ಉಪನೋಂದಣಿ (ಸಬ್ ರಿಜೀಸ್ಟರ್) ಕಛೇರಿ ಪ್ರಾರಂಭಿಸಲು ಒತ್ತಾಯ

 

ಮಸ್ಕಿ : ಮಸ್ಕಿಯಲ್ಲಿ ನೂತನವಾಗಿ ಉಪನೋಂದಣಿ(ಸಬ್ ರಿಜೀಸ್ಟರ್) ಕಛೇರಿ ಪ್ರಾರಂಭ ಮಾಡುವ ಸಲುವಾಗಿ ಮಾನ್ಯ ತಹಶೀಲ್ದಾರರು ಮಸ್ಕಿ ಹಾಗೂ ಆರ್ ಬಸನಗೌಡ ತುರ್ವಿಹಾಳ್ ಶಾಸಕರು ಮಸ್ಕಿ ಇವರ ಆಪ್ತ ಕಾರ್ಯದರ್ಶಿಯವರ ಮುಂಖಾಂತರ ಸಿದ್ದರಾಮಯ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ ಇವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)(ದಾದಾಸಾಹೇಬ್ ಡಾ.ಎನ್ ಮೂರ್ತಿ ಸ್ಥಾಪಿತ) ಮಸ್ಕಿ ನಗರ ಘಟಕ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಿದರು.

ನೂತನ ಮಸ್ಕಿ ತಾಲೂಕು 2018ರಲ್ಲಿ ಉದ್ಘಾಟನೆಗೊಂಡು ಸುಮಾರು 7ನೇ ವರ್ಷವಾದರು ಮಸ್ಕಿಯಲ್ಲಿ ಉಪನೋಂದಣಿ ಕಛೇರಿ ತೆರೆದುಕೊಂಡಿಲ್ಲ.

ಮಸ್ಕಿ ತಾಲೂಕಿನಲ್ಲಿ 143 ಗ್ರಾಮಗಳು ಹಾಗೂ 20 ತಾಂಡಗಳು 6 ಹೋಬಳಿಯಗಳು ಇದ್ದು,7 ವರ್ಷಗಳು ಆದರೂ ಜನರು ಸರಕಾರಿ ಕೆಲಸಕ್ಕೆ ಮನವಿ,ಲಿಂಗಸ್ಗೂರು,ಸಿಂಧನೂರು 3 ತಾಲೂಕಿಗೆ ಅಲೆದಾಡುವುದು ಇನ್ನೂ ತಪ್ಪಿಲ್ಲ.2018ರಲ್ಲಿ ಕಾಂಗ್ರೆಸ್ ಸರಕಾರದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ರಾಯಚೂರು ಜಿಲ್ಲೆಯ ಎರಡು ನೂತನವಾಗಿ ತಾಲೂಕಗಳಾಗಿ ಘೋಷಣೆ ಮಾಡಿದ್ದು,ಅದರಂತೆ ಈಗಾಗಲೆ ಸಿರವಾರ ತಾಲೂಕಿಗೆ ಉಪನೋಂದಣಿ ಕಛೇರಿ ಪ್ರಾರಂಭವಾಗಿದ್ದು,ಆದರೆ ಮಸ್ಕಿ ತಾಲೂಕಿನಲ್ಲಿ ಇನ್ನೂವರೆಗೆ ಯಾವುದೇ ನೋಂದಣಿ ಕಛೇರಿ ಪ್ರಾರಂಭವಾಗಿರುವುದಿಲ್ಲ.ಇದರಿಂದ ನಮ್ಮ ತಾಲೂಕಿನ ಎಲ್ಲಾ ಜನರಿಗೆ ವಿವಾಹ,ಖರೀದಿ,ವಿಭಾಗ,ಮರಣ ಶಾಸನ ಇನ್ನೂ ಮುಂತಾದ ನೋಂದಣಿ ಕಾರ್ಯಕ್ಕೆ ಹಾಗೂ ತಾಲೂಕಿನ ಅಭಿವೃದ್ಧಿಗೆ ತಡೆ ಹಿಡಿದಂತಾಗಿದೆ.ನೋಂದಣಿ ಕಛೇರಿ ಇಲ್ಲದಿರುವುದರಿಂದ ಮಾರಾಟ ವಹಿವಾಟುಗಳು ಕುಂಟಿತಗೊಂಡಿದ್ದು,ಮತ್ತು ಜನರಿಗೆ ಮೂರು ತಾಲೂಕುಗಳಿಗೆ ಅಲೇದಾಡಿ ಸಾಕಾಗಿರುತ್ತದೆ.ಇಲ್ಲಿ ತಹಶೀಲ್ ಕಛೇರಿ ಒಂದು ಮಾತ್ರ ಇದ್ದು.ಉಳಿದ ಕಛೇರಿಗಳಿಗೆ ಈ ಹಿಂದಿನ ಮೂರು ತಾಲೂಕುಗಳಲ್ಲಿಯೇ ಇರುತ್ತವೆ.ಅಲ್ಲಿಗೆ ಹೋಗಿ ಅಲ್ಲಿಂದ ಇಲ್ಲಿಗೆ ಬರುವುದು ತುಂಬಾ ಹೈರಾಣದ ಕೆಲಸವಾಗಿರುತ್ತದೆ ಎಂದು ಒತ್ತಾಯಿಸಲಾಯಿತು.

ಆದ್ದರಿಂದ ತಾವುಗಳು ಆದಷ್ಟು ಬೇಗನೆ ನಮ್ಮ ತಾಲೂಕಿಗೆ ನೋಂದಣಿ ಕಛೇರಿ ಪ್ರಾರಂಭಿಸಬೇಕೆಂದು ನಮ್ಮ ಸಂಘಟನೆ ವತಿಯಿಂದ ಕೇಳಿಕೊಳ್ಳುತ್ತೇವೆ,ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಮಲ್ಲಿಕ್ ಮುರಾರಿ ಅಧ್ಯಕ್ಷ,ಸಿದ್ದು ಸೆಳ್ಳೆದ ಉದ್ದಾಳ(ಯು) ತಾ.ಉಪಾಧ್ಯಕ್ಷ,ನಾಗರಾಜ ಅಂತರಗಂಗಿ,ವೆಂಕಟೇಶ ಮಸ್ಕಿ,ರವಿಕುಮಾರ ನಾಯಕ ಉದ್ಬಾಳ,ಬಸವರಾಜ ಹೆಡಗಿಬಾಳ ಕ್ಯಾಂಪ್ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*