ಬುದ್ಧ.ಬಸವ.ಅಂಬೇಡ್ಕರ್ ರವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು-ಮೌನುದ್ದೀನ್ ಬೂದಿನಾಳ್.
ದೇವದುರ್ಗ:ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಶಾವಂತಗಲ್ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ.
ಶರಣು ವಿಶ್ವ ವಚನ ಫೌಂಡೇಶನ್ ಮೈಸೂರು, ರಾಯಚೂರು ಜಿಲ್ಲಾ ಘಟಕ ಹಾಗೂ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಾವಂತಗಲ್ ತಾಲೂಕ ದೇವದುರ್ಗ ಜಿಲ್ಲಾ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀಮತಿ ದೇವೇಂದ್ರಮ್ಮ ರಾಯಚೂರು ಜಿಲ್ಲಾ ಗೌರವ ಅಧ್ಯಕ್ಷರು ಮಾತನಾಡಿ ನಡೆಯಿಂದ ನುಡಿ. ರೂಪುಗೊಳ್ಳುತ್ತದೆ,ಆದರಿಂದ ಬುದ್ಧಿವಂತಿಕೆಯ ಬಿನ್ನಾಣದ ಮಾತು ಥರವಲ್ಲ,ಮಾತು ಹಾಡಿದರೆ ಮುಗೀಯಿತು, ನಾವದಕ್ಕೆ ಬದ್ಧರಾಗಿರಬೇಕು, ಪರಮಾತ್ಮನ ಸಾಕ್ಷಿಯಾಗಿ ವಚನ ಪರಿಪಾಲನೆ ಮಾಡಬೇಕೆಂದು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಹೇಳಿದರು.
ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಚನ್ನಬಸವ ಅಧ್ಯಕ್ಷರು.ಶರಣು ವಿಶ್ವ ವಚನ ಫೌಂಡೇಶನ್ ಸಿರವಾರ ಇವರು ತಮ್ಮ ವಿಶೇಷ ಉಪನ್ಯಾಸದಲ್ಲಿ ವರ್ಗ.ವರ್ಣ.ಜಾತಿ.ಮತ ರಹಿತ.ಹಾಗೂ ಪುರುಷ ಮಹಿಳೆ ಎಂಬ ಬೇಧ ಭಾವ ಇಲ್ಲದ ಸಮ ಸಮಾಜದ ನಿರ್ಮಾಣಕ್ಕೆ ಶರಣರ ಪಾತ್ರ ಬಹು ದೊಡ್ಡದು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಮೌನುದ್ದೀನ್ ಬೂದಿನಾಳ್ ಇವರು ಮಾತನಾಡಿ.ಬುದ್ಧ. ಬಸವ.ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳನ್ನು ಹಾಗೂ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಆಸೀಫ್ ಅಲಿ ಮಾತಾನಾಡಿ ದಯವೇ ಧರ್ಮದ ಮೂಲವಯ್ಯ ಎನ್ನುವಂತ ಬಸವಣ್ಣನವರ ವಚನದ ಮುಖಾಂತರ ವಿದ್ಯಾರ್ಥಿಗಳಿಗೆ ವಚನಗಳ ಸಾರಾಂಶವನ್ನು ತಿಳಿಸಿದರು.
ಅದೇ ರೀತಿ ಮಹಾಂತೇಶ ಗವಿಗಟ್ಟ,ವಿಜಯ ಕುಮಾರ್ ಶಾಖಾಪೂರ,ಅಮರ ಗುಂಡಪ್ಪ ಹೂಗಾರ,ಡಾ.ನಬಿಸಾಬ್ ಹಿರೇದಿನ್ನಿ ಸಿಂಧನೂರು ಇವರು ಹನ್ನೆರಡನೇ ಶತಮಾನದ ಶರಣರ ವಚನಗಳ ಕುರಿತು ಮಾತನಾಡಿದರು.
ಶಾಲೆಯ ವಿದ್ಯಾರ್ಥಿಗಳು ವಚನ ವಾಚನ ಮಾಡಿದರು, ಎಲ್ಲಾ ವಿದ್ಯಾರ್ಥಿಗಳಿಗೂ ಶರಣು ವಿಶ್ವ ವಚನ ಫೌಂಡೇಶನ್ ನಿಂದ ವಚನಗಳ ಪುಸ್ತಕ ಗಳನ್ನು,ವಚನ ವಾಚನ ಮಾಡಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
ಬೆಟ್ಟಪ್ಪ ಕಸ್ತೂರಿ ಆಶಯ ನುಡಿಗಳನ್ನಾಡುತ್ತಾ ವಿದ್ಯಾರ್ಥಿಗಳು ಜೀವನದಲ್ಲಿ ವಚನಗಳ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಹನುಮಂತ ವಾಲೇಕರ್ ಸ.ಶಿ.ನಿರೂಪಣೆ ಮಾಡಿದರು .
ಈ ಕಾರ್ಯಕ್ರಮದಲ್ಲಿ ಶಾಲೆಯ ಸಿಬ್ಬಂದಿಗಳು,ಶರಣು ವಿಶ್ವ ವಚನ ಫೌಂಡೇಶನ್ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ