ಕಾಂಗ್ರೆಸ್ ರೈತರ ಯೋಜನೆ ನಿಲ್ಲಿಸಿದೆ:ಬಿಜೆಪಿ


ಬಳ್ಳಾರಿ: ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ಮೇಲೆ ರೈತ ಪರ ಹಲವು ಯೋಜನೆಗಳನ್ನು ರದ್ದು ಮಾಡಲಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುಲಿಂಗನಗೌಡ ಆರೋಪಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಎಲ್ಲಿ ಬೇಕಿದ್ದರೂ ತಮ್ಮ ಉತ್ಪನ್ನ ಮಾರಿಕೊಳ್ಳಲು ಅನುಕೂಲ ಕಲ್ಪಿಸುವ ರೀತಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಲಾಗಿತ್ತು. ಈಗ ಕಾಯ್ದೆ ಹಿಂಪಡೆಯಲು ನಿರ್ಧರಿಸಿದೆ. ಇದರಿಂದ 8% ನಷ್ಟ ರೈತರಿಗೆ ಆಗಲಿದೆ. ಇದು ಅಲ್ಲದೆ ಅನೇಕ ತೊಂದರೆ ಆಗಲಿವೆ. ಮಳೆ, ಗಾಳಿ, ದೂಳಿನ ಸಮಸ್ಯೆ ಎದುರಾಗಲಿವೆ ಎಂದರು.

ಇನ್ನು ಏಕಾಏಕಿ ಕೃಷಿ ಅಧಾರಿತ ಕೈಗಾರಿಕೆಗಳಾದ ಅಕ್ಕಿ ಮಿಲ್, ಬೆಲ್ಲದ ಕಾರ್ಖಾನೆ, ಹತ್ತಿ ಮಿಲ್ ಗಳಿಗೆ ವಿಧಿಸುವ ವಿದ್ಯುತ್ ದರವನ್ನು ಯುನಿಟ್ ಗೆ 70 ಪೈಸೆ ಏರಿಸಲಾಗಿದೆ. ಜೊತೆಗೆ ಕನಿಷ್ಠ ಪಾವತಿ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಇದು ನೇರ ರೈತರ ಮೇಲೆ ಬೀಳಲಿದೆ ಎಂದು ಅವರು ತಿಳಿಸಿದರು.

ಇನ್ನು ಪ್ರತಿ ಹಳ್ಳಿಯಲ್ಲಿ ಒಂದು ಗೋಮಾಳ ನಿರ್ಮಾಣ ಮಾಡುವ ಗುರಿ ಇತ್ತು. ಇದನ್ನು ತಡೆಹಿಡಿಯಲಾಗಿದೆ. ಇದೆ ರೀತಿ ಕಿಸಾನ್ ಸಮ್ಮಾನ ಯೋಜನೆ ನಿಲ್ಲಿಸುವ ಚಿಂತನೆ ಇದೆ ಅಂತೆ. ಯಡಿಯೂರಪ್ಪ ಸರ್ಕಾರ ಇದ್ದಾಗ ಕೇಂದ್ರದ 6 ಸಾವಿರ ರೂ. ಜೊತೆಗೆ 4 ಸಾವಿರ ರೂಪಾಯಿ ಘೋಷಣೆ ಮಾಡಿದ್ದರು. ಇದನ್ನು ಸಹ ನಿಲ್ಲಿಸುವ ಆಲೋಚನೆಯಲ್ಲಿ ಸರ್ಕಾರ ಇದೆ. ಇದರಿಂದ 51ಲಕ್ಷ ಜನ ರೈತರು ಲಾಭ ಪಡೆದುಕೊಂಡಿದ್ದರು ಎಂದು ಅವರು ಹೇಳಿದರು.

ಮೋರ್ಚಾ ಜಿಲ್ಲಾಧ್ಯಕ್ಷ ಕೆ.ರಾಮಲಿಂಗಪ್ಪ, ಪ್ರಕಾಶ್, ಮದುರೈ ಕುಮಾರ ಸ್ವಾಮಿ, ಯರ್ರಅಂಗಳಿ ತಿಮ್ಮಾರೆಡ್ಡಿ ಇತರರು ಇದ್ದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ