ವಚನ ವಿಶ್ಲೇಷಣೆ- ದಿನಕ್ಕೊಂದು ವಚನ



12ನೆಯ ಶತಮಾನದಲ್ಲಿ ಬದುಕು ಬಾಳಿ, ಸಾಮಾಜಿಕ ಕ್ರಾಂತಿ ಮಾಡಿದ ಬಸವಾದಿ ಶರಣರು ನಮ್ಮ ಕರ್ನಾಟಕವನ್ನು ಇಡೀ ಪ್ರಪಂಚಕ್ಕೆ ಭಿನ್ನ ಎಂಬುದಾಗಿ ತೋರಿಸಿಕೊಟ್ಟಿದ್ದಾರೆ. ಅವರ ಜೀವನ, ಸಾಧನೆ, ಗುರಿ, ಉದ್ದೇಶ, ವಚನಗಳು ನಿಜಕ್ಕೂ ನಮ್ಮ ಮುಂದಿನ ಸಾಮಾಜಿಕ ಜೀವನ ಕಟ್ಟಿಕೊಳ್ಳಲು ದಾರಿದೀಪ. ಆದರೆ, ಅಂತಹವರ ಜೀವನ ಕುರಿತು ಹೆಚ್ಚು ಓದಲು ಹೋಗಿಲ್ಲ.

ಇಂದು ನಾವು ಸಾಕ್ಷರತೆ ಬಗ್ಗೆ ಮಾತನಾಡುತ್ತೇವೆ. ಆದರೆ, 12ನೇ ಶತಮಾನದಲ್ಲಿಯೇ ನಮ್ಮ ಕನ್ನಡ ದೇಶದ ನಾಗರಿಕರು ಎಷ್ಟು ಪ್ರಬುದ್ಧರು ಎಂಬುದಕ್ಕೆ ಬಸವಾದಿ ಶರಣರ ಚಿಂತನೆಗಳು ಸಾಕು ಎನ್ನಿಸುತ್ತದೆ. ಎಲ್ಲಾ ಕುಲ, ಜಾತಿಗರು ಒಟ್ಟಾಗಿ ಕಟ್ಟಿದ ಅನುಭವ ಮಂಟದಲ್ಲಿನ ಅನುಭಾವವೇ ವಚನಗಳು. ಅಂತಹ ವಚನಗಳನ್ನು ಪರಿಚಯಿಸುವ ಕಾರ್ಯವನ್ನು ನಮ್ಮ ಪ್ರಜಾಸಾಕ್ಷಿ ತಂಡ ಮಾಡಲಿದೆ. ಬಸವಣ್ಣನವರ ಮೊದಲ ವನಚದೊಂದಿಗೆ ಈ ಕಾರ್ಯ ಆರಂಭ ಆಗಲಿದೆ. ದಿನಕ್ಕೊಂದು ವಚನ ನಿಮ್ಮ ಮುಂದೆ ಅರ್ಥ ಸಹಿತ ಇರಲಿದೆ.


ಉದಕದೊಳಗೆ ಬಚ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತು

ಸಸಿಯೊಳಗಣ ರಸದ ರುಚಿಯಂತಿದ್ದಿತ್ತು

ನನೆಯೊಳಗಳ ಪರಿಮಳದಂತಿದ್ದಿತ್ತು

ನಿಲುವು ಕೂಡಲಸಂಗಮದೇವಾ ಕನ್ಯೆಯ ಸ್ನೇಹದಂತಿದ್ದಿತ್ತು


ಉದಕದೊಳಗೆ ಬಚ್ಚಿಟ್ಟ ಬಯ್ಕೆಯ ಕಿಚ್ಚು ಅಂದರೆ ಬೆಂಕಿ ಹಾಕಿ ಕಾಯಿಸಿದ ನೀರಿನಲ್ಲಿರುವ ಶಾಖ. ಇನ್ನು ವಿವರವಾಗಿ ಹೇಳುವುದಾದರೆ ಕಾದ ನೀರಿನಲ್ಲಿ ಕಿಚ್ಚು ಬಚ್ಚಿಟ್ಟುಕೊಂಡಂತೆ.

ಸಸಿಯೊಳಗಣ ರಸದ ರುಚಿಯಂತೆ ಅಂದರೆ ನಮ್ಮಲ್ಲಿರುವ ಹಲವು ಮರ, ಗಿಡ ಹಣ್ಣು ಕೊಡುತ್ತವೆ. ಅವು ರುಚಿಯಾಗಿರುತ್ತವೆ. ಆ ರುಚಿ ರಸದ ರೂಪದಲ್ಲಿ ಇರುತ್ತದೆ. ಅದು ಕಣ್ಣಿಗೆ ಕಾಣಲ್ಲ ಎಂದರ್ಥ.

ನನೆಯೊಳಗಳ ಪರಿಮಳ ಎಂಬುದರರ್ಥ; ಮೊಗ್ಗು ಸೂಸುವ ಸುವಾಸನೆ. ನನೆ ಎಂದರೆ ಮೊಗ್ಗು.

ಕೊನೆಯ ಸಾಲಲ್ಲಿ ನಿಲುವು ಕೂಡಲಸಂಗಮದೇವಾ ಕನ್ನೆಯ ಸ್ನೇಹದಂತಿತ್ತು ಅಂದರೆ ಕೂಡಲಸಂಗಮದೇವ ಎಂದರೆ ಯಾರು ಎಂಬುದನ್ನು ಮೊದಲ ವಚನದಲ್ಲಿ ಬಸವಣ್ಣನವರು ವಿವರಿಸಿದ್ದಾರೆ.

ಕೂಡಲಸಂಗಮದೇವ ಎಂದರೆ ಕಣ್ಣಿಗೆ ಕಾಣಲ್ಲ. ಅದು ಹೇಗೆ ಎಂದರೆ ಬಿಸಿ ನೀರಿನಲ್ಲಿರುವ ಕಿಚ್ಚಿನ ಹಾಗೆ, ಹಣ್ಣು, ಫಲ, ಸಸಿಯಲ್ಲಿರುವ ರಸದ ರುಚಿಯಂತೆ, ಮೊಗ್ಗಿನ ಒಳಗೆ ಇರುವ ಪರಿಮಳದಂತೆ, ಕನ್ನೆಯ ಸ್ನೇಹದಿಂದ ಸಿಗುವ ಅನುಭಾವದಂತೆ ಎಂದು ಬಸವಣ್ಣನವರು ಕೂಡಲ ಸಂಗಮದೇವನ ಕುರಿತು ವಿಶ್ಲೇಷಿಸುತ್ತಾರೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ