ದಿನಕ್ಕೊಂದು ವಚನ ಬಸವಣ್ಣನವರ 241ನೇ ವಚನ



ಏನಿ ಬಂದಿರಿ, ಹದುಳವಿದ್ದಿರೆ? ಎಂದರೆ ನಿಮ್ಮ ಮೈ ಸಿರಿ ಹಾರಿಹೋಹುದೆ?
ಕುಳ್ಳಿರೆಂದರೆ ನೆಲ ಕುಳಿಹೋಹುದೆ?
ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿರ್ದೆಡೆ
ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲಸಂಗದೇವನು?

ಮನೆಗೆ ಬಂದವರನ್ನು ಸತ್ಕರಿಸುವುದು ಭಾರತೀಯ ಸಂಪ್ರದಾಯದಲ್ಲಿ ಅವ್ಯಾಹತವಾಗಿ ನಡೆದ ಬಂದಿರುವ ಒಂದು ಶಿಷ್ಟಾಚಾರ. ಮನೆಗೆ ಬಂದವರನ್ನು ಉಪೇಕ್ಷಿಸದೆ ಉಪಚರಿಸಬೇಕು. ಅಹಂಕಾರ, ಐಶ್ವರ್ಯ, ಮದದಿಂದ ವರ್ತಿಸುವುದು ಸಲ್ಲ. ಬಂದವರನ್ನು ಹೇಗಿದ್ದೀರಾ? ಸುಖವಾಗಿರುವಿರಾ? ಎಂದು ಕುಶಲ ವಿಚಾರಿಸುವುದು ನಮ್ಮ ಪದ್ಧತಿ ಎಂದು ಬಸವಣ್ಣನವರು ಹೇಳುತ್ತಾರೆ.

ಮನೆಗೆ ಬಂದವರನ್ನು ಕುಳಿತುಕೊಳ್ಳಿ ಎಂದು ಕೇಳುವುದು. ಇದರಿಂದೇನು ನೆಲ ಕುಳಿ ಬೀಳುವುದೆ? ಎಂದು ಬಸವಣ್ಣನವರು ಪ್ರಶ್ನಿಸುತ್ತಾರೆ. ಒಟ್ಟಾರೆ ಇಡೀ ವಚನದಲ್ಲಿ ಬಸವಣ್ಣನವರು ಮನೆಗೆ ಬಂದವರೊಡನೆ ಹೇಗೆ ವರ್ತಿಸಬೇಕು ಎಂಬುದನ್ನು ಬಸವಣ್ಣನವರು ವಿವರಿಸುತ್ತಾರೆ.

ಎಲ್ಲರೊಂದಿಗೆ ವಿನಯದೊಂದಿಗೆ ವರ್ತಿಸಬೇಕು. ಪರಸ್ಪರ ಕುಶಲ ವಿಚಾರಿಸಬೇಕು. ಯಾರೇ ಆದರೂ ಅವರ ಅಂತಸ್ತು, ಹಣ, ಜಾತಿ ಆಧಾರದಲ್ಲಿ ಯಾರನ್ನೂ ಸಹಿತ ಕೀಳಾಗಿ ನೋಡಬಾರದು ಎಂದು ಈ ವಚನದಲ್ಲಿ ಹೇಳುತ್ತಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ