ಪೌಷ್ಟಿಕಾಂಶ ಕೊರತೆಯಿಂದ ಕಾಯಿಲೆ ಬರುತ್ತವೆ

ಬಳ್ಳಾರಿ:ಪೌಷ್ಟಿಕಾಂಶ ಕೊರತೆಯಿಂದ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಕಾಯಿಲೆಗಳಾದ ಜ್ವರ, ಕೆಮ್ಮು, ನಗಡಿ,ಹೊಟ್ಟೆನೋವು,ದೃಷ್ಟಿದೋಷ,ಕಿವುಡು ಇತ್ಯಾದಿ ಕಂಡುಬರುವ ಮಕ್ಕಳು ತಕ್ಷಣವೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ವೈದ್ಯರಿಂದ ಚಿಕಿತ್ಸೆ ಪಡೆಯಬೇಕೆಂದು ಎಂ.ಬಿ.ಬಿ.ಎಸ್. ವೈದ್ಯರಾದ ಡಾಕ್ಟರ್ ಫ್ರುಖಾನ್ ಮಕ್ಕಳಿಗೆ ತಿಳಿಸಿದರು.

ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿಯಿಂದ ಎಂಟನೇ ತರಗತಿವರೆಗಿನ 406 ಮಕ್ಕಳಿಗೆ ಆರ್. ಬಿ.ಎಸ್. ಕೆ.ಅವರಿಂದ ಹಮ್ಮಿಕೊಂಡಿದ್ದ ವೈದ್ಯಕೀಯ ತಪಾಸಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ತಿಳಿಸಿದರು.

ಶಾಲೆಯ ಮುಖ್ಯ ಗುರುಗಳು ಡಾಕ್ಟರ್ ಬಿ.ಸಿ.ರಾಯ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಿದರು.

ಶಾಲೆಯ ಮುಖ್ಯ ಗುರುಗಳಾದ ರವಿ ಚೆಳ್ಳೇಗುರ್ಕಿ, ವೈದ್ಯರಾದ ಡಾಕ್ಟರ್ ಪ್ರಸನ್ನಕುಮಾರ್ RBSK, ಶಿಕ್ಷಕರಾದ ಬಸವರಾಜ,ಸಿಸ್ಟರ್ ಸುನೀತಾ, ವಿದ್ಯಾರ್ಥಿ ಪ್ರತಿನಿಧಿ ಮಹೇಶ್. ಮನೋಹರ್ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ