ಕೂಡ್ಲಿಗಿ ಶಾಸಕ ಡಾ ಎನ್. ಟಿ. ಶ್ರೀನಿವಾಸ್ ಅವರ ಅಧಿವೇಶನದ ಮೊದಲ ಭಾಷಣ.
ಗುಡೇಕೋಟೆ: ಗೌರವಾನ್ವಿತ ಮಾನ್ಯ ರಾಜ್ಯ ಪಾಲರ ಭಾಷಣಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಮೊದಲನೆಯದಾಗಿ ಅವರನ್ನು ಅಭಿನಂಧಿಸುತ್ತೇನೆ. ರಾಜ್ಯಪಾಲರ ಭಾಷಣಕ್ಕೆ ನಾನು ಸಂಪೂರ್ಣವಾಗಿ ಸಹಮತ ವ್ಯಕ್ತಪಡಿಸುತ್ತೇನೆ. ಆ ಮೂಲಕ ಚರ್ಚೆಗೆ ಬರುತ್ತೇನೆ.
ಕರ್ನಾಟಕದ ಘನ ಸರಕಾರ ಇವತ್ತು ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳನ್ನು ಬಡವರು ಮತ್ತು ಧೀನ ದಲಿತರಿಗೆ ಘೋಷಣೆ ಮಾಡಿದೆ. ಅದಕ್ಕೆ ಅತ್ಯಂತ ಖುಷಿ ಪಡುವಂತಹ ತಾಲೂಕು ಅಂದರೇ ಅದು ನಮ್ಮ ತಾಲೂಕು. ಯಾಕೆಂದರೇ ನಂಜುಂಡಪ್ಪ ವರದಿ ಪ್ರಕಾರ ಅತಿ ಹಿಂದುಳಿದ ತಾಲೂಕು ಪಟ್ಟಿಗಳಲ್ಲಿ ಒಂದು. ನಮ್ಮ ವಿಜಯ ನಗರ ಜಿಲ್ಲೆಯಲ್ಲಿ ಕೂಡ್ಲಿಗಿ ತಾಲೂಕು ಒಂದು. ಅಂತಹ ಜನರು ಇರುವ ತಾಲೂಕಿಗೆ ಇಂತಹ ಒಂದು ಒಳ್ಳೆಯ ಕಾರ್ಯಕ್ರಮಗಳು ನಿಜವಾಗಲು ತುಂಬಾ ಫಲ ತರುತ್ತವೆ. ಇದಕ್ಕೆ ನಾನು ಸಂಪೂರ್ಣ ಸಹಮತ ವ್ಯಕ್ತಪಡಿಸ್ತೀನಿ. ಮತ್ತೇ ನಮ್ಮ ಸ್ನೇಹಿತರು ನಮ್ಮ ತಾಲೂಕಿನ ಬಗ್ಗೆ ವಿಶ್ಲೇಷವಾಗಿ ಮಾತನಾಡಿದ್ದಾರೆ. ಅಂದರೇ ಇದು ಅತಿ ಹಿಂದುಳಿದ ತಾಲೂಕು ಆದರೂ ಹೃದಯ ವೈಶಾಲ್ಯತೆ ಮತ್ತು ಇತಿಹಾಸಕ್ಕೆ ಕಡಿಮೆ ಇಲ್ಲಾ. ವಿಜಯನಗರದ ಇತಿಹಾಸ ಉಳ್ಳ ನಮ್ಮ ಜಿಲ್ಲೆ. ಅಂತಹ ಇತಿಹಾಸ ಉಳ್ಳ ಹಾಳು ಹಂಪೆ ಹೇಗೆ ಇದೆಯೋ ನಮ್ಮ ಪರಿಸ್ಥಿತಿ ಹಾಗೇ ಆಗಿದೆ.
ಇವತ್ತು ಕೃಷಿಕರು ಇರುವ ಒಣಭೂಮಿಯನ್ನು ನಂಬಿಕೊಂಡು ಬಂದಿರುವ ಜನ. ಯಾವುದೇ ಕೆರೆ ಮತ್ತು ಯೋಜನೆಗಳು ಅಲ್ಲಿ ಇಲ್ಲಾ. ಮತ್ತೇ ಶಾಲಾ ಕಾಲೇಜುಗಳು , ಕಟ್ಟಡಗಳು ಮತ್ತು ಆರೋಗ್ಯಕ್ಕೆ ವಿಶೇಷ. ಆರೋಗ್ಯ ,ಶಿಕ್ಷಣ , ಪರಿಸರ ಮತ್ತು ಉದ್ಯೋಗ ಅವಕಾಶಗಳು ವಿರಳ. ಎಲ್ಲಾ ಅಲ್ಲಿ ಒಣ ಕೃಷಿಯನ್ನು ನಂಬಿಕೊಂಡಿರುವಂತಹ ಜನರು ಗುಳೇ ಹೋಗುತ್ತಿದ್ದಾರೆ. ಅಲ್ಲಿ ಉದ್ಯೋಗ ಅವಕಾಶಗಳು ಇಲ್ಲದೇ ದುಡಿಯಲಿಕ್ಕಾಗಿ ಬೆಂಗಳೂರು, ಚಿಕ್ಕ ಮಂಗಳೂರು ಕಾಫಿ ಎಸ್ಟೇಟ್ ಕಡೆ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಕಡಿಯಲಿಕ್ಕೆ ಹೋಗುವಂತದ್ದೂ ಇದೆ. ಕರ್ನಾಟಕದಲ್ಲಿ ನಮ್ಮ ಕೂಡ್ಲಿಗಿ ತಾಲೂಕಿನ ಜನರು ಅತಿ ಹೆಚ್ಚು ಕೂಲಿಗಾಗಿ ಗುಳೆ ಹೋಗುತ್ತಿದ್ದಾರೆ ಅಂತಹ ಹೇಳಬಹುದು.
1984 ರಲ್ಲಿ ಮತ್ತು 1994 ರಲ್ಲಿ ನಮ್ಮ ತಂದೆಯವರು ಹಾಗೂ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರು ಆದಂತಹ ಎನ್. ಟಿ. ಬೊಮ್ಮಣ್ಣನವರ ಸಮಯದಲ್ಲಿ ಉದ್ಘಾಟನೆ ಆದಂತಹ ತಾಲೂಕು ನೂರು ಬೆಡ್ಡುಗಳ ಆಸ್ಪತ್ರೆಯಲ್ಲಿ ಇದ್ದೂ ಡಿಗ್ರಿ ಕಾಲೇಜು ಇದೆ. ಆವಾಗ ಆಗಿರುವಂತದ್ದೂ ಯಾವುದೇ ಉನ್ನತೀಕರಣ ಆಗಿರುವುದಿಲ್ಲ. ಡಿಗ್ರಿ ಕಾಲೇಜು ಆಗಲೀ ಅಥವಾ ತಾಲೂಕು ಆಸ್ಪತ್ರೆ ಆಗಲೀ ಆಗಿರಬಹುದು. ನಮ್ಮದು ಹೊಸ ಜಿಲ್ಲೆ ಆಗಿರುವುದರದಿಂದ ಜಿಲ್ಲಾ ಆಸ್ಪತ್ರೆ ಇಲ್ಲಾ. ದೂರ ದೂರ ಪ್ರವೇಟ್ ಆಸ್ಪತ್ರೆಗಳಿಗೆ ನಂಬಿಕೊಂಡು ಹೋಗಿರುವಂತದ್ದೂ ಇದೆ.
ಅಂತಹ ದೊಡ್ಡ ತಾಲೂಕು ಆದರೂ ಏಳು ಪ್ರಾಥಮಿಕ ಆರೋಗ್ಯ ಕೇಂದ್ರ ( ಪಿ. ಹೆಚ್. ಸಿ.) ಇರುತ್ತದೆ . ಎರಡೇ ಎರಡು ಸಮುದಾಯ ಆರೋಗ್ಯ ಕೇಂದ್ರ ( ಸಿ . ಹೆಚ್ . ಸಿ ) ಇದೆ. ಆ ಸಮುದಾಯ ಆರೋಗ್ಯ ಕೇಂದ್ರ ( ಸಿ . ಹೆಚ್. ಸಿ. ) ಎಲ್ತ್ ಕಮುನಿಟಿ ಇರುವಂತ ಜಾಗಗಳು ಅತ್ಯಂತ ಇತಿಹಾಸ ಮಹತ್ವ ಹೊಂದಿವೆ. ಉಜ್ಜಿನಿ ನೀವು ಕೇಳಿರಬಹುದು. ಪಂಚ ಪೀಠಗಳಲ್ಲಿ ಒಂದಾದ ಗ್ರಾಮ ಅದು. ಹೋಬಳಿ ಅದು. ಉಜ್ಜಿನಿ ಎಲ್ಲಾ ಮೂಲಭೂತ ಸೌಕರ್ಯಗಳಿಂದ ಹಿಂದೆ ಬಿದ್ದಿದೆ. ಪಂಚಪೀಠಗಳಲ್ಲಿ ಮುಖ್ಯವಾದಂತಹ ಇದಕ್ಕೆ ಬೇರೆ ರೀತಿ ಮೂಲಭೂತ ಸೌಕರ್ಯಗಳು ಇಲ್ಲಾ.. ಯಾವುದೇ ರೀತಿಯ ಸೌಲಭ್ಯಗಳು ಇಲ್ಲಾ. ಮತ್ತೇ ಇನ್ನೊಂದು ಗುಡೆಕೋಟೆ ಅದು. ಪ್ರಾಥಮಿಕ ಆರೋಗ್ಯ ಕೇಂದ್ರ ( ಪಿ .ಹೆಚ್. ಸಿ) .ಇಂದ ಸಮುದಾಯ ಆರೋಗ್ಯ ಕೇಂದ್ರ ( ಸಿ. ಹೆಚ್. ಸಿ) ಗ್ರೇಡ್ ಆಗಬೇಕಾಗಿದೆ. ಆಡಳಿತಾತ್ಮಕ ಅನುಮೋದನೆಯಿಂದ ನಿಂತಿದೆ. ಗುಡೆಕೋಟೆ ನಿಮಗೆ ಗೊತ್ತಿದೆ. ಒಣಕೆ ಓಬವ್ವ ತವರೂರು ಅದು. ಯಾವುದೇ ರೀತಿ ಅದು ಹಾಳೂರು ಇದ್ದಂಗೇ ಇದೆ. ಯಾವುದೇ ರೀತಿ ಉದ್ದಾರ ಆಗಿರುವುದಿಲ್ಲ. ಎಲ್ಲರೂ ತುಂಬಾ ಬಡವರು ಇರುವಂತ ಜಾಗ ಅದು. ಅಲ್ಲಿ ಜರೂರು ಆಗಿ ಕಮುನಿಟಿ ಎಲ್ತ್ ಸೆಂಟರ್ ಆಗಬೇಕಾಗಿದೆ. ಮತ್ತೇ ಒಂಬತ್ತು( ಪಿ. ಹೆಚ್. ಸಿ ) ಪ್ರಾಥಮಿಕ ಆರೋಗ್ಯ ಕೇಂದ್ರ ಗೆ ವೇಟಿಂಗ್ ಇದೆ. ಯಾವುದೇ ಅನುಮೋದನೆ ಆಗಿರುವುದಿಲ್ಲ.
ಇಡೀ ತಾಲೂಕಿಗೆ ಒಂದೇ ಒಂದು ಆಸ್ಪತ್ರೆ ಇದೆ. 2002-2003 ರಲ್ಲಿ ಸೋನಿಯಾ ಪ್ಯಾಕೇಜ್ ನಲ್ಲಿ ಗ್ರಾಂಟ್ ಆಗಿರುವಂತ ಕಟ್ಟಡಗಳು ಮತ್ತು ವಸತಿ ಪ್ರದೇಶಗಳು ಅರ್ಧಕ್ಕೆ ನಿಂತು ಯಾವುದೇ ರೀತಿ ಅಲ್ಲಿ ಕೆಲಸಗಳು ಆಗಿರುವುದಿಲ್ಲ. ಮತ್ತೇ ಇನ್ನೊಂದು. ಎಲ್ಲಾ ಇಡೀ ತಾಲೂಕು ನಲ್ಲಿ ಶಾಲೆ ಮತ್ತು ಕಾಲೇಜುಗಳ ಕಟ್ಟಡಗಳು ಮತ್ತು ಸಿಬ್ಬಂದಿ ಕೊರತೆ ಇದೆ. ಇವತ್ತು ಸಹ ಪೇಪರ್ ನಲ್ಲಿ ಬಂದಿದೆ. ತಾಲೂಕು ಕಛೇರಿಯಲ್ಲಿ ಐವತ್ತು ಪರ್ಸೆಂಟ್ ಸಿಬ್ಬಂದಿಗಳ ಕೊರತೆ ಇದೆ. ಸುಮಾರು ಇಪ್ಪತ್ತು ವರ್ಷಗಳ ನಂತರ ನಮ್ಮ ಕಾಂಗ್ರೆಸ್ ಪಕ್ಷ ಇವತ್ತು ಅಲ್ಲಿ ಅಧಿಕಾರಕ್ಕೆ ಬಂದಿದೆ. ಅದಕ್ಕೋಸ್ಕರ ನನ್ನ ಕಳಾ ಕಳಿ ಮನವಿ ಏನಂತಹ ಅಂದರೇ ಇಂತಹ ಹಿಂದುಳಿದ ತಾಲೂಕಿಗೆ ಒಂದು ಏನೋ ಒಂದು ಘನ ಸರಕಾರ 2013 ರಲ್ಲಿ ಮಾನ್ಯ ಸಿದ್ದರಾಮಯ್ಯನವರ ಸರಕಾರ ಇತ್ತು . ಅಂತಹ ಟೈಮ್ ವರ್ಷದಲ್ಲಿಯೇ ಅತಿ ದೊಡ್ಡ ಒಂದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿ ಆಗಿದೆ. ತುಂಗಭದ್ರ ನದಿಯಿಂದ ಕೂಡ್ಲಿಗಿ, ಮೊಳಕಾಲ್ಮೂರು , ಚಳ್ಳಕೆರೆ , ಪಾವಗಡ, ತಾಲೂಕಿಗೆ ಎಲ್ಲಾ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರನ್ನು ಜಾರಿ ಗೊಳಿಸಿತು. ಅದೀಗ ಕುಂಟಿತ ಗೊಂಡಿದೆ. ಅದಕ್ಕೆ ಮತ್ತೇ ರಿಜವ್೯ ಪಾರೆಸ್ಟ್ ನಿಂದ ಅನುಮೋದನೆ ಕುಂಟಿತ ಗೊಂಡಿದೆ. ಅದು ಕೆಲಸ ಆಗುಬೇಕು. ಇದು ಜಲ ಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆ ಇದೆ. ಅದು ಬಾಳಾ ಕುಂಟಿತ ಗೊಂಡಿದೆ. ಕುಡಿಯುವ ನೀರಿನ ಮಹತ್ವ ಹೇಳ್ತಿನಿ. ಅಂದರೇ ಅದು ಪಾವಗಡ ಬಿಟ್ಟರೇ ನಮ್ಮ ತಾಲೂಕು ನಲ್ಲೇ ಅಧ್ಯಕ್ಷರೇ ಪ್ಲೋರೈಡ್ ಕಂಟೆಂಟ್ ನಿಂದ ಕೂಡಿದೆ. ಕುಡಿಯುವ ನೀರಿಗೆ ಯೋಗ್ಯವಲ್ಲದ ನೀರು. ಕೊಳವೆ ಬಾವಿಗಳು ಸಿಗದಂತದ್ದೂ. ತುಂಗಭದ್ರ ದಿಂದ ನೀರು ಅನುಷ್ಠಾನ ಗೊಂಡರೇ ಕುಡಿಯುವ ನೀರು ಸಮಸ್ಯೆ ನೀಗುತ್ತದೆ. ಮತ್ತೇ ಪ್ಲೋರೈಡ್ ನಿಂದ ಆಗುವಂತ ಅನಾಹುತಗಳು ತಪ್ಪುತ್ತವೆ. ಮನುಷ್ಯನ ಅಲ್ಲಿನ ಮೇಲೆ ಮೂಳೆ ಮೇಲೆ ಆಗುವಂತ ಅನಾಹುತಗಳು ತಪ್ಪುತ್ತವೆ. ಇದೊಂದು ಅತ್ಯಂತ ಜರೂರು ಆಗಬೇಕಾದಂತಹ ಕೆಲಸ. ಮತ್ತೇ ಅಂತಹ ತಾಲೂಕು ಕೇಂದ್ರಕ್ಕೆ ಕುಡಿಯುವ ನೀರಿನ ಸಮಸ್ಯೆ ಇದೆ. ಅದು ಬಹುಗ್ರಾಮ ಯೋಜನೆಯಲ್ಲಿ ಬಿಟ್ಟು ಹೋಗಿದೆ. ಅದನ್ನು ಸೇರಿಸಿಕೊಳ್ಳಬೇಕಾಗಿದೆ.
ಮತ್ತೇ ಒಂದು ಇತಿಹಾಸ ಪ್ರಸಿದ್ಧ ಅಂತಹ ಏನೂ ಇದೆ. ನಮ್ಮ ತಾಲೂಕು ಸುಮಾರು ವಿಜಯ ನಗರ ಕಾಲದಲ್ಲಿ ಇರುವಂತಹ ಒಂದು ಅತ್ಯಂತ ಹಳೇ ದೇವಸ್ಥಾನ. ಐದು ನೂರು ವರ್ಷಕ್ಕಿಂತ ಹಳೇ ದೇವಸ್ಥಾನ ಹೊಂದಿದೆ. ಕೈವಲ್ಲಾಪುರ ವೆಂಕಟೇಶ್ವರ ದೇವಸ್ಥಾನ ಅಂತಹ ಹೇಳಿ. ಅದು ಶಿಥಿಲ ಗೊಂಡಿದೆ. ಹೊಯ್ಸಳರ ಕಾಲದ ಗುಣಸಾಗರದಲ್ಲಿ ಅಲ್ಲಿ ಶ್ರೀ ಕೃಷ್ಣನ ದೇವಸ್ಥಾನ ಇದೆ. ಅದು ಕೂಡ ಅತ್ಯಂತ ಶಿಥಿಲ ವ್ಯವಸ್ಥೆಯಲ್ಲಿ ಇದೆ. ಆ ಎಲ್ಲಾದನ್ನು ಎಲ್ಲಾ ರೀತಿಯಲ್ಲಿ ಹಿಂದುಳಿದ ತಾಲೂಕು ನಮಗೆ ಇವತ್ತು. ಒಂದು ನೇತ್ರಾ ವೈಧ್ಯನಾದ ನನಗೆ ಒಂದು ಕಾಯಕವೇ ಕೈಲಾಸ ಅಂತಹ ನಂಬಿದ್ದ ನನಗೆ ಇವತ್ತು. ಸರಕಾರದ ಕೆಲಸ ದೇವರ ಕೆಲಸ ಅಂತಹ ನಂಬಿ ಅತಿ ಹೆಚ್ಚಿನ ವಿಶ್ವಾಸ ಇಟ್ಟುಕೊಂಡು ನನ್ನನ್ನೂ ಇವತ್ತು ವಿಧಾನ ಸಭಾಕ್ಕೆ ಕಳಿಸಿದ್ದಾರೆ.
ತಮ್ಮ ಸರಕಾರದಿಂದ ನಮ್ಮ ಘನ ಸರಕಾರಕ್ಕೆ ಕಳಾ ಕಳಿ ಮನವಿ . ಈ ಹಿಂದುಳಿದ ತಾಲೂಕಿಗೆ ಒಂದು ಒಳ್ಳೆಯ ರೀತಿಯ ಉತ್ತಮ ಕಾರ್ಯ ಕ್ರಮಗಳಿಗೆ ನಮಗೆ ಸಹಕಾರ ಕೊಡಬೇಕು. ಈ ಎಲ್ಲಾ ವಿಶೇಷವಾಗಿ ಏನೂ ಗುಳೇ ಹೋಗುತ್ತಿದ್ದಾರೆ. ಉದ್ಯೋಗ ಅವಕಾಶಗಳ ವಂಚಿತರಿಂದ ಮತ್ತೇ ಈ ಆರೋಗ್ಯ ಮತ್ತು ಶಿಕ್ಷಣಕ್ಕೆ ವಿಶೇಷ ಹೊತ್ತು ಕೊಡಬೇಕು . ನಮ್ಮ ತಾಲೂಕಿಗೆ ಮುಂದಿನ ದಿನಗಳಲ್ಲಿ ಹೆಚ್ಚು ಹೊತ್ತು ಕೊಟ್ಟು ನಮಗೆ ಎಲ್ಲಾ ರೀತಿಯ ಸಹಕಾರ ಕೊಡಬೇಕು ಎಂದೂ ನಿಮ್ಮ ಮುಖಾಂತರ ಕೇಳು ಕೊಳ್ಳುತ್ತಾ ಇದ್ದೀನಿ ಮಾನ್ಯ ಅಧ್ಯಕ್ಷರೇ .
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ