ದಿನಕ್ಕೊಂದು ವಚನ:ಬಸವಣ್ಣನವರ 59ನೇ ವಚನ


ಅತ್ತಲಿತ್ತಲು ಹೋಗದಂತೆ ಹೆಳವನ ಮಾಡಯ್ಯಾ, ತಂದೆ;
ಸುತ್ತಿಸುಳಿದು ನೋಡದಂತೆ ಅಂಧಕನ ಮಾಡಯ್ಯಾ, ತಂದೆ;
ಮತ್ತೊ0ದ ಕೇಳದಂತೆ ಕಿವುಡನ ಮಾಡಯ್ಯಾ, ತಂದೆ;
ನಿಮ್ಮ ಶರಣ ಪಾದವಲ್ಲದೆ
ಅನ್ಯ ವಿಷಯಕ್ಕೆಳಸದಂತೆ ಇರಿಸು, ಕೂಡಲಸಂಗಮದೇವಾ!



ಇದೊ0ದು ಸಾಕಷ್ಟು ಜನಪ್ರಿಯವಾದ ವಚನ. ಹಲವು ವಚನಗಳು ಇದೇ ರೀತಿ ಎಲ್ಲರ ಬಾಯಲ್ಲೂ ಬರುತ್ತವೆ. ಹಾಗೆ ಬರಲು ಪ್ರಮುಖ ಕಾರಣ ಸಿರಿಗೆರೆಯ ಶ್ರೀತರಳಬಾಳು ಬೃಹನ್ಮಠ. ವಿಶೇಷವಾಗಿ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಕಾರಣ. ಇದರ ಜೊತೆಗೆ ಚಿತ್ರದುರ್ಗದ ಮುರುಘಾ ಮಠದ ಕೊಡುಗೆ ಸಹ ಇದೆ. ವಚನಗಳಿಗೆ ರಾಗ ಸಂಯೋಜಿಸಿ, ಕರಣಾನಂದ ಆಗುವ ರೀತಿ ಗಾಯನ ಮಾಡಿಸಿ, ಪ್ರಸ್ತುತ ಪಡಿಸಿದ ಕಾರಣಕ್ಕೆ ಈ ವಚನಗಳು ಜನರ ಬಾಯಲ್ಲಿ ಗುನುಗುವಂತೆ ಆದವು.

ಅದೇನೆ ಇರಲಿ; ಇದೀಗ ಈ ವಚನದ ವಿಚಾರಕ್ಕೆ ಬರೋಣ. ಇದೇನು ಶರಣ ಬಸವಣ್ಣ ಈ ರೀತಿ ನನ್ನ ಕುಂಟನನ್ನು ಮಾಡು, ಕುರುಡನನ್ನಾಗಿಸು, ಕಿವುಡನನ್ನಾಗಿಸು, ನಿಮ್ಮ ಪಾದದಲ್ಲಿರಿಸುವ ಎಂದೆಲ್ಲಾ ಕೇಳಿಕೊಂಡಿದ್ದಾರಲ್ಲ. ಈ ರೀತಿ ಪ್ರಾರ್ಥಿಸುವುದು ತರವಲ್ಲ ಅಲ್ಲವೇ? ಎಂಬ ಪ್ರಶ್ನೆ ಈ ವಚನ ಓದಿದವರಿಗೆ ಮೂಡುತ್ತದೆ.

ಆದರೆ, ಬಸವಣ್ಣನವರು ಈ ರೀತಿ ಹೇಳಿದ್ದಲ್ಲ; ಕೆಟ್ಟದ್ದರಿಂದ ದೂರ ಇರಿಸು ನನ್ನನ್ನು ಎನ್ನಲು ಈ ರೀತಿ ಹೇಳಿದ್ದಾರೆ. ಬಸವಣ್ಣನವರ 131ನೇ ವನಚ ಹೇಳುತ್ತದೆಯಲ್ಲಾ. "ಛಲ ಬೇಕು ಶರಣಂಗೆ....." ಅಂತಹುದ್ದೇ ಧಾಟಿಯ ವಚನ ಇದು.

ಅಯ್ಯಾ ಕೂಡಲಸಂಗಮದೇವ ನಾನು ಸಿಕ್ಕ ಸಿಕ್ಕ ಕಡೆ ಹೋಗಿ ದಾರಿ ತಪ್ಪುವ ಸ್ಥಿತಿ ಬಂದರೆ ನೀನು ನನ್ನನ್ನು ತಕ್ಷಣ ಕುಂಟ(ಹೆಳವ)ನನ್ನಾಗಿ ಮಾಡಿಬಿಡು. ಬೇಡವಾಗಿದ್ದನ್ನು ನೋಡುವ ಸ್ಥಿತಿ ಬಂದರೆ ಆಗ್ಗೆ ಮಾತ್ರ ನನ್ನ ಕುರುಡನನ್ನಾಗಿ ಮಾಡಿಬಿಡು. ಇದೇ ರೀತಿ ಬೇಡವಾಗಿದ್ದನ್ನು ಕೇಳುವ ಸ್ಥಿತಿ ಬಂದರೆ ಕಿವುಡನ ಮಾಡು. 

ಇನ್ನು ಕೊನೆಯ ಸಾಲಲ್ಲಿ ನಿಮ್ಮ ಶರಣರನ ಪಾದವಲ್ಲದೆ ಅನ್ಯ ವಿಷಯಕ್ಕೆಳೆಸದಂತೆ ಇರಿಸು ಎಂಬುದರ ಅರ್ಥವನ್ನು ನಕಾರಾತ್ಮಕವಾಗಿ ನೋಡಬಾರದು. ಇಲ್ಲಿ ಬಸವಣ್ಣನವರು ಹೇಳುವುದು ಅನ್ಯ ವಿಷಯ ಎಷ್ಟೇ ದೊಡ್ಡದೆನ್ನಿಸಿದರೂ ನಾನು ಮಾತ್ರ ನಿಮ್ಮ ಪಾದದ ಸೇವಕನಂತೆ ಇರುವೆ ಎಂದು ಬಸವಣ್ಣ ಕೂಡಲಸಂಗನಲ್ಲಿ ಹೇಳುತ್ತಾರೆ. ಇದರರ್ಥ ನಾನು ಶಣರನಾಗಿ ಬದುಕಲು ಒಪ್ಪಿದ ಮೇಲೆ ಮೋಹ, ಮಾತ್ಸರ್ಯ ಮುಂತಾದ ತಾಮಸ ಗುಣಗಳಿಂದ ಮುಕ್ತನಾಗಿರುವೆ. ಅನ್ಯ ಮಾರ್ಗದಲ್ಲಿ ಹೋದರೆ ಇಂತಹ ಪ್ರಾಪಂಚಿಕ ಸುಖಗಳ ಕಡೆ ಹೋಗುವ ಸಾಧ್ಯತೆ ಇದ್ದೇ ಇದೆ ಆಗ ನಾನು ನಿಮ್ಮ ಪಾದ ಸೇವಕನಾಗಲು ಇಷ್ಟ ಪಡುವೆ ಎಂದು ಬಸವಣ್ಣ ಹೇಳುತ್ತಾರೆ.

ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ವಿಶ್ಲೇಷಣೆ ಮಾಡಿದ ಹಾಗೆ ಹೇಳುವುದಾದರೆ ಈ ವಚನ ಶರಣ ಪಥಕ್ಕೆ ಬಂದ ಅಪಕ್ವರಿಗೆ ದಾರಿದೀಪ. ಸಾಹಸ ಮಾಡಿ ಗೆಲ್ಲುವ ಬದಲು ಮೊದಲು ಅಡಿಯಿಡುವಾಗಲೇ ಎಚ್ಚರಿಕೆ ವಹಿಸಬೇಕು. ಒಮ್ಮೆ ಪಕ್ವವಾದ ಮೇಲೆ ಇಂತಹ ವಿಚಾರಗಳ ಬಗ್ಗೆ ಗಮನ ಹರಿಸಬೇಕು ಎಂಬುದು ಅಣ್ಣ ಬಸವಣ್ಣನವರ ಇಂಗಿತ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ