ಶ್ರೀಮತಿ ಲಲಿತಾ ಡಿ ಶೆಟ್ಟಿ ಇವರಿಗೆ.ಒಲಿದು ಬಂದ ಸ್ವಾಮಿ ವಿವೇಕಾನಂದ ಸದ್ಭಾವನಾ ಚಲನಚಿತ್ರ ರಾಷ್ಟ್ರ ಪ್ರಶಸ್ತಿ.
ಲಿಂಗಸಗೂರು:ಬೆಂಗಳೂರಿನ ದರ್ಶನ್ ಸೋಶಿಯಲ್ ಅಂಡ್ ಕಲ್ಚರಲ್ ಅಕಾಡೆಮಿಯ(ಡಿಸಿಎ) ಸಂಸ್ಥಾಪಕರಾದ ಶ್ರೀಮತಿ ರೇಣುಕಾ ಪಿ ಸಂಸ್ಥಾಪಕ ಅಧ್ಯಕ್ಷರು ಹಾಗೂ ಅಧ್ಯಕ್ಷರಾದ ದರ್ಶನ್.ಯು.ಹಾಗೂ ಸ್ನೇಹಿತರ ಬಳಗ
ವತಿಯಿಂದ.ಕಳೆದ 17 ವರ್ಷಗಳಿಂದ ಸಮಾಜ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ 350 ಕ್ಕೂ ಹೆಚ್ಚು ಜನಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ.ಹಲವಾರು ಸಾಧನೆಗಳನ್ನು ಮಾಡುತ್ತಾ. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿದಂತ ಗಣ್ಯ ಸಾಧಕರನ್ನು ಗುರುತಿ ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಹಾಗೂ ಕಲಾ ಪ್ರತಿಭೆ.ಜಾಣ್ಮೆ ಹಾಗೂ ನುರಿತ ವಿದ್ಯೆಯನ್ನು ಹೊರ ತರಲು ಇಂತಹ ಕಾರ್ಯಕ್ರಮಗಳು.ಕಲಾ ಪ್ರದರ್ಶನಗಳು. ಅತ್ಯವಶ್ಯಕವಾಗಿದ್ದು.ಇದುವೇ ಈ ಸಂಸ್ಥೆಯ ಮೂಲ ಧ್ಯೇಯವಾಗಿದೆ.
"ಯುವ ಸಂಭ್ರಮ"ದರ್ಶನ್ ಸೋಶಿಯಲ್ ಅಂಡ್ ಅಕಾಡೆಮಿ ಬೆಂಗಳೂರು ವತಿಯಿಂದ.98ನೆಯ ಸಾಂಸ್ಕೃತಿಕ ಕಾರ್ಯಕ್ರಮ.ಹಾಗೂ 2024 -25ನೇ ಸಾಲಿನ ಸಾಧಕರಿಗೆ ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ಯನ್ನು.ಸಾಂಸ್ಕೃತಿಕ ಕಲಾ ಗ್ರಾಮದಲ್ಲಿ ದರ್ಶನ್ ಸೋಶಿಯಲ್ ಅಂಡ್ ಕಲ್ಚರಲ್ ಅಕಾಡೆಮಿ ವತಿಯಿಂದ ಯುವ ಸಂಭ್ರಮ ವೇದಿಕೆಯಲ್ಲಿ.ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ.ಕಾರ್ಯಕ್ರಮದ. ಅಧ್ಯಕ್ಷತೆ ಶ್ರೀನಿವಾಸ್ ಮೂರ್ತಿ ಚಲನಚಿತ್ರ ಮತ್ತು ಕಿರುತೆರೆ ನಟರು.
ಪ್ರಶಸ್ತಿ ಪ್ರಧಾನ ಡಾಕ್ಟರ್ ಅಂಜನಪ್ಪ ವೈದ್ಯಕೀಯ ಕ್ಷೇತ್ರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.ಮಹೇಂದ್ರ ಮುನ್ನೋತ್ ಚಲನಚಿತ್ರ ನಿರ್ಮಾಪಕರು ಮತ್ತು ಸಮಾಜ ಸೇವಕರು.ಶ್ರೀಲಕ್ಷ್ಮಿ ಪತಯ್ಯ ಸಹಕಾರ ಸಂಘಗಳ ಅಪರ ನಿಬಂಧಕರು ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಸಹಕಾರ ಮಂಡಳಿ.ಗಣೇಶ್ ರಾವ್ ಚಲನಚಿತ್ರ ನಟರು ನವೀನ್ ಶಂಕರ್ ಚಲನಚಿತ್ರನಟರು ಈ ಎಲ್ಲಾ ಗಣ್ಯಮಾನ್ಯರಿಂದ. ದೀಪಾ ಬೆಳಗಿಸುವ ಮುಖಾಂತರ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.
ನಂತರ ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಸರ್ಜಾಪುರ ಗ್ರಾಮದವರಾದ ಲಲಿತ ಡಿ ಶೆಟ್ಟಿ ಇವರು ವೃತ್ತಿಯಲ್ಲಿ ಅಂಗನವಾಡಿ ಶಿಕ್ಷಕಿಯಾಗಿದ್ದು ತಮ್ಮ ಬಿಡುವಿನ ಸಮಯದಲ್ಲಿ ಕನ್ನಡದ ಚಿತ್ರಗಳಾದ'ಬದುಕಿನ ಬೈಲಾಟ'ದರ್ಪ'ದಾರಿ ತಪ್ಪಿದ ಮಗ'ರೈತನ ಧ್ವನಿ'ಬಡ್ಡಿ ಬಂಗಾರಮ್ಮ'ಹಾಗೂ ಕಿಲಾಡಿ ಅಜ್ಜಿ ಕಿತಾಪತಿ ಕಳ್ಳ ಎನ್ನುವ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚಿನ ಸಿನಿಮಾಗಳಾದ 'ಅಸುರರು'ಕನ್ಯಾಕುಮಾರಿ'ರಾಮ್ ರಹೀಂ'ಕಾವೇರಿಪುರ' 'ಕರ್ಣ'ಚಲನಚಿತ್ರಗಳಲ್ಲಿ ಪೋಷಕೀ ನಟಿಯಾಗಿ ನಟಿಸುವುದರ ಮೂಲಕ ಕಲಾ ಸರಸ್ವತಿಯ ಕೃಪೆಗೆ ಪಾತ್ರರಾಗಿ ತಮ್ಮ ಅಭಿನಯದ ಮೂಲಕ ಜನ್ನ ಮನ್ನಣೆ ಗಳಿಸಿದ್ದಾರೆ.
ಇವರು ಅಭಿನಯವನ್ನು ಗುರುತಿಸಿ ದರ್ಶನ್ ಸೋಶಿಯಲ್ ಅಂಡ್ ಕಲ್ಚರಲ್ ಅಕಾಡೆಮಿ ವತಿಯಿಂದ ಸ್ವಾಮಿ ವಿವೇಕಾನಂದ ಸದ್ಭಾವನ ಚಲನಚಿತ್ರರಾಷ್ಟ್ರಪ್ರಶಸ್ತಿ.ನೀಡಿ ಗೌರವಿಸಲಾಯಿತು. ಸಂದರ್ಭದಲ್ಲಿ ಕುಟುಂಬದ ಸದಸ್ಯರು.ಕಲಾತಂಡದವರು. ಹಿತೈಷಿಗಳು.ಸ್ವಾಮಿ ವಿವೇಕಾನಂದ ಸದ್ಭಾವನ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದ ಶ್ರೀಮತಿ ಲಲಿತಾ ಡಿ ಶೆಟ್ಟಿ ಇವರಿಗೆ ಶುಭ ಹಾರೈಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ