ಸಿದ್ದರಾಮಯ್ಯ ಬಜೆಟ್ ಹೇಗಿದೆ ಓದಿ

ಗ್ಯಾರಂಟಿ ಯೋಜನೆಗೆ ಶೇ.16ರಷ್ಟು ಹಣ



ರಾಜ್ಯದ ಬಡ, ಮಧ್ಯಮ ವರ್ಗದ ಒಟ್ಟು 1.30 ಕುಟುಂಬಗಳಿಗೆ 52,000 ಕೋಟಿ ರೂ.ನ ಹಣವನ್ನು ಖರ್ಚುಮಾಡುವ ಗುರಿಯೊಂದಿಗೆ ಮಂಡನೆ ಮಾಡಲಾದ ಸಿದ್ದರಾಮಯ್ಯ ಅವರ ಬಜೆಟ್ ನಿಜಕ್ಕೂ ಬಡ, ಮಧ್ಯಮ ವರ್ಗದ ಪರ ಎಂಬುದನ್ನು ಸಾಬೀತುಮಾಡಿದೆ.

ಚುನಾವಣೆ ಪೂರ್ವದಲ್ಲಿ ನೀಡಿದ್ದ ಐದೂ ಗ್ಯಾರಂಟಿಗಳನ್ನು ಈಡೇರಿಸುವ ಭರವಸೆ ನೀಡಿರುವ ಈ ಬಜೆಟ್‌ನ ಗಾತ್ರ 3 ಲಕ್ಷ 27 ಸಾವಿರ 747 ಕೋಟಿ ರೂ.ನದ್ದು. ಈ ಪೈಕಿ ಶೇ.16ರಷ್ಟು ಅನುದಾನವನ್ನು ಐದು ಗ್ಯಾರಂಟಿಗಳಿಗೆ ಬಳಸುವುದಾಗಿ ಹೇಳುವ ಮೂಲಕ ಸಿದ್ದರಾಮಯ್ಯ ಪ್ರತಿಪಕ್ಷಗಳ ಬಿಟ್ಟಿ ಭಾಗ್ಯದ ಲೇವಡಿಗೆ ಪ್ರತ್ಯುತ್ತರ ನೀಡಿದ್ದಾರೆ.

ತಮ್ಮ ಬಜೆಟ್ ಭಾಷಣದಲ್ಲಿ ಈ ಕುರಿತು ಪ್ರಸ್ತಾಪ ಮಾಡಿದ ಅವರು ಅಂಬೇಡ್ಕರ್ ಹೇಳಿದ ಮಾತನ್ನು ಸ್ಮರಿಸಿದರು. ಭದ್ರತೆ ಖಾತರಿ ಕೊಡದ ಆರ್ಥಿಕ ಯೋಜನೆಯಿಂದ ಯಾವುದೇ ಉಪಯೋಗ ಇಲ್ಲ. ಯೋಜನೆ ಒಪ್ಪಿತವಾಗಬೇಕಾದರೆ, ಅದು ಮಿತವ್ಯಯದ್ದು ಮತ್ತು ಸುಭದ್ರ ಆಗಿರಬೇಕು. ಅದು ಮಿತವ್ಯಯ ಆಗಿರದಿದ್ದರೆ ಬಹಶಃ ನಡೆದೀತು ಆದರೆ, ಸುಭದ್ರವಾಗಿರದಿದ್ದರೆ ಖಂಡತಿ ನಡೆಯುವುದಿಲ್ಲ ಎಂಬ ಅಂಬೇಡ್ಕರ್ ಯುಕ್ತಿಯನ್ನು ಪ್ರತಿಪಕ್ಷಗಳ ಮೇಲೆ ಸಿದ್ದು ಅಸ್ತçವಾಗಿ ಬಳಸಿಕೊಂಡರು.

ಸAಪತ್ತಿನ ಸೃಷ್ಟಿಯ ಜೊತೆಗೆ ಅದನ್ನು ಸಮಾನವಾಗಿ ಹಂಚುವ ಹೊಣೆಯನ್ನು ನಾವು ಹೊರಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ನಡೆದುಕೊಂಡಿದೆ.

ಒಟ್ಟು ಬಜೆಟ್‌ನ 52 ಸಾವಿರ ಕೋಟಿ ರೂ.ಗಳನ್ನು 1.3 ಕೋಟಿ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಕನಿಷ್ಠ 4 ಸಾವಿರದಿಂದ 5 ಸಾವಿರ ಮೌಲ್ಯದ ಮಾಸಿಕ ಸಹಾಯ ಧನ ತಲುಪಲಿದೆ. ವಾರ್ಷಿಕ 48,000 ದಿಂದ 60,000 ರೂ.ವರೆಗೆ ಪ್ರತೀ ಕುಟುಂಬ ಹಣ ಪಡೆಯಲಿದೆ. ಇದರಿಂದ ಬಡ, ಮಧ್ಯಮ ವರ್ಗದ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂಬುದನ್ನು ಅವರು ಪ್ರತಿಪಾದಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ