ ಆಗಿತ್ತು. ರೇಣುಕಾ ಮಂದಿರದ ಬಳಿ ಗೋಲಿಬಾರ್ ಮಾಡಿದಾಗ ನಮ್ಮ ಐವರು ನಾಯಕರು ಅಸುನೀಗಿದರು.

ಅದಾದ ಮೇಲೆ ಹೋರಾಟ ಮತ್ತಷ್ಟು ತೀವ್ರಗೊಂಡಿತು. ಬಳ್ಳಾರಿ ಸಿದ್ದಮ್ಮ, ಎಸ್. ನಿಜಲಿಂಗಪ್ಪ ಸೇರಿದಂತೆ ನೂರಾರು ನಾಯಕರು ಹೋರಾಟ ಮುಂದುವರಿಸಿದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸಹ ನಮ್ಮ ಊರಿಗೆ ಬಂದರು. ಈಗಿನ ಹೈಸ್ಕೂಲ್ ಮೈದಾನದಲ್ಲಿ ಬಹಿರಂಗ ಭಾಷಣ ಮಾಡಿದ್ದರು. ಇಲ್ಲಿನ ಮಹಾತ್ಮ ಗಾಂಧಿ ಶಾಲೆಯಲ್ಲಿ ತಂಗಿದ್ದರು. ಹರಿಜನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕಟ್ಟುವ ಷರತ್ತು ವಿಧಿಸಿ ಗಾಂಧಿ ನಗರಕ್ಕೆ ಬಂದಿದ್ದರು.

ಎಷ್ಟು ರೋಚಕ ಅಲ್ಲವಾ ನಮ್ಮ ದಾವಣಗೆರೆ ಸ್ವತಂತ್ರ ಹೋರಾಟ. ನೀವು ಓದಿದ್ದರೆ ಮುಂದೆ ಇತರರು ಓದಲು ಶೇರ್ ಮಾಡಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ