ತಾಯಿ ಮತ್ತು ಅಣ್ಣನ ಆಸರೆಯಿಂದ ಡಾಕ್ಟರೇಟ್ ಪದವಿ ಪಡೆದ ಗ್ರಾಮೀಣ ಪ್ರತಿಭೆ ಹನುಮಯ್ಯ ಗೋನವಾರ

 

ಸಿಂಧನೂರು : ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗೋನವಾರ ಗ್ರಾಮದ ಹನುಮಯ್ಯ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಡಾಕ್ಟರೇಟ್(ಪಿ.ಎಚ್.ಡಿ) ಪದವಿಯನ್ನು ಘೋಷಿಸಿದೆ.

ಹನುಮಯ್ಯ ಅವರು ಮಹಿಳಾ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಶೈಲಜಾ ಇಂ.ಹಿರೇಮಠ ಅವರ ಮಾರ್ಗದರ್ಶನದಲ್ಲಿ ದೇವದಾಸಿಯರ ಮಕ್ಕಳ ಅಧ್ಯಯನ : ಸಮಾಜ ಮತ್ತು ಸರಕಾರದ ಯೋಜನೆಗಳನ್ನು ಅನುಲಕ್ಷಿಸಿ ಎಂಬ ವಿಷಯದ ಕುರಿತು ಪಿಎಚ್.ಡಿ ಮಹಾಪ್ರಬಂಧವನ್ನು ಸಲ್ಲಿಸಿದ್ದಾರೆ.

ಇವರು ಸಿಂಧನೂರು ತಾಲೂಕಿನ ಗೋನವಾರ ಗ್ರಾಮದ ಶ್ರೀಮತಿ ಮರಿಯಮ್ಮ ದೇವದಾಸಿ ಅವರ ಎಂಟು ಜನ ಮಕ್ಕಳಲ್ಲಿ ಹನುಮಯ್ಯ ಒಬ್ಬರಾಗಿದ್ದು,ಗೋನವಾರ ಗ್ರಾಮದ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಪಡೆದು,ಸಿಂಧನೂರಿನ ಸೃಷ್ಠಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಹಾಗೂ ಸರಕಾರಿ ಮಹಾವಿದ್ಯಾಲಯದಲ್ಲಿ ಪದವಿಯನ್ನು ಡಿಸ್ಟಿಂಕ್ಷನಲ್ಲಿ ಮುಗಿಸಿದ್ದಾರೆ.ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದಲ್ಲಿ ಎಂಎ ಸ್ನಾತಕೋತ್ತರ ಪದವಿಯನ್ನು ನಾಲ್ಕನೇ ರಾಂಕ್ ನಲ್ಲಿ ಪಡೆದಿದ್ದಾರೆ.

ಇನ್ನೂ ಇವರು ಕಡು ಬಡತನದಲ್ಲಿ ಕೂಲಿ ಕೆಲಸ ಮಾಡಿಕೊಂಡು ಡಾಕ್ಟರೇಟ್ ಪದವಿ ಪಡೆದ ಗ್ರಾಮೀಣ ಪ್ರದೇಶದ ಹನುಮಯ್ಯ ಅವರನ್ನು ಕುಟುಂಬದ ಸದಸ್ಯರು ಮತ್ತು ಗೋನವಾರ ಗ್ರಾಮದ ಜನರು ಅಭಿನಂದಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*