ಬಳ್ಳಾರಿಯಿಂದ ವಂದೇ ಭಾರತ್ ರೈಲು ಆರಂಭಿಸಲು ಸ್ವಾಮಿ ಒತ್ತಾಯ
ಬ
ಬಳ್ಳಾರಿ;ಬಳ್ಳಾರಿಯಿಂದ ಬೆಂಗಳೂರು, ಬಿಜಾಪುರ ಮುಂತಾದ ಕಡೆ ವಂದೇ ಭಾರತ್ ರೈಲು ಸಂಚರಿಸುವಂತೆ ಮಾಡಲು ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಮಹೇಶ್ವರ ಸ್ವಾಮಿ ಪ್ರಧಾನಿ ನರೇಂದ್ರ ಮೋದಿ, ರಲ್ವೆ ಸಚಿವ, ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾವಿರಾರು ಕೋಟಿ ರು. ಆದಾಯ ನೀಡುವ ಬಳ್ಳಾರಿಯಿಂದ ವಂದೇ ಭಾರತ್ ರೈಲು ಆರಂಭಿಸಬೇಕು.
ವಂದೇ ಭಾರತ್ ರೈಲು ಬೆಳಗಿನ ಜಾವ 4 ಗಂಟೆಗೆ ಹುಬ್ಬಳ್ಳಿ, ಇಲ್ಲವೇ ಬಿಜಾಪುರದಿಂದ ಸಂಚಾರ ಆರಂಭಿಸಬೇಕು. ಬೆಳಗಿನ ಜಾವ 5.30ಕ್ಕೆ ಹೊಸಪೇಟೆ ತಲುಪಬೇಕು. ಬೆಳಗ್ಗೆ 6.30ಕ್ಕೆ ಬಳ್ಳಾರಿಗೆ ಬಂದು ಗುಂತಕಲ್, ಅನಂತಪುರ ಮೂಲಕ ಬೆಂಗಳೂರಿಗೆ ಹೋಗಬೇಕು. ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ತಲುಪುವ ಹಾಗೆ ಮತ್ತು ರಾತ್ರಿ 10 ಗಂಟೆ ವೇಳೆಗೆ ಬಳ್ಳಾರಿ ತಲುಪಬೇಕು.
ವಿಶ್ವ ವಿಖ್ಯಾತ ಹಂಪಿ ನೋಡಲು ಬರುವ ಪ್ರವಾಸಿಗರಿಗೆ ಈ ರೈಲು ಸಹಕಾರಿ. ಅಷ್ಟೇ ಅಲ್ಲ ಯಲಹಂಕ ರೈಲು ನಿಲ್ದಾಣದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬರೀ 10 ಕಿಮೀ ದೂರ ಇರುವುದರಿಂದ ಈ ಭಾಗದ ಜನರು ಅಂತಾರಾಷ್ಟ್ರೀಯ ವಿಮಾನದಲ್ಲಿ ಪಯಣಿಸಬಹುದು.
ಶಿವಮೊಗ್ಗ, ಹುಬ್ಬಳ್ಳಿ, ಮೈಸೂರಿನಿಂದ ಬೆಂಗಳೂರಿಗೆ ಉದಯ ರೈಲು ಇವೆ. ಬಳ್ಳಾರಿಯಿಂದ ಇಲ್ಲ. ಈಗಾಗಲೇ ನೈರುತ್ಯ ರಲ್ವೇ ವಲಯದಿಂದ ಚೆನ್ನೈನಿಂದ ಬೆಂಗಳೂರು, ಮೈಸೂರಿನಿಂದ ಚೆನ್ನೈಗೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಿವೆ. ಧಾರವಾಡದಿಂದ ಬೆಂಗಳೂರಿಗೆ ಸಹ ರೈಲು ಇದೆ.
ಒಂದು ವೇಳೆ ಬೆಂಗಳೂರಲ್ಲಿ ರೈಲು ನಿಲ್ಲಿಸಲು ಆಗದೆ ಹೋದರೆ ನೇರ ಮೈಸೂರಿಗೆ ಕಳುಹಿಸಬೇಕು. ಇದೇ ರೀತಿ ಗುಂತಕಲ್ ನಲ್ಲಿ ನಿಲುಗಡೆ ಅಸಾಧ್ಯ ಆದರೆ ನೇರ ಅನಂತಪುರಂ ಗೆ ರವಾನೆ ಮಾಡಬಹುದು
ಈ ಭಾಗದ ಎಲ್ಲ ಸಂಸದರು, ರೈಲ್ವೆ ಅಧಿಕಾರಿಗಳು ಸೇರಿ ಒಟ್ಟು 20 ಜನಕ್ಕೆ ಪತ್ರ ಬರೆಯಲಾಗಿದೆ ಎಂದು ಮಹೇಶ್ವರ ಸ್ವಾಮಿ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ