ಶ್ರೀಮತಿ ಇಂದಿರಾ ಬಿ ಕೃಷ್ಣಪ್ಪ. ಅಮ್ಮನ ಆಶೀರ್ವಾದ ಪಡೆದು. ರಾಷ್ಟ್ರಪ್ರಶಸ್ತಿ ಸ್ವೀಕರಿಸಿದ ಜಮದಗ್ನಿ ಕೋಠಾ
ಬೆಂಗಳೂರು:ಬೆಂಗಳೂರಿನ ದರ್ಶನ್ ಸೋಶಿಯಲ್ ಅಂಡ್ ಕಲ್ಚರಲ್ ಅಕಾಡೆಮಿಯ(ಡಿಸಿಎ) ಸಂಸ್ಥಾಪಕರಾದ ಶ್ರೀಮತಿ ರೇಣುಕಾ ಪಿ ಸಂಸ್ಥಾಪಕ ಅಧ್ಯಕ್ಷರು ಹಾಗೂ ಅಧ್ಯಕ್ಷರಾದ ದರ್ಶನ್.ಯು.ಹಾಗೂ ಸ್ನೇಹಿತರ ಬಳಗ
ವತಿಯಿಂದ.ಕಳೆದ 17 ವರ್ಷಗಳಿಂದ ಸಮಾಜ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ 350 ಕ್ಕೂ ಹೆಚ್ಚು ಜನಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ.ಹಲವಾರು ಸಾಧನೆಗಳನ್ನು ಮಾಡುತ್ತಾ. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿದಂತ ಗಣ್ಯ ಸಾಧಕರನ್ನು ಗುರುತಿ ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.ಹಾಗೂ ಕಲಾ ಪ್ರತಿಭೆ.ಜಾಣ್ಮೆ ಹಾಗೂ ನುರಿತ ವಿದ್ಯೆಯನ್ನು ಹೊರ ತರಲು ಇಂತಹ ಕಾರ್ಯಕ್ರಮಗಳು.ಕಲಾ ಪ್ರದರ್ಶನಗಳು. ಅತ್ಯವಶ್ಯಕವಾಗಿದ್ದು ಇದುವೇ ಈ ಸಂಸ್ಥೆಯ ಮೂಲ ಧ್ಯೇಯವಾಗಿದೆ.
"ಯುವ ಸಂಭ್ರಮ"ದರ್ಶನ್ ಸೋಶಿಯಲ್ ಅಂಡ್ ಅಕಾಡೆಮಿ ಬೆಂಗಳೂರು ವತಿಯಿಂದ.98ನೆಯ ಸಾಂಸ್ಕೃತಿಕ ಕಾರ್ಯಕ್ರಮ.ಹಾಗೂ 2024 -25ನೇ ಸಾಲಿನ ಸಾಧಕರಿಗೆ ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ಯನ್ನು.ಸಾಂಸ್ಕೃತಿಕ ಕಲಾ ಗ್ರಾಮದಲ್ಲಿ 12-01-2025 ರಂದು ದರ್ಶನ್ ಸೋಶಿಯಲ್ ಅಂಡ್ ಕಲ್ಚರಲ್ ಅಕಾಡೆಮಿ ವತಿಯಿಂದ ಯುವ ಸಂಭ್ರಮ ವೇದಿಕೆಯಲ್ಲಿ.ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ.
ಕಾರ್ಯಕ್ರಮದ ದಿವ್ಯ ಅಧ್ಯಕ್ಷತೆ ಶ್ರೀನಿವಾಸ್ ಮೂರ್ತಿ ಚಲನಚಿತ್ರ ಮತ್ತು ಕಿರುತೆರೆ ನಟರು.
ಪ್ರಶಸ್ತಿ ಪ್ರಧಾನ ಡಾಕ್ಟರ್ ಅಂಜನಪ್ಪ ವೈದ್ಯಕೀಯ ಕ್ಷೇತ್ರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.ಮಹೇಂದ್ರ ಮುನ್ನೋತ್ ಚಲನಚಿತ್ರ ನಿರ್ಮಾಪಕರು ಮತ್ತು ಸಮಾಜ ಸೇವಕರು.ಶ್ರೀಲಕ್ಷ್ಮಿ ಪತಯ್ಯ ಸಹಕಾರ ಸಂಘಗಳ ಅಪರ ನಿಬಂಧಕರು ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಸಹಕಾರ ಮಂಡಳಿ.ಗಣೇಶ್ ರಾವ್ ಚಲನಚಿತ್ರ ನಟರು ನವೀನ್ ಶಂಕರ್ ಚಲನಚಿತ್ರನಟರು ಈ ಎಲ್ಲಾ ಗಣ್ಯಮಾನ್ಯರಿಂದ. ದೀಪಾ ಬೆಳಗಿಸುವ ಮುಖಾಂತರ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.
ನಂತರ ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಜಮದಗ್ನಿ ಕೋಠಾ ಎಸ್ಸಿ ಎಸ್ಟಿ ನೌಕರರ ಸಂಘದ ಅಧ್ಯಕ್ಷರು ಹಟ್ಟಿ ಚಿನ್ನದ ಗಣಿ.ಇವರು ಮೇದಾವಿರಾಯನ ಕೋಠಾ ಎಂಬ ಕುಗ್ರಾಮದಿಂದ ಹೋರಾಟದ ಚುಲುಮೆಯಾಗಿ. ಚಿಗುರೋಡೆದಂತಹ ಶ್ರೀ ಜಮದಗ್ಮಿ ಕೋಠಾ ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ.ಬೆಂಗಳೂರಿನ ದರ್ಶನ್ ಸೋಶಿಯಲ್ ಅಂಡ್ ಕಲ್ಚರಲ್ ಅಕಾಡೆಮಿ ವತಿಯಿಂದ ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ಪ್ರಶಸ್ತಿ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕರ್ನಾಟಕದ ಅಂಬೇಡ್ಕರ್ ಎಂದೇ ಖ್ಯಾತ ನಾಮರಾದ ದಲಿತ ಸಂಘರ್ಷ ಸಮಿತಿಯ ಪಿತಾಮಹರಾದಂತ ಪ್ರೊಫೆಸರ್ ಬಿ ಕೃಷ್ಣಪ್ಪ ರವರ ಧರ್ಮ ಪತ್ನಿ ಶ್ರೀಮತಿ ಇಂದಿರಾ ಬಿ ಕೃಷ್ಣಪ್ಪರವರ ಗಮಿಸಿ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಶ್ರೀ ಜಮದಗ್ನಿ ಕೋಠಾ ಇವರಿಗೆ ಶುಭ ಹಾರೈಸಿದರು.ಹಾಗೂ ಹಟ್ಟಿ ಚಿನ್ನದ ಗಣಿಯ ಎಸ್ಸಿ ಎಸ್ಟಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶರಣಗೌಡ ಗುರಿಕಾರ್ ಹಾಗೂ ಸರ್ವ ಸದಸ್ಯರು. ಹಾಗೂ ಕುಟುಂಬ ಸದಸ್ಯರು.ಹಾಗೂ ಎಂ ಜೆ ವೈ ಎಸ್ ಸಂಘಟನೆಯ ಅಧ್ಯಕ್ಷರಾದ ಶ್ರೀ ವಿಜಯಕುಮಾರ್ ಹಟ್ಟಿ ಹಾಗೂ ಸರ್ವ ಸದಸ್ಯರು.ಹಿತೈಷಿಗಳು.ಸ್ನೇಹಿತರು.
ಡಿಸಿಎ ರಾಷ್ಟ್ರಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿ ಶುಭ ಹಾರೈಸಿದರು ಹಾಗೂ ಜೈ ಭೀಮ್ ಜೈ ಭೀಮ್ ಎಂದು ಘೋಷಣೆ ಹಾಕುತ್ತಾಹರ್ಷ ವ್ಯಕ್ತಪಡಿಸಿದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ