4000 ಬಸ್ಸುಗಳ ಖರೀದಿ
ಬೆಂಗಳೂರು: ಈಗಾಗಲೇ 5 ರ ಪೈಕಿ ಮೂರು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಶಕ್ತಿ ಯೋಜನೆಯನು ಜೂನ್ 11 ರಿಂದ ಜಾರಿಗೆ ಕೊಟ್ಟಿದ್ದೇವೆ. ಈ ರಾಜ್ಯದ ಹೆಣ್ಣುಮ್ಕಳು ಖುಷಿಯಾಗಿದ್ದಾರೆ. ಇವರಿಗೆ ಮಾತ್ರ ಅಸಂತೋಷ. 49.6 ಲಕ್ಷ ಮಹಿಳೆಯರು ಪ್ರತಿನಿತ್ಯ ಓಡಾಡುತ್ತಿದ್ದಾರೆ. ಉಚಿತ ಬಸ್ಸುಗಳ ಪ್ರಯಾಣ ಹೆಚ್ಚಾಗಿ ನಮ್ಮ ಆದಾಯ ಕೂಡ ಜಾಸ್ತಿಯಾಗಿದೆ. ಕೆಎಸ್‍ಆರ್ ಟಿ ಸಿ ಯಲ್ಲಿ ಪ್ರಯಾಣ ಮಾಡಿರುವ ಟಿಕೆಟ್ ದರವನ್ನು ಸಾರಿಗೆ ಸಂಸ್ಥೆಗೆ ಸರ್ಕಾರ ಕಟ್ಟಿಕೊಡಲಿದೆ. ಈ ಬಗ್ಗೆ ಸಂಶಯ ಬೇಡ ಎಂದರು. 2800 ಕೋಟಿ ರೂ.ಗಳನ್ನು ಸಾರಿಗೆ ಸಂಸ್ಥೆಗೆ ಒದಗಿಸುತ್ತೇವೆ. 13 ಸಾವಿರ ಸಿಬ್ಬಂದಿ ನೇಮಕಾತಿ ಮಾಡಲು ತೀರ್ಮಾನ ಮಾಡಿದ್ದು 4000 ಹೊಸ ಬಸ್ಸುಗಳನ್ನು ಖರೀದಿ ಮಾಡಲಾಗುವುದು ಎಂದರು. .
ಪುರುಷರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು. ಈ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ಜಾರಿಯಾಗುತ್ತಿದೆ. ಷರತ್ತುಗಳನ್ನು ಹಾಕಿದ್ದೇವೆ. ಘೋಷಣೆ ಮಾಡಿದಾಗ ಷರತ್ತುಗಳನ್ನು ಹಾಕಿ ವಿವರ ನೀಡಲಾಗುವುದಿಲ್ಲ. ಈಗ ಮಾಡಿದ್ದೇವೆ. ಮಹಿಳೆಯರು ಖುಷಿಯಾಗಿದ್ದಾರೆ. 50 ಕೋಟಿ ಮಹಿಳೆಯರ ಸಬಲೀಕರಣದ
ಕಾರ್ಯಕ್ರಮವಲ್ಲವೇ? ಆ ದುಡ್ಡು ಉಳಿದರೆ, ದೇವಸ್ಥಾನ, ತವರು ಮನೆ, ಸ್ನೇಹಿತರ ಮನೆಗೆ ಹೋಗುತ್ತಾರೆ. ಹೊರಗೆ ಹೋಗುತ್ತಿದ್ದಾರೆ. ಆನರಿಗೆ ದುಡ್ಡಿರಬೇಕು. ಅದಿದ್ದರೆ ತಾನೇ ಹೊರಗೆ ಹೋಗುತ್ತಾರೆ? ಅದರಿಂದ ತೆರಿಗೆ ಬರುತ್ತದೆ. ಉದ್ಯೋಗ ಸೃಷ್ಟಿಯಾಗುತ್ತದೆ. ಜಿಡಿಪಿ ಬೆಳವಣಿಗೆಯಾಗುತ್ತದೆ. ಅದಕ್ಕೆ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಕರೆಯಲಾಗಿದೆ ಎಂದು ವಿವರಿಸಿದರು.
ಅಧಿಕಾರಕ್ಕೆ ಬಂದ ಕೂಡಲೇ 10 ಜನ ಪ್ರಮಾಣ ವಚನ ಸ್ವೀಕಾರ ಮಾಡಿ ಸಂಪುಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕ್ಕೆ ತೀರ್ಮಾನ ಮಾಡಿ, ಮುಂದಿನ ಸಂಪುಟ ಸಭೆಯಲ್ಲಿಅದರ
ರೂಪುರೇಷೆಗಳನ್ನು ಮಾಡಿದೆವು.
ಗೃಹಜ್ಯೋತಿ ಹಾಗೂ ಗೃಹ ಲಕ್ಷ್ಮಿ ಯೋಜನೆಯಲ್ಲಿ ತಾಂತ್ರಿಕ ಗೊಂದಲಗಳಿದ್ದರೆ ನಿವಾರಣೆ ಮಾಡುತ್ತೇವೆ. 100 ಕ್ಕೆ 100 ಗೊಂದಲ ನಿವಾರಣೆ ಮಾಡಲಾಗುವುದು. ನಮ್ಮ ಉದ್ದೇಶ ಸಾರ್ಥಕವಾಗಬೇಕು. ಅತ್ತೆ ಸೊಸೆಗೆ ಜಗಳ ತಂದಿಟ್ಟಿದ್ದೀರಿ ಎಂಬ ಗೊಂದಲಗಳನ್ನು ಬಿಜೆಪಿ ಸ್ವಲ್ಪ ನಿರ್ಮಾಣ ಮಾಡುತ್ತಿದೆ ಎಂದ ಸಿಎಂ, 1.28 ಕೋಟಿ ಬಿಪಿಎಲ್/ ಎಪಿಎಲ್ ಕಾರ್ಡುದಾರರಿದ್ದಾರೆ. ಈ ಗ್ಯಾರಂಟಿಗಳು 1 ಕೋಟಿ 30 ಲಕ್ಷ ಫಲಾನುಭವಿಗಳಿಗೆ ನೀಡುತ್ತಿದ್ದು, ಒಬ್ಬರಿಗೆ ತಿಂಗಳಿಗೆ 4000-5000 ದೊರೆಯುತ್ತದೆ. 2 ಸಾವಿರ ನೀಡಿರುವುದರಿದ ದುಡ್ಡು ಸಿಕ್ಕು ಆರ್ಥಿಕ ಚಟುವಟಿಕೆ ಬೆಳೆಯುತ್ತದೆ. ಗೃಹಲಕ್ಷ್ಮೀ ಆಗಸ್ಟ್ 16 ರಂದು ಜಾರಿ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಅಬಕಾರಿ ದರ ಹೆಚ್ಚು ಮಾಡಿರೋದು ನಿಜ. ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ 52 ಸಾವಿರ ಕೋಟಿ ರೂ.ಗಳ ಬೇಕು, ಉಳಿದ ಅವಧಿಗೆ 33410 ಕೋಟಿ ಬೇಕು. ಇದನ್ನು ಕ್ರೋಢೀಕರಿಸುವುದು ಹೇಗೆ. ಬಡವರು ಸಾಮಾನ್ಯ ಜನರ ಮೇಲೆ ಭಾರ ಹಾಕದೆ ತೆರಿಗೆ ಕ್ರೋಢೀಕರಿಸಲು ಪ್ರಯತ್ನ ಮಾಡಿದ್ದೇವೆ. 2019 ರಲ್ಲಿ ಗೈಡೆನ್ಸ್ ವ್ಯಾಲ್ಯೂ ಪರಿಷ್ಕರಿಸಲಾಗಿದೆ. . ಮೋಟಾರು ತೆರಿಗೆ ಹಾಗೂ ಗಣಿ ಮತ್ತು ಭೂ ವಿಜ್ಞಾನದ ಮೇಲೆ ತೆರಿಗೆ ಹಾಕಲಾಗಿದೆ. ಮೊದಲ ಬಾರಿಗೆ. ರೆವೆನ್ಯೂ ಡಿಫಿಸಿಟ್ ಬಜೆಟ್ ಮಂಡಿಸಿದ್ದೇನೆ. 13 ಬಜೆಟ್ ರೆವೆನ್ಯೂ ಸರ್ಪ್ಲಸ್ ಬಜೆಟ್ ಮಂಡಿಸಲಾಗಿದೆ. 2022-23 ರಲ್ಲಿ 14000 ಕ್ಕೂ ಹೆಚ್ಚು ರೆವೆನ್ಯೂ ಡಿಫಿಸಿಟ್ ಬಜೆಟ್ ಮಂಡಿಸಿದ್ದೀರಿ. ಐದು ಗ್ಯಾರಂಟಿಗಳಿಗೆ ಎಷ್ಟು ದುಡ್ಡು ಅಗತ್ಯವಿದೆಯೋ ಅಷ್ಟು ಹಣ ಕ್ರೋಢೀರಣ ಮಾಡುತ್ತೇವೆ ಎಂದರು
ಜುಲೈ 1 ರಿಂದ ಅನ್ನಭಾಗ್ಯ ಕೊಡಲು ಉದ್ದೇಶವಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ನಮಗೆ ಎಫ್‍ಸಿಐ 1 ಕೆಜಿಗೆ 34 ರೂ.ನಂತೆ ಅಕ್ಕಿ ಕೊಡುತ್ತಾರೆ. ಘೋಷಣೆ ಮಾಡುವ ಮುನ್ನ ಪ್ರಧಾನಮಂತ್ರಿಗಳನ್ನು ಕೇಳಿದ್ದರೆ? ಎನ್ನುವ ಬಿಜೆಪಿ ಪ್ರಶ್ನೆಗೆ ಉತ್ತರಿಸಿ, ರಾಜ್ಯ ಸರ್ಕಾರದ ಯಾವ ಕಾರ್ಯಕ್ರಮ ಘೋಷಣೆಯನ್ನು ಕೇಂದ್ರ ಸರ್ಕಾರ ಕೇಳಿ ಯಾರು ಮಾಡುತ್ತಾರೆ? ನಮಗೆ ರಾಜಕೀಯ ಬದ್ಧತೆ ಇದೆ. ನಿಮಗಿಲ್ಲ ಎಂದರು.
ಕೇಂದ್ರ ಸರ್ಕಾರ ರಾಜಕೀಯ ತೀರ್ಮಾನ ಬಡವರ ವಿರೋಧಿ, ದ್ವೇಷದ ರಾಜಕಾರಣ ಎಂದು ಹೇಳಿದ್ದೇನೆ. ಕೇಂದ್ರ ಸರ್ಕಾರದ ಇ-ಆಕ್ಷನ್ ನಲ್ಲಿ ಯಾರೂ ಭಾಗವಹಿಸಿಯೇ ಇಲ್ಲ. ಕೇಂದ್ರ ಸರ್ಕಾರ ಅಡ್ಡ ಬರುತ್ತಿದೆ. ನೀವು ಹೇಳಬೇಕೋ ಬೇಡವೋ? ನನಗೆ ನೀವೇ ಹೇಳಿಕೊಟ್ಟಿರುವುದು ಕೊಡಬೇಡಿ ಎಂದು . ಒಂದು ದಿನ ಅಕ್ಕಿ ಕೊಡಿ ಎಂದು ಹೇಳಿದ್ದೀರಾ? ಎಂದು ವಿರೋಧ ಪಕ್ಷದವರನ್ನು ಪ್ರಶ್ನಿಸಿದರು.
ಅನ್ನಭಾಗ್ಯ ಯೋಜನೆಯಡಿ ಅಕ್ಕಿ ದೊರೆಯದ ಕಾರಣ ಎಲ್ಲರಿಗೂ 170 ರೂ.ಕೊಡುತ್ತಿರುವುದು ತಾತ್ಕಾಲಿಕವಾಗಿ ಮಾತ್ರ. ಅಕ್ಕಿ ದೊರೆತ ಕೂಡಲೇ ಅಕ್ಕಿ ವಿತರಿಸುತ್ತೇವೆ ಎಂದರು. ಜನ ಸಂತೋಷವಾಗಿದ್ದಾರೆ. ನಾವು ನುಡಿದಂತೆ ನಡೆಯುತ್ತೇವೆ. ಯುವನಿಧಿಯನ್ನೂ ಜಾರಿಮಾಡಲು ಹಣ ಮೀಸಲಿಟ್ಟಿದ್ದೇವೆ. ವಿರೋಧ ಪಕ್ಷಗಳು ಒಂದು ಕಡೆ ದಿವಾಳಿಯಾಗುತ್ತೆ ಎನ್ನುತ್ತಾರೆ ಒಂದು ಕಡೆ ಪ್ರತಿಭಟನೆ ಎನ್ನುತ್ತಾರೆ. ಯಡಿಯೂರಪ್ಪ ಒಂದು ಕಾಳು ಕಡಿಮೆಯಾದರೂ ಬಿಡೋಲ್ಲ. ನಾನು 7 ಕೆಜಿ ಕೊಡತ್ತಿದ್ದ ಅಕ್ಕಿಯನ್ನು 5 ಕೆಜಿ ಮಾಡಿದವರು ನಮಗೆ ಪಾಠ ಹೇಳುತ್ತಾರೆ. ವೀರಾವೇಶದ ಭಾಷಣ ಮಾಡುತ್ತಾರೆ. ಬಿಜೆಪಿ ಕೆಟ್ಟ ಆಡಳಿತದಿಂದ ರಾಜ್ಯ ದಿವಾಳಿಯಾಗಿದೆ. ಇವರಿಗೆ ಯಾವ ನೈತಿಕ ಹಕ್ಕಿದೆ ಪ್ರತಿಭಟನೆ ಮಾಡಲು ಎಂದರು. ಅತಿ ಹೆಚ್ಚು ತೆರಿಗೆ ನೀಡುವ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದರು.
ಅನ್ನಭಾಗ್ಯದ ಮೂಲಕ ಸಂವಿಧಾನದ ನಿರ್ದೇಶನ ತತ್ವಗಳನ್ನು ಹಕ್ಕುಗಳನ್ನಾಗಿ ಪರಿವರ್ತಿಸಿ ಕೊಟ್ಟಿದ್ದು ಕಾಂಗ್ರೆಸ್.
ರಾಜ್ಯ ಹಸಿವುಮುಕ್ತ ಆಗಬಾರದು ಎಂಬ ದುರುದ್ದೇಶದಿಂದ, ಹಿಂದುಳಿದವರ, ಅಲ್ಪಸಂಖ್ಯಾತರ, ಮಹಿಳೆಯರ ವಿರೋಧಿಯಾದ ಬಿಜೆಪಿ ಯಾವ ಕಾಲದಲ್ಲಿ ಸಾಮಾಜಿಕ ನ್ಯಾಯದ ಪರವಾಗಿದ್ದಾರೆ? ಮುರಳಿ ಮನೋಹರ್ ಜೋಶಿ ಯವರು ಫುಡ್ ಸೆಕ್ಯುರಿಟಿ ಆಕ್ಟ್ ಅಲ್ಲ, ವೋಟ್ ಸೆಕ್ಯುರಿಟಿ ಆಕ್ಟ್ ಎಂದಿದ್ದರು ಎಂದು ಎದುರೇಟು ನೀಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ