12 ನೇ ಶತಮಾನದ ಶರಣೆ ಅಕ್ಕಮಹಾದೇವಿ ಮೊದಲ ಬಂಡಾಯ ಮಹಿಳಾ ಸಾಹಿತಿ










ಕೊಟ್ಟೂರು ..ಸಮಾದಲ್ಲಿನ ಅನೇಕ ತಪ್ಪುಗಳನ್ನು ನೇರವಾಗಿ ಮತ್ತು ನಿಷ್ಟುರವಾಗಿ ಹೇಳಿದ, ಶರಣರೊಂದಿಗೆ ದೈರ್ಯದಿಂದ ಚರ್ಚೆ ನಡೆಸಿದ್ದ ೧೨ನೇ ಶತಮಾನದ ಶರಣೆ ಅಕ್ಕಮಹಾದೇವಿ ಮೊದಲ ಬಂಡಾಯ ಸಾಹಿತಿಯಾಗಿದ್ದಾರೆ ಎಂದು ಗಂಗೋತ್ರಿ ಕಾಲೇಜು ಪ್ರಾಚಾರ್ಯೆ ನಿರ್ಮಲಾ ಶಿವನಗುತ್ತಿ ಅಭಿಪ್ರಾಯಪಟ್ಟರು.

ಪಟ್ಟಣದ ಮಹದೇವ ಪದವೀ ಪೂರ್ವ ಕಾಲೇಜಿನಲ್ಲಿ ತಾಲೂಕು ಕಸಾಪ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯಕ್ಕೆ ಬಂಡಾಯ ಸಾಹಿತಿಗಳ ಕೊಡುಗೆ ಹಾಗೂ ಜೈನಕವಿಗಳ ಕೊಡುಗೆ ವಿಷಯದಲ್ಲಿ ಅವರು ಬುಧವಾರ ದತ್ತಿ ಉಪನ್ಯಾಸ ನೀಡಿದರು.

ಸಮಾಜದಲ್ಲಿ ಸಮರ್ಥವಾದ ವ್ಯವಸ್ಥೆ ರೂಪುಗೊಳ್ಳುವುದಕ್ಕೆ ಬಂಡಾಯ ಸಾಹಿತಿಗಳ ಪಾತ್ರ ಅಪಾರವಾಗಿದೆ. ಬಂಡಾಯ ಸಾಹಿತ್ಯಕ್ಕೆ ನೇರ, ನಿಷ್ಠರುವಾಗಿ ಹೇಳುವ, ಸಮಾಜದಲ್ಲಿನ ತಪ್ಪುಗಳನ್ನು ತಿದ್ದಿ ಸರಿದಾರಿಗೆ ತರುವ ಶಕ್ತಿ ಅದಕ್ಕಿದೆ. ರಾಜ್ಯದಲ್ಲಿ ಅನೇಕ ಸಾಹಿತಿಗಳು ಬಂಡಾಯ ಸಾಹಿತ್ಯದ ಮೂಲಕ ಸಮಾಜಕ್ಕೆ, ಸರಕಾರಕ್ಕೆ ಎಚ್ಚರಿಸುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ಬಂಡಾಯ ಸಾಹಿತ್ಯದಿಂದಲೇ ಅನೇಕ ಜನಪರ ಹೋರಾಟಗಳೂ ರೂಪುಗೊಂಡಿದ್ದವು. ಸಾಹಿತ್ಯಕ್ಕೆ ಸಮಾಜದ ಅಂಕುಡೊAಕುಗಳನ್ನು ತಿದ್ದುವ ಪ್ರಬಲ ಶಕ್ತಿಯನ್ನೂ ಹೊಂದಿದೆ. ಅಲ್ಲದೇ ಮಹಿಳೆಯರಲ್ಲಿ ಆತ್ಮಸ್ಥೆöÊರ್ಯ ತುಂಬುತ್ತದೆ. ಸಾಹಿತ್ಯ ಕ್ಷೇತ್ರಕ್ಕೆ ಬಹು ಹಿಂದಿನಿAದಲೂ ಅನೇಕ ಜೈನ ಕವಿಗಳು ದೊಡ್ಡ ಕೊಡುಗೆ ನೀಡಿದ್ದಾರೆ. ಕನ್ನಡ ನಾಡಿನ ಕಲೆ, ಸಾಧನೆಗಳನ್ನು ಸಾಹಿತ್ಯದ ಮೂಲಕ ಸಾರಿದ್ದಾರೆ. ಹಳೆಗನ್ನಡದಲ್ಲಿರುವ ಜೈನಕವಿಗಳ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಮಹದೇವ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಸಾಪುರ ಪಂಪಾಪತಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಪರಿಚಯವಾಗಲು ಕಸಾಪ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಪಠ್ಯಗಳ ಜೊತೆಗೆ ಕನ್ನಡ ನಾಡಿಗೆ ಸಂಬAಧಿಸಿದ ನಾನಾ ವಿಷಯಗಳಲ್ಲಿ ಉಪನ್ಯಾಸ ಏರ್ಪಡಿಸುವುದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗುತ್ತದೆ. ನಮ್ಮ ಸಂಸ್ಥೆಯು ಕಸಾಪ ಕಾರ್ಯಗಳಿಗೆ ಎಂದಿಗೂ ಸಹಕಾರ ನೀಡುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ದೇವರಮನಿ ಕೊಟ್ರೇಶ್ ಮಾತನಾಡ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ