ದೇಸಿ ಸೊಗಡಿನ ಹೊಸ ವರ್ಷ ಸಂಸ್ಕಾರ ಉಳಿಸುವ ಪ್ರಯತ್ನ ನಮ್ಮದು: ಮುದುಕಪ್ಪ ಮೇಟಿ

 

ದೇವದುರ್ಗ : ಇಂದಿನ ಆಧುನಿಕ ಯುಗದಲ್ಲಿ ಮರೆಯಾಗುತ್ತಿರುವ ಹಳ್ಳಿಗರ ಜೀವನದ ಶೈಲಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಬಸವ ಶಾಲೆಯ ಬೋಧಕ ವರ್ಗವು ಹೊಸ ವರುಷದ ಈ ಸುದಿನದಲ್ಲಿ ಹಳ್ಳಿ ಮನೆ,ಗುಡಿ,ಹಳ್ಳಿ ಸೊಗಡಿನ ಸಂತೆ,ವ್ಯಾಪರ ಮಳಿಗೆ ಎಲ್ಲವು ಮೂಲಕ ನೋಡುಗರನ್ನು ಕಣ್ಮನ ಸೆಳೆಯುವಂತೆ ಮಾಡಿತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ರಾಮಣ್ಣ ನಾಯಕ ಡಿ.ಕರಡಿಗುಡ್ಡ,ಶ್ರೀ ವಿರುಪಾಕ್ಷಗೌಡ ಚಿಕ್ಕಬೂದೂರು,ಜಯರಾಜ್ ಹಾಗೂ ರಾಜಶೇಖರ್ ಕೊಪ್ಪರ ಸಸಿ ಹಚ್ಚುವ ಮೂಲಕ ದೇಸಿ ಸೊಗಡನ್ನ ಮತ್ತು ಹಳ್ಳಿ ಉಡುಗೆ-ತೊಡುಗೆಯಲ್ಲಿ ಇರುವ ಮಕ್ಕಳನ್ನು ಮಾತಾಡಿಸಿ ಸಂತಸವನ್ನು ಹಂಚಿಕೊಂಡರು. 

ಕಾರ್ಯಕ್ರಮದ ಕುರಿತು ಮಾತನಾಡಿ ನಮ್ಮ ಕಾಲಗತಿಯಲ್ಲಿ ಮರೆಯಾಗುತ್ತಿರುವ ಹಳ್ಳಿ ಜನರ ಬದುಕನ್ನು ಇಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ತುಂಬಾ ಸಂತೋಷಕಾರಿಯಾದ ಸಂಗತಿ ತಂತ್ರಜ್ಞಾನದ ಯುಗದಲ್ಲಿ‌ ಮರೆಯಾಗುತ್ತಿರುವ ದೇಸಿತನ ಉಳಿಸುವ ನಿಮ್ಮ ಈ ಪ್ರಯತ್ನ ಮಾದರಿಯಾಗಲಿದೆ ನಮಗಿದು ಅಚ್ಚರಿ ಮೂಡಿಸಿದೆ ಎಂದು ಕರ್ನಾಟಕ ರಕ್ಷಣಾಸೇನೆಯ ಜಿಲ್ಲಾಧ್ಯಕ್ಷರಾದ ರಾಮಣ್ಣ ನಾಯಕ ಅವರು ಶುಭ ಕೋರಿದರು.

ನಂತರ ಮಾತನಾಡಿ ಇದೊಂದು ವಿಭಿನ್ನ ಕಾರ್ಯಕ್ರಮ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯ ಮಾಡುವುದು ಈಗಿನ ಕಾಲದಲ್ಲಿ ತುಂಬಾ ಅವಶ್ಯಕತೆ ಇದೆ.ನಾವು ನಡೆದು ಬಂದ ಹೆಜ್ಜೆಯನ್ನು ಮರೆಯಬಾರದು ಎಂದು ಮುಖ್ಯಗುರುಳಾದ ಮುದುಕಪ್ಪ ಮೇಟಿ ದೇಸಿ ಹಬ್ಬದ ಮಹತ್ವದ ಕುರಿತು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಪ್ರಿಯಾಂಕ ಮೃತ್ಯುಂಜಯ್ ಪಾಟೀಲ್, ಶ್ರೀ ಮತಿ ಸವಿತಾ ಪಾಟೀಲ್, ಸಹ ಶಿಕ್ಷಕರಾದ ಜಿ.ರಂಗನಾಥ,ದೇವರಾಜ ನಾಯಕ, ಅಲಿಸಾಬ್,ಕುಲ್ಸುಂಬಿ, ನಾಗಮ್ಮ,ಹಲಿಮಾ,ಪೂಜಾ, ಸೀತಾ, ಮತ್ತು ಹಳ್ಳಿವೇಷದಾರಿಯಾದ ಮುದ್ದು ಮಕ್ಕಳು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*