ವಿದ್ಯುತ್‌ನಿಂದಾಗಿ ಕಾಡುಹಂದಿಗಳ ಮರಣ


ಕೊಟ್ಟೂರು ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಎರಡು ಕಾಡುಹಂದಿಗಳು ಮೃತಪಟ್ಟಿವೆ. ಪಕ್ಕದಲ್ಲಿಯೇ ಚಿರಿಬಿ ಕಾಯ್ದಿಟ್ಟ ಅರಣ್ಯವಿದ್ದು, ಅದರ ಪಕ್ಕದಲ್ಲಿಯೇ ಇರುವ ಸರ್ವೆ ನಂ. ೫೩೯ ರ ಮಾಲೀಕರಾದ ಪ್ರವೀಣ್ ತಂದೆ ಎಂ.ಎಂ.ಜೆ. ಚಂಡ್ರಜ್ಜ, ಎಂ.ಎಂ.ಜೆ. ಗಿರಿಜಮ್ಮ ಗಂಡ ಎಂ.ಎಂ.ಜೆ. ಚಂಡ್ರಜ್ಜ ಇವರು ತಮ್ಮ ಜಮೀನುಗಳಿಗೆ ಅಳವಡಿಸಿರುವ ವಿದ್ಯುತ್ ತಂತಿಗಳಲ್ಲಿ ಅತಿ ಹೆಚ್ಚು ವಿದ್ಯುತ್ ಸಂವಹನದಿಂದಾಗಿ ಕಾಡುಹಂದಿಗಳು ಮೃತಪಟ್ಟಿವೆ. ಕಾಡುಪ್ರಾಣಿಗಳು ಆಹಾರ ಅರಸುತ್ತಾ ಜಮೀನುಗಳಿಗೆ ಹೋದಾಗ ಈ ಘಟನೆಯಾಗಿದೆ. ಕಾಡುಪ್ರಾಣಿಗಳಿಗೆ ಯಾವುದೇ ಪ್ರಾಣಹಾನಿಯಾಗದಂತೆ ವಿದ್ಯುತ್ ಪ್ರವಹಿಸುವ ಬದಲು ಅತಿ ಹೆಚ್ಚು ವಿದ್ಯುತ್ ಪ್ರವಾಹದಿಂದಾಗಿ ಹಂದಿಗಳು ಮೃತಪಟ್ಟಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಚಿರಿಬಿ ಶಾಖೆಯ ಚಿರಿಬಿ ಗಸ್ತುವಿನ ವ್ಯಾಪ್ತಿಯಲ್ಲಿ ಬರುವ ಕೊಟ್ಟೂರು ತಾಲೂಕಿನ ರಾಂಪುರ ಕಂದಾಯ ಗ್ರಾಮದ ಎಂ.ಎಂ.ಜೆ. ಗಿರಿಜಮ್ಮ ಗಂಡ ಚಂಡ್ರಜ್ಜ ಎಂ.ಎಂ.ಜೆ. ರವರಿಗೆ ಸೇರಿದ ಜಮೀನಿನ ಸರ್ವೆ ನಂ. ೫೩೯ ರಲ್ಲಿ ತಂತಿಬೇಲಿಗೆ ಅಕ್ರಮವಾಗಿ ವಿದ್ಯುತ್ ಹಾಯಿಸಿ ಕಾಡುಹಂದಿಗಳನ್ನು ಸಾಯಿಸಿದ ಬಗ್ಗೆ ಖಚಿತ ವರ್ತಮಾನದ ಮಾಹಿತಿ ಇದ್ದು, ಕಾರಣ ಸದರಿ ಘಟನಾ ಸ್ಥಳದ ಸ್ಥಳ ಪರಿಶೀಲನೆಗೆ ಆಗಮಿಸಿ, ವರದಿ ನೀಡಲು ಕೋರಿರುತ್ತಾರೆ. 

ಕೋಟ್-೧

 ಶಾಖಾಧಿಕಾರಿಗಳ ನಿರ್ಲಕ್ಷ್ಯದಿಂದ ಜಮೀನಿನ ಮಾಲೀಕರು ಅಕ್ರಮವಾಗಿ ಹೆಚ್ಚೆಚ್ಚು ವಿದ್ಯುತ್ ಪ್ರವಹಿಸಿ ಕಾಡುಹಂದಿಗಳ ಹರಣಕ್ಕೆ ಕಾರಣರಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು.

ನಾಗಪ್ಪ, ಚಿರಿಬಿ ರೈತ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ