16 ರಂದು ಸಂಪೂರ್ಣ ರಾಮಾಯಣ ಬಯಲಾಟ.

 ವರದಿ - ಮಂಜುನಾಥ್ ಕೋಳೂರು ಕೊಪ್ಪಳ

 ಕೊಪ್ಪಳ: - ಪ್ರತಿ ವರ್ಷದಂತೆ ಗವಿಮಠದ ಜಾತ್ರೆಯ ಅಂಗವಾಗಿ ಬಸವೇಶ್ವರ ನಗರದ ಮಾರುತೇಶ್ವರ ಬೈಲಾಟ (ದೊಡ್ಡಾಟ )ಸಂಘದಿಂದ ಜೆ.ಪಿ ಮಾರುಕಟ್ಟೆಯ ಹತ್ತಿರ ಬಾಬು ಜಗಜೀವನ್ ರಾಮ್ ವೃತ್ತದ ಬಳಿ ಜನವರಿ 16ರಂದು ರಾತ್ರಿ 9:30 ರಿಂದ "ಸಂಪೂರ್ಣ ರಾಮಾಯಣ "ಬೈಲಾಟ ಪ್ರದರ್ಶನ ನಡೆಯಲಿದೆ. ಕಲಾವಿದ ನಿಂಗಪ್ಪ ದೊಡ್ಮನಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೊಪ್ಪಳದ ಬಸವೇಶ್ವರ ನಗರದ ಮಾದಿಗ ಸಮುದಾಯದ ಹಿರಿಯರು ಕಳೆದ ಆರು ದಶಕಗಳಿಂದ ವಿವಿಧ ಬಯಲಾಟದ ಕಥೆಗಳನ್ನು ಉಚಿತವಾಗಿ ಪ್ರದರ್ಶನ ಮಾಡುತ್ತಾ ಬಂದಿದ್ದಾರೆ ಈಗಲೂ ಅದನ್ನು ಮುಂದುವರಿಸಿಕೊಂಡು ಬರಲಾಗಿದೆ ಎಂದು ಹೇಳಿದರು. ಈ ಬೈಲಾಟದಲ್ಲಿ ಸ್ತ್ರೀ ಪಾತ್ರವನ್ನು ಪುರುಷರೇ ನಿರ್ವಹಣೆ ಮಾಡುತ್ತಾರೆ . ಬಯಲಾಟದ ಹಾರ್ಮೋನಿಯಂ ಮಾಸ್ತರಾಗಿ ದೇವಪ್ಪ ಹಳ್ಳಿಕೇರಿ, ಮದಲಿ (ಮೃದಂಗ )ಮಾಸ್ಟರ್ ರಾಗಿ ಗೋವಿಂದಪ್ಪ ಹ್ಯಾಟಿ , ಕತೆಗಾರ ಮಾಸ್ತರ್ ಆಗಿ ಹನುಮಂತಪ್ಪ ಲೇಬಗೆರಿ, ಇಮ್ಯಾಳದ ಪ್ರಮುಖರುಗಳಾಗಿ ಚನ್ನಬಸಪ್ಪ ಹೊಳೆಪ್ಪನವರ್, ಗವಿಸಿದ್ದಪ್ಪ ಗಿಣಿಗೇರಿ , ವಿರುಪಾಕ್ಷಪ್ಪ ಕಂದಾರಿ , ಹನುಮಂತಪ್ಪ ಗಿಣಿಗೇರಿ ಸಹಕರಿಸಲಿದ್ದಾರೆ ಎಂದು ಹೇಳಿದರು. ಬೈಲಾಟದಲ್ಲಿ ವಿಶೇಷವೆಂದರೆ ಸಹೋದರರು ಶ್ರೀರಾಮಚಂದ್ರ - ಸೀತಾದೇವಿಯಾಗಿ ಅಭಿನಯಿಸುತ್ತಿರುವುದು. ಶ್ರೀರಾಮಚಂದ್ರನಾಗಿ ನಿಂಗಪ್ಪ ದೊಡ್ಮನಿ ಸೀತಾದೇವಿಯಾಗಿ ರಾಜಶೇಖರ್ ದೊಡ್ಮನಿ ಅಭಿನಯ ಮಾಡುವರು. ದಶರಥ ಪಾತ್ರ- ದುರ್ಗಪ್ಪ ಕಂದಾರಿ , ಕೌಶಲ್ಯ ದೇವಿ ಪಾತ್ರ- ರವಿಕುಮಾರ್ ಕಿರುಬಂಡಿ, ಕೈಕೆಯ ಪಾತ್ರ- ದುರ್ಗಪ್ಪ ಈರಪ್ಪ ಕಂದಾರಿ , ಲಕ್ಷ್ಮಣ್ ಪಾತ್ರ -ನಿಂಗಪ್ಪ ಮ್ಯಾಗಳಮನಿ , ಸೂರ್ಪನಕಿ ಪಾತ್ರ- ಚಿರಂಜೀವಿ ದೊಡ್ಮನಿ , ಮಾಯಾ ಪಾತ್ರ -ದೇವಪ್ಪ ಗಿಣಿಗೇರಿ, ತ್ರಿಶೂರ ಪಾತ್ರ - ಚಿರಂಜೀವಿ ದೊಡ್ಡಮನಿ, ಖರಾಸುರ ಹಾಗೂ ದೂಷಣಾ ಸೂರ ಪಾತ್ರ- ಆನಂದ ದೊಡ್ಡಮನಿ , ರಾವಣ ಶೂರ ಪಾತ್ರ -ಗವಿಸಿದ್ದಪ್ಪ ಕಟ್ಟಿಮನಿ , ಮಾರಿಚ ಪಾತ್ರ - ಹನುಮಂತಪ್ಪ ಗಿಣಿಗೇರಿ, ಮಂಡೋದರಿ ಪಾತ್ರ- ರವಿಕುಮಾರ್ ಹೊಸಮನಿ , ಸನ್ಯಾಸಿ ಪಾತ್ರ - ಶಿವಪುತ್ರಪ್ಪ ಬಂಗಾರಿ, ಸುಗ್ರೀವ ಪಾತ್ರ- ವಿಠ್ಠಲ್ ಹೊಳೆಪ್ಪನವರ್, ಹನುಮಂತನ ಪಾತ್ರ- ಮಹೇಶ್ ಕಂದಾರಿ, ವಾಲಿಪಾತ್ರ -ಹರಿಪ್ರಸಾದ್ ಬಂಗಾರಿ , ಲೇಕಿನಿ ಪಾತ್ರ- ಚಿರಂಜೀವಿ ಗಿಣಿಗೇರಿ, ಇಂದ್ರಜಿತ್ ಪಾತ್ರ -ಸಂಜು ಕುಮಾರ್ , ವಿಭೂಷಣ ಪಾತ್ರ - ಪ್ರಕಾಶ್ ನಾಗಮ್ಮನವರ್ , ಕುಂಭಕರ್ಣ ಪಾತ್ರ - ಸುರೇಶ್ ಕಾರಟಗಿ ನಿರ್ವಹಿಸುವರು ಎಂದು ಹೇಳಿದರು ಸುದ್ದಿಗೋಷ್ಠಿಯಲ್ಲಿ ಚನ್ನಬಸಪ್ಪ ಹೋಳೆಪ್ನವರ್ , ರಾಜಶೇಖರ್ ದೊಡ್ಮನಿ , ಗವಿಸಿದ್ದಪ್ಪ ಕಟ್ಟಿಮನಿ, ಗವಿಸಿದ್ದಪ್ಪ ಗಿಣಿಗೇರಿ ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*