ದಿನಕ್ಕೊಂದು ವಚನ- ಬಸವಣ್ಣನವರ 56ನೆಯ ವಚನ

 ದಿನಕ್ಕೊಂದು ವಚನ- ಬಸವಣ್ಣನವರ 56ನೆಯ ವಚನ



ಅಯ್ಯಾ, ಅಯ್ಯಾ ಎಂದು ಕರೆಯುತ್ತಲಿದ್ದೇನೆ;
ಅಯ್ಯಾ ಅಯ್ಯಾ ಎಂದೊರಲುತ್ತಲಿದ್ದೇನೆ;
ಓ ಎನ್ನಲಾಗದೆ, ಅಯ್ಯಾ?
ಆಗಳೂ ನಿಮ್ಮುವ ಕರೆಯುತಲಿದ್ದೇನೆ;
ಮೌನವೇ ಕೂಡಲ ಸಂಗಮದೇವ?


ಬಸವಾದಿ ಶರಣರ ತಾರ್ಕಿಕ ಪ್ರತಿಪಾದನೆಯನ್ನು ಅಲುಗಾಡಿಸುವ ಉದ್ದೇಶದಿಂದಲೇ ಈ ವಚನ ಕ್ರಾಂತಿಯನ್ನು 4 ಶತಮಾನಗಳ ಕಾಲ ಮುಚ್ಚಿಡಲಾಗಿತ್ತು. ಲಿಂಗಾಯತ ಸಮಾಜಕ್ಕೆ ಬಸವ ಎಂದರೆ ಶಿವನ ಮುಂದಿರುವ ನಂದಿ ಎಂಬಂತೆ ಬಿಂಬಿಸಲಾಗಿತ್ತು. ಇದರ ಜೊತೆಗೆ ವಚನಗಳನ್ನು ತಿದ್ದುವ, ಬದಲಾಯಿಸುವ ಕಾರ್ಯ ಸಹ ನಡೆದಿತ್ತು ಎಂಬ ಮಾತುಗಳು ಪದೇ ಪದೇ ಕೇಳಿಬರುತ್ತವೆ. ಅಂತಹುದ್ದೆ ನಡೆದಿರಬಹುದು ಎಂಬ ಅಂಶಕ್ಕೆ ಒತ್ತುಕೊಡುವ ಹಲವು ವಚನಗಳ ಪೈಕಿ ಈ ವಚನವೂ ಒಂದಿರಬಹುದೇ? ಎಂಬ ಪ್ರಶ್ನೆ ಮೂಡುತ್ತದೆ.

ಈ ವಚನದ ಪ್ರಕಾರ ಬಸವಣ್ಣನವರು ಕೂಡಲಸಂಗಮದೇವರನ್ನು ಕರೆಯುತ್ತಾರೆ. ಈ ಭೂಮಿಗೆ ನನ್ನನ್ನು ಕರೆತಂದವ ನೀನು. ಇಲ್ಲಿಯವರೆಗೆ ನೀನು ನಿನ್ನ ಮುಖವನ್ನೂ ಸಹ ನನಗೆ ತೋರಿಸಿಲ್ಲ. ನಾನು ಬಹು ಎತ್ತರದಿಂದ ನೆಲಕ್ಕೆ ಬಿದ್ದು ನೋವಿಗಿಂದ ನೀವು ಕಾಣುತ್ತಿಲ್ಲ ಎಂಬ ಕಾರಣಕ್ಕೆ ಅಯ್ಯಾ ಅಯ್ಯಾ ಎಂದು ಕರೆಯುತ್ತಿದ್ದೇನೆ. ನೀವು ಮಾತ್ರ ನನ್ನ ದನಿಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ಬಿಡುವಿಲ್ಲದ ಕೆಲಸ ಇದ್ದರೆ ಒಮ್ಮೆ ಅಲ್ಲಿಂದಲೇ ಓಗುಟ್ಟುಬಿಡು ಎಂದು ಬಸವಣ್ಣ ಈ ವಚನದಲ್ಲಿ ಪರಿಪರಿಯಾಗಿ ಬೇಡುತ್ತಾರೆ.


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ