ಮಸ್ಕಿ : ಕ್ರಮ ಜರುಗಿಸದೇ ಹೋದರೆ ಧರಣಿ ನಡೆಸಲಾಗುವುದು ಎಚ್ಚರಿಕೆ

 

ಮಸ್ಕಿ : ಪಟ್ಟಣದ ಆಸ್ತಿ ಸಂಖ್ಯೆ: 3-1-98 ಈ ಆಸ್ತಿಯ ಬಗ್ಗೆ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳ ಆದೇಶವಿದ್ದರೂ ವಿಳಂಬದ ನಡೆ ಕುರಿತು ಕ್ರಮ ಜರುಗಿಸದೇ ಹೋದರೆ ಪುರಸಭೆ ಆವರಣದ ಮುಂದೆ ಧರಣಿ ನಡೆಸಲಾಗುವುದು ಎಂದು ಸಾರ್ವಜನಿಕ ಮನವಿಯಲ್ಲಿ ಒತ್ತಾಯ.

ಇಲ್ಲಿನ ಪುರಸಭೆ ವ್ಯಾಪ್ತಿಯ ಆಸ್ತಿ ಸಂಖ್ಯೆ: 3-1-98 ಈ ಆಸ್ತಿಯ ಬಗ್ಗೆ ಕ್ರಮ ಕೈಗೊಳ್ಳಲು 24-09-2024 ರಂದು ಮಾನ್ಯ ತಹಶೀಲ್ದಾರರು, ಮುಖ್ಯಾಧಿಕಾರಿಗಳಿಗೆ ಪತ್ರದ ಮುಖೇನ ಕ್ರಮ ಕೈಗೊಳ್ಳಲು ತಿಳಿಸಿರುತ್ತಾರೆ. ಅದೇ ರೀತಿ 19-09-2024 ರಂದು ಮಸ್ಕಿ ಪುರಸಭೆ ಮುಖ್ಯಾಧಿಕಾರಿಗಳಿಗೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಮಾನ್ಯ ಸಹಾಯಕ ಆಯುಕ್ತರು, ಲಿಂಗಸುಗೂರು ತಿಳಿಸಿರುತ್ತಾರೆ. ಮಾನ್ಯ ಸಹಾಯಕ ಆಯುಕ್ತರು ಲಿಂಗಸುಗೂರು ಇವರು 19-12-2024 ರಂದು ಪುನಃ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಲು ಮಸ್ಕಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಪತ್ರದ ಮುಖೇನ ತಿಳಿಸಿರುತ್ತಾರೆ. ಅದೇ ರೀತಿಯಾಗಿ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ರಾಯಚೂರು ಇವರು ಈ ಆಸ್ತಿ ಬಗ್ಗೆ 05-12-2024 ರಂದು ಈ ಆಸ್ತಿಯ ಬಗ್ಗೆ ಕ್ರಮ ತೆಗೆದುಕೊಂಡು ಈ ಕಚೇರಿಗೆ ವರದಿಯನ್ನು ಸಲ್ಲಿಸಲು ತಿಳಿಸಿದ್ದು ಒಂದು ವೇಳೆ ಕ್ರಮ ಕೈಗೊಂಡ ವರದಿ ಸಲ್ಲಿಸದಿದ್ದರೆ, ತಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಈ ಮೇಲೆ ತಿಳಿಸಿದ ಎಲ್ಲಾ ಅಧಿಕಾರಿಗಳು ಆದೇಶ ಮಾಡಿದ ನಂತರ ನಿಮ್ಮ ಪುರಸಭೆಯಿಂದ ಕಾನೂನು ಪ್ರಕಾರ ಅವರಿಗೆ ನೆಪ ಮಾತ್ರಕ್ಕೆ ಮೂರು ನೋಟಿಸನ್ನು ಕೊಡಲಾಗಿ, ಅಲ್ಲಿಂದ ಮುಂದೆ ನಿಮ್ಮ ಇಲಾಖೆಯಿಂದ ಆ ಆಸ್ತಿಯ ಮೇಲೆ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಮಸ್ಕಿ ನಾಗರಿಕರಾದ ನಾವು 27-01-2025 ಸೋಮವಾರದಂದು ಬೆಳಿಗ್ಗೆ ಕಾರ್ಯಾಲಯದ ಸಮಯದಲ್ಲಿ ಮಸ್ಕಿ ನಾಗರಿಕರು ಪುರಸಭೆ ಆವರಣದಲ್ಲಿ ಧರಣಿ ಮಾಡುವುದಾಗಿ ನಿರ್ಧರಿಸಿದ್ದೇವೆ ಎಂದು ಧರಣಿ ಅನುಮತಿ ಕೋರಿದ ಪತ್ರದಲ್ಲಿ ದೂರುದಾರ ಮಹೀಬೂಬ್ ಹಣಿಗಿ ಪುರಸಭೆ,ತಹಶೀಲ್ದಾರರ,ಪೋಲಿಸ್ ಠಾಣಾ ಕಚೇರಿಗೆ ನೀಡಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*