ದಿನಕ್ಕೊಂದು ವಚನ- ಬಸವಣ್ಣನವರ 346ನೇ ವಚನ

ಚೆನ್ನಯ್ಯನ ಮನೆಯ ದಾಸಿಯ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇಬವರಿಬ್ಬರು ಹೊಲದಲಿ ಬೆರಣಿಗೆ ಹೋಗಿ ಸಂಗವ ಮಾಡಿದರು
ಇವರಿಬ್ಬರಿಗೆ ಹುಟ್ಟಿದ ಮಗ ನಾನು
ಕೂಡಲಸಂಗಮದೇವ ಸಾಕ್ಷಿಯಾಗಿ



ಬಸವಣ್ಣನವರ ವಿಶಾಲ ಸಮಷ್ಠಿ ಏಕತೆ. ಉಚ್ಛ, ನೀಚ ಎಂಬ ಭೇಧ ಭಾವ ಕಟು ವಿರೋಧಿತನ ಈ ವಚನದಲ್ಲಿ ಪ್ರಾಪ್ತಿ ಆಗುತ್ತದೆ. ಅವರು ಬ್ರಾಹ್ಮಣ ಜಾತಿ ತೊರೆದು ಹೊಸ ಪಥದತ್ತ ನಡೆದರೂ ಕೂಡ ಹಲವು ಅವರನ್ನು ಬ್ರಾಹ್ಮಣ ಕುಲದಲ್ಲಿ ಹುಟ್ಟಿದವರು ಎಂಬ ಕಾರಣಕ್ಕೆ ಗೌರವ ಕೊಡುತ್ತಿರುತ್ತಾರೆ. ಇದನ್ನು ನಿವಾರಿಸಲು ಬಸವಣ್ಣ ಈ ರೀತಿ ಹೇಳುತ್ತಾರೆ.

ಮಾದಾರ ಚೆನ್ನೆಯ್ಯ, ಡೋಹರ ಕಕ್ಕಯ್ಯನವರ ಮನೆಯಲ್ಲಿ ಹುಟ್ಟಿದವರಿಗೆ ನಾನು ಹುಟ್ಟಿದೆ ಎನ್ನುವ ಮೂಲಕ ನಾನು ನಿಮ್ನರಲ್ಲಿ ನಿಮ್ನ ಎನ್ನುತ್ತಾರೆ ಬಸವಣ್ಣ. 

ಬಹುಶಃ ಬಸವಣ್ಣರಂತಹ ವಿಶಾಲ ಮನೋಭಾವ, ಏಕತೆ ಸಾಧಿಸುವ ಪರಿ ಅರಿತ ಪಂಡಿತರು, ಸಮಾನತೆ ಪ್ರದಿಪಾದಿಸುವ ಆಳ ಚಿಂತನೆ ಮಾಡಿದ ಚಿಂತಕರು ಸಿಗಲಾರರು. ಮಾದಾರ ಚೆನ್ನಯ್ಯನ ಮನೆಯಲ್ಲಿ ಹುಟ್ಟಿದ ಮಗ, ಕಕ್ಕಯ್ಯನ ಮನೆಯಲ್ಲಿ ಹುಟ್ಟಿದ ಮಗಳು ಹೊಲದಲ್ಲಿ ಸಂದಿಸಿದಾಗ ನಾನು ಜನ್ಮತಳೆದೆ. ಸಂದಿಸುವ ವಿಷಯದಲ್ಲೂ ಅವರು ನಿಮ್ನತೆಯನ್ನು ತಪ್ಪಲ್ಲ ಎಂದು ಎತ್ತಿಹಿಡಿಯುವ ಪರಿ ದೊಡ್ಡದು. ನನ್ನ ಈ ನಿಮ್ನ ಹುಟ್ಟಿಗೆ ಕೂಡಲ ಸಂಗಮವನೇ ಸಾಕ್ಷಿ ಎಂದು ಬಸವಣ್ಣ ಹೇಳುತ್ತಾರೆ.

ಒಮ್ಮೊಮ್ಮೆ ಈ ವಚನ ದಾರಿ ತಪ್ಪಿಸುವ ರೀತಿಯಲ್ಲೂ ವಿಶ್ಲೇಷಣೆ ಆಗುತ್ತದೆ. ಬಸವಣ್ಣ ನಿಜಕ್ಕೂ ಬ್ರಾಹ್ಮಣ ಕುಲದಲ್ಲಿ ಹುಟ್ಟೇ ಇಲ್ಲ ಎಂಬುದಾಗಿ ತಪ್ಪಾಗಿ ವಿಶ್ಲೇಷಣೆ ಮಾಡಲ್ಪಡುತ್ತದೆ. ಆದರೆ, ಇದು ಸತ್ಯ ಅಲ್ಲ ಎಂದು ಹಲವು ಪಂಡಿತರು ಪ್ರತಿಪಾದಿಸುತ್ತಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ