ನದಿಗೆ ಬಂತು ಮತ್ತೆ ಒಂದೂವರೆ ಟಿಎಂಸಿ ನೀರು



ಬಳ್ಳಾರಿ:ತುಂಗಾ ಜಲಾಶಯದಿಂದ ನೀರಿನ ಹರಿವಿನ ಪ್ರಮಾಣ ಇಳಿಕೆಯಾದರೂ ತುಂಗಭದ್ರಾ ಜಲಾಶಯಕ್ಕೆ ನಿನ್ನೆ 1.48 ಟಿಎಂಸಿ ನೀರು ಹರಿದುಬಂದಿದೆ.

ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಜಲಾಶಯದಲ್ಲಿ ಒಟ್ಟು 6.89 ಟಿಎಂಸಿ ನೀರು ಶೇಖರಣೆ ಆಗಿದೆ. ನಿನ್ನೆ ಈ ಪ್ರಮಾಣ 5.41 ಟಿಎಂಸಿಯಷ್ಟು ಇತ್ತು. ಮಂಗಳವಾರ ಬೆಳಗಿನ ಜಾವ 9 ಗಂಟೆ ವೇಳೆಗೆ 13,842 ಕುಸೆಕ್ನೀ ರು ಹರಿದುಬಂದಿತ್ತು. ಇಂದು ಬೆಳಗ್ಗೆ 9 ಗಂಟೆ ವೇಳೆಗೆ 17,383 ಕುಸೆಕ್ ನೀರು ಹರಿದುಬಂದಿತ್ತು. ತುಂಗಾ ಒಳ ಹರಿವು ಬುಧವಾರ 4690 ಕುಸೆಕ್ ಗೆ  ಇಳಿದಿದೆ. 

ತುಂಗಾ ಜಲಾಶಯದಿಂದ ಹೊರ ಹರಿವು ಇಳಿಕೆಯಾದರೂ ಸಹ ತುಂಗಭದ್ರಾ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಿರುವುದು ತುಂಗಾ ನಂತರ ನದಿ ಪಾತ್ರದಲ್ಲಿ ಉತ್ತಮ ಮಳೆ ಆಗುತ್ತಿದೆ ಎಂಬುದನ್ನು ತೋರುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ