ಇನ್ಶೂರೆನ್ಸ್ ನೆಪದಲ್ಲಿ ಖಾತೆಯ ಹಣ ಗುಳುಂ ಮಾಡಿದ ಹೆಚ್.ಡಿ.ಎಫ್.ಸಿ. ಬ್ಯಾಂಕ್??
ಕೊಟ್ಟೂರು: ಬ್ಯಾಂಕ್‌ಗಳಲ್ಲಿ ಗ್ರಾಹಕರು ಹಣ ಇಡುವುದೇ ಕಷ್ಟಕಾಲಕ್ಕೆ ಅನುವಾಗಲೆಂದು ಆದರೆ, ಕೊಟ್ಟೂರಿನ ಹೆಚ್.ಡಿ.ಎಫ್.ಸಿ. ಬ್ಯಾಂಕ್ ಗ್ರಾಹಕರೊಬ್ಬರ ಖಾತೆಯಲ್ಲಿನ ಹಣವನ್ನು ಇನ್ಸೂರೆನ್ಸ್ ಹೆಸರಿನಲ್ಲಿ ಗ್ರಾಹಕರ ಗಮನಕ್ಕೆ ತಾರದೇ ಅವರ ಖಾತೆಯಲ್ಲಿನ ಹಣದಲ್ಲಿ ಇನ್ಸೂರೆನ್ಸ್ ಪಾಲಿಸಿ ಮಾಡಿಸಿದ್ದಾರೆ. ಕೊಟ್ಟೂರಿನ ಅಮರನಾಥ್ ಎಂಬುವವರು ತಮ್ಮ ಖಾತೆಯಲ್ಲಿ ದಿಡೀರನೆ ಹಣ ಕಡಿತವಾದ ಪ್ರಯುಕ್ತ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಇನ್ಸೂರೆನ್ಸ್ ಮಾಡಿಸಿದ್ದೇವೆ. ಹಾಗಾಗಿ ನಿಮ್ಮ ಹಣ ಕಡಿತವಾಗಿದೆ ಎಂದು ತಿಳಿಸಿದ್ದಾರೆ. ನನ್ನ ಅನುಮತಿ ಇಲ್ಲದೇ ಹೇಗೆ ಕಡಿತ ಮಾಡಿದಿರಿ ಎಂದು ಕೇಳಿದಾಗ ಯಾವುದೇ ಉತ್ತರ ನೀಡಲಿಲ್ಲ. ನಂತರ ಇನ್ಸೂರೆನ್ಸ್ ಪ್ರತಿ ನೀಡಿ, ನಿಮ್ಮ ಹಣವನ್ನು ವಾಪಸ್ ನಿಮ್ಮ ಖಾತೆಗೆ ಜಮಾ ಮಾಡುತ್ತೇವೆ ಎಂದು ಹೇಳಿದ್ದಾರೆ ತಮ್ಮ ಬಳಿ ಇನ್ಸೂರೆನ್ಸ್ ಕಾಪಿ ಸಿಗದೇ ಇದ್ದ ಕಾರಣಕ್ಕೆ ಬ್ಯಾಂಕಿನ ವ್ಯವಸ್ಥಾಪಕರು ತಮ್ಮ ಪರ್ಸನಲ್ ಹಣ ಕೊಡುತ್ತೇನೆ ಎಂದು ಹೇಳಿದ್ದಾರೆ.
ಇದಕ್ಕೆ ಒಪ್ಪದ ಅಮರನಾಥ್ ನಿಮ್ಮ ಹಣ ನನಗೆ ಬೇಡ ನನ್ನ ಖಾತೆಯ ಹಣ ನನಗೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇನ್ಸುರೆನ್ಸ್ ರದ್ದುಮಾಡಿ ನನ್ನ ಹಣ ಕೊಡಿ ಎಂದು ಕೇಳಿದ್ದಾರೆ. ಬ್ಯಾಂಕಿನ ಸಿಬ್ಬಂದಿಯಿಂದ ಅಕ್ರಮ ನಡೆದಿಲ್ಲವಾದರೆ ಪರ್ಸನಲ್ ದುಡ್ಡು ಕೊಡುತ್ತೇನೆ ಎಂದು ಏಕೆ ಹೇಳುತ್ತಾರೆ? ಎಂದು ಅಮರನಾಥ್ ಪತ್ರಿಕೆಗೆ ತಿಳಿಸಿದರು. ಇನ್ಸೂರೆನ್ಸ್ ಕಂಪನಿಗಳ ದಾಹಕ್ಕೆ ಕಟ್ಟುಬಿದ್ದು ಹೀಗೆ ಗ್ರಾಹಕರ ಖಾತೆಯಲ್ಲಿನ ಹಣವನ್ನು ಅವರ ಅನುಮತಿ ಇಲ್ಲದೆ ಇನ್ಸೂರೆನ್ಸ್ ಮಾಡಿಸುವುದು ಅಕ್ಷಮ್ಯ ಎಂದು ಅವರು ಪತ್ರಿಕೆಗೆ ಹೇಳಿದರು.
ಚೇತನ್ ಬ್ಯಾಂಕಿದು ಬರಿ ಬೇಕು ಅಣ್ಣ ಅವರ ಅಂಗೆ ಮಾಡ್ತಾರೆ
ಪ್ರತ್ಯುತ್ತರಅಳಿಸಿ