ದಿನಕ್ಕೊಂದು ವಚನ- ಬಸವಣ್ಣನವರ ವಚನ
ಒಲೆ ಹತ್ತಿಯುರಿದೊಡೆ ನಿಲಬುಹುದೆ,
ಧರೆ ಹತ್ತಿಯುರಿದೊಡೆ ನಿಲಬಾರದು.
ಏರಿ ನೀರುಣ್ಬೊಡೆ, ಬೇಲಿ ಕೆಯ್ಯೆ ಮೋವೊಡೆ, ನಾರಿ ತನ್ನ ಮನೆಯಲ್ಲಿ ಕಳುವೊಡೆ,
ತಾಯ ಮೊಲೆವಾಲು ನಂಜಾಗಿ ಕೊಲುವೊಡೆ,
ಇನ್ನಾರಿಗೆ ದೂರುವೆ, ಕೂಡಲಸಂಗಮದೇವ
ಮನೆಯಲ್ಲಿನ ಒಲೆ ಹೊತ್ತಿ ಉರಿದರೆ ಸಹಿಸಬಹುದು. ಸಹಸಿಲಾಗದು ಎಂದು ದೂರ ಸರಿಯಬಹುದು. ಆದರೆ, ದರೆಯೇ ಹತ್ತಿ ಉರಿದರೆ!
ಬಸವಣ್ಣನರು ಈ ವಚನದ ಮೂಲಕ ಸಾಮಾಜಿಕ ಜೀವನದಲ್ಲಿ ಮನುಷ್ಯ ಹೇಗಿರಬೇಕು ಎಂಬುದರ ಕುರಿತು ವಿಶ್ಲೇಷಣೆ ಮಾಡುತ್ತಾರೆ. ವಚನಗಳು ಧಾರ್ಮಿಕ ನೆಲೆಗಟ್ಟಲ್ಲಿ ಮಾತ್ರ ವಿಶ್ಲೇಷಣೆ ಆದರೆ ಅವೂ ಸಹಿತ ಮೌಢ್ಯ ಬಿತ್ತಲು ಎಡೆಮಾಡಿಕೊಡುವ ಸಾಧ್ಯತೆ ಇರುತ್ತದೆ.
ಬಸವಣ್ಣ ನನ್ನ ಪ್ರಕಾರ ಇಲ್ಲಿ ಹೇಳಲು ಹೊರಟಿರುವುದು ನಾವೇ ನಮ್ಮ ಸಮಾಜವನ್ನು ಕಟ್ಟಿಕೊಳ್ಳಬೇಕು. ಇಲ್ಲದೇ ಹೋದರೆ ಧರೆಗೆ ಬೆಂಕಿ ಬಿದ್ದಾಗ ನೀರು ಸಂಗ್ರಹಿಸಲೆAದು ಕಟ್ಟೆ ಕಟ್ಟಿದೆಡೆ, ಆ ಕಟ್ಟೆಯೇ ನೀರು ನುಂಗಿದರೆ ಹೇಗೆ? ಇದೇ ರೀತಿ ಹೊಲದ ಬೆಳೆ ಸಂರಕ್ಷಿಸಲು ಬೇಲಿ ಹಾಕಿದರೆ ಅದೇ ಬೇಲಿ ಹೊಲವ ಮೇಯ್ದರೆ ಹೇಗೆ? ಮನೆಯ ಒಡತಿಯೇ ಮನೆಯಲ್ಲಿರುವ ವಸ್ತುಗಳನ್ನು ಕದ್ದರೆ ಏನಾದೀತು? ಹೆತ್ತ ತಾಯಿ ತನ್ನ ಮಗುವಿಗೆ ಕುಡಿಸುವ ಎದೆಹಾಲೇ ನಂಜಾದರೆ ಹೇಗೆ?
ಹೀಗೆ ಬಸವಣ್ಣ ಎತ್ತುವ ಈ ಪ್ರಶ್ನೆಗಳಲ್ಲಿ ಬಹುತೇಕ ನಾಶದ ಕುರಿತು ಪ್ರಸ್ತಾಪ ಮಾಡುತ್ತಾರೆ. ಹೊಲದ ಬೆಳೆ ನಾಶ, ನಂಜಾದ ಹಾಲಿಂದ ಮಗುವಿನ ಆರೋಗ್ಯ ನಾಶ, ನೀರು ಸಂಗ್ರಹಿಸುವ ಕಂದಕ ತಾನೇ ನೀರು ಕುಡಿದರೂ ನಾಶ ಎಂದು ಹೇಳುತ್ತಾರೆ.
ಹಾಗೆಯೇ ಸಾಮಾಜಿಕ ಜೀವನ ಹಸನಾಗಬೇಕು. ಸಮಾಜ ಉತ್ತಮಗೊಳ್ಳಬೇಕಾದರೆ ಎಲ್ಲರೂ ತಮ್ಮ ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು. ಒಂದು ವೇಳೆ ನಮಗೇಕೆ ಎಂದರೆ ಖಂಡಿತಾ ಸಮಾಜ ಶುದ್ಧಗೊಳ್ಳದು ಎಂಬ0ತೆ ಬಸವಣ್ಣ ಈ ವಚನದಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ