ದಿನಕ್ಕೊಂದು ವಚನ-ಬಸವಣ್ಣನವರು 66ನೇ ವಚನ



ನೀನೊಲಿದರೆ ಕೊರಡು ಕೊನರುವುದಯ್ಯಾ
ನೀನೊಲಿದರೆ ವಿಷವೆ ಅಮೃತವಹುದಯ್ಯಾ
ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿರ್ಪುವು,
ಕೂಡಲಸಂಗಮದೇವಾ.
ನೀನೊಲಿದರೆ ಬರಡು ಹಯನಹುದಯ್ಯಾ


ಪಕ್ಕಾ ತಾರ್ಕಿಕ ವಿಚಾರಗಳನ್ನೇ ಮುಂದಿಟ್ಟು ಕ್ರಾಂತಿಮಾಡಿದ ಶರಣರು ಜನರನ್ನು ಏಕಾಏಕಿ ಬದಲಾಯಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದಿದವರು. ಇದೇ ಕಾರಣಕ್ಕೆ ಅವರು ದೇವರ ಕಲ್ಪನೆಯನ್ನು ತಮ್ಮದೇ ರೀತಿಯಲ್ಲಿ ಕಟ್ಟಿಕೊಡುತ್ತಾ ಜನರನ್ನು ಸರಿ ದಾರಿಗೆ ತರಲು ಯತ್ನಿಸಿದರು.

ಬಸವಣ್ಣನವರು ಈ ವಚನದಲ್ಲಿ ಇದನ್ನೇ ಹೇಳುತ್ತಾರೆ. ಆತ್ಮಲಿಂಗ ಎಂಬ ದೇವರು ಒಲಿದರೆ ಏನು ಬೇಕಿದ್ದರೂ ಆಗುತ್ತದೆ. ಆತ್ಮಲಿಂಗ ಎಂಬ ದೇವರು ಎಂದರೆ ಇಲ್ಲಿ ಎಲ್ಲೋ ಪರಲೋಕದಲ್ಲಿರುವ ದೇವರು ಎಂದರ್ಥ ಅಲ್ಲ. ವಚನಕಾರರ ಕೆಲ ವಚನಗಳು ಪಟ್ಟಭದ್ರರಿಂದ ವಿರೂಪಗೊಂಡ ಕಾರಣ ಅಲ್ಲಲ್ಲಿ ದೇವರು ದಿಂಡರ ಹೆಸರನ್ನು ತಪ್ಪಾಗಿ ಬಳಿಸಿದ ಅನುಭವ ವಚನ ಓದಿದಾಗ ಆಗುತ್ತದೆ. ಇಲ್ಲೂ ಇಂತಹ ಪ್ರಮಾದಕ್ಕೆ ಅವಕಾಶ ಇದೆ.

ಇಲ್ಲಿ ಬಸವಣ್ಣ ಹೇಳುವುದು ನೀನು ಒಲಿದರೆ ಕೊರಡು ಕೊನವುದಯ್ಯಾ ಅಂದರೆ ಅರ್ಥ; ನೀನು ಒಲಿದರೆ ಒಣಗಿದ ಮರದ ಕೊಂಬೆ ಸಹ ಜಿಗುರುಬಲ್ಲದು ಎಂದು. ನಮಗೆ, ನಿಮಗೂ ಗೊತ್ತೇ ಇದೆ. ಯಾವುದೇ ಕಾರಣಕ್ಕೆ ಒಮ್ಮೆ ಮರ ಒಣಗಿದರೆ ಮತ್ತೆ ಚಿಗುರದು; ಆದರೆ, ಒಂದು ವೇಳೆ ಕೂಡಲಸಂಗಮದೇವ ಒಲಿದರೆ ಅಂದರೆ ಕೈಯಲ್ಲಿರುವ ಆತ್ಮಲಿಂಗ ಒಲಿದರೆ ಇದು ಸಾಧ್ಯ ಎನ್ನುತ್ತಾರೆ.

ಇದೇ ನೀರಿ ಬರಡು ಹಯನಹುದಯ್ಯಾ ಅಂದರೆ ಬರವು ಹಸು ನಮ್ಮ ಗ್ರಾಮೀಣ ಭಾಷೆಯಲ್ಲಿ ಗೊಡ್ಡಿ ಎಂದು ಕರೆಯುವ ಹಸು ಒಂದು ವೇಳೆ ಆತ್ಮಲಿಂಗದ ಆಶೀರ್ವಾದ ಸಿಕ್ಕರೆ ಹಯನುವುದಯ್ಯ ಅಂತಾರೆ. ಅಂದರೆ ಹೈನು ನೀಡುವುದು ಎಂದರ್ಥ.

ದೇವರು ಒಲಿದರೆ ವಿಷ ಅಮೃತ ಆಗುತ್ತದೆ.

ನೀನೊಲಿದರೆ ಸಕಲ ಪಡಿಪದಾರ್ಥಗಳು ಇದಿರಲಿರ್ಪುವು ಅಂದರೆ ನಿನ್ನ ಒಲುವೆ ಒಂದಿದ್ದರೆ ಎಲ್ಲಾ ಪದಾರ್ಥಗಳು ನಮ್ಮ ಮುಂದೆ ಇರಲಿವೆ ಎಂಬುದಾಗಿದೆ.

ಒಟ್ಟಾರೆ ಕೂಡಲಸಂಗಮದೇವನೊಲಿದರೆ ಎಲ್ಲವೂ ಸಾಧ್ಯ ಎಂಬುದನ್ನು ಬಸವಣ್ಣನವರು ಈ ವಚನದಲ್ಲಿ ಹೇಳಿದ್ದಾರೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ