ಪ ಪೂ.ಮುರುಘೆoದ್ರ ಶಿವಯೋಗಿ ಯಾರಡೋಣ ಶ್ರೀಗಳಿಂದ.ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ.
ಲಿಂಗಸಗೂರು-ಶರಣು ಶ್ರೀ ಸೌಹಾರ್ದ ಪತ್ತಿನ ಸಹಕಾರಿ ಸಂಘದ 3ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಭ್ರಮರಾಂಬ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಮಸ್ಕಿ.ಹಾಗೂ ಕಾಮರೆಡ್ಡಿ ಮಕ್ಕಳ ಆಸ್ಪತ್ರೆ ಮತ್ತು ಶ್ರೀ ಅದ್ವಿಕಾ ಸ್ಕೂಲ್ ಆಫ್ ನರ್ಸಿಂಗ್ ಇವರ ಸಹಯೋಗದಲ್ಲಿ ಮತ್ತು ಪ ಪೂ॥ ಶ್ರೀ ಶ್ರೀ ಮುರುಘೆoದ್ರ ಶಿವಯೋಗಿಗಳು ಗುರುಮಠ ಯರಡೋಣಾ ಇವರು ದಿವ್ಯ ಸಾನಿದ್ಯ ವಹಿಸಿ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ನಂತರ ಮಾತನಾಡಿದ ಅವರು
ಶರಣು ಶ್ರೀ ಸೌಹಾರ್ದ ಪತ್ತಿನ ಸಹಕಾರಿ ಸಂಘ 11 ಲಕ್ಷ ಠೇವಣಿ ಹಣದಿಂದ ಪ್ರಾರಂಭವಾಗಿದ್ದು ಈಗಿನ ಲೇವಾದೇವಿ 18 ಕೋಟಿ ಯಷ್ಟು ಲೇವಾದೇವಿ ನೆಡೆಯುತ್ತಿದೆ.ಎಲ್ಲಾ ಸಹಕಾರಿ ಬ್ಯಾಂಕಿನವರು ಪ್ರತಿಭಾ ಪುರಸ್ಕಾರ ಹಾಗೂ ಬೇರೆ ಬೇರೆ ರೀತಿಯ ಕಾರ್ಯಕ್ರಮ ಕ್ಕೆ ತೊಡಗಿಸಿ ಕೊಳ್ಳುತ್ತಾರೆ.ಜೊತೆಗೆ ಹಣ ಯಾವರೀತಿ ಮಾಡುವುದು ಎಂದು ಕಾರ್ಯಕ್ರಮ ರೂಪಿಸುತ್ತಾರೆ.ಆದರೆ ಶರಣು ಶ್ರೀ ಸಹಕಾರಿ ಸಂಘದವರು ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿ ತಾಲೂಕಿನ ಎಲ್ಲಾ ಬಡಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಕಾರ್ಯಕ್ರಮ ಮಾಡಿದ್ದು ಸ್ಲಾಘನೀಯ ವಾಗಿದೆ ಇದೇ ರೀತಿ ಮುಂದೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ಇಂತಹ ಕಾರ್ಯಕ್ರಮಗಳು ನಡೆಸಲಿ ಬಡಜನರ ಪಾಲಿಗೆ ಈ ಸಹಕಾರಿ ಬ್ಯಾಂಕ್ ಉತ್ತಮ ಕೆಲಸ ಮಾಡುವುದನ್ನ ಮುಂದುವರೆಸಲಿ
ಈ ಬ್ಯಾಂಕ್ ಬಡಜನರ ಭುಜಬಲವಾಗಿ ಹೊರ ಹೊಮ್ಮೇಲಿ.ಉತ್ತಮ ನಾಗು. ಉಪಕಾರಿಯಾಗು ಎನ್ನುವಂತೆ.ಈ ಸಹಕಾರಿ ಪತ್ತಿನ ಸಂಘ ಉತ್ತಮ ಸೇವೆ ಮಾಡುತ್ತಿದೆ ಎಂದು ಹೇಳಿದರು. ನಂತರ ಎಲ್ಲಾ ವೈದ್ಯರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಡಾ. ರುದ್ರಗೌಡ ಪೋಲಿಸ್ ಪಾಟೀಲ್ ಎಂಬಿಬಿಎಸ್ ಮುಖ್ಯ ವೈದ್ಯಾಧಿಕಾರಿಗಳು,ತಾಲೂಕು ಸಾರ್ವಜನಿಕ ಆಸ್ಪತ್ರೆ ಲಿಂಗಸುಗೂರು,
ಡಾ.ವಿನೋದ್ ಅಂಗಡಿ ಎಂಬಿಪಿಎಸ್.ಎಂಡಿ.ಡಿ ಎನ್ ಬಿ.ಹಾಗೂ ಭ್ರಮರಾಂಬ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಸ್ಕಿ .ಡಾ.ಸಂಜೀವ ರೆಡ್ಡಿ ಎಂಬಿಬಿಎಸ್.ಎಂಡಿ. ಕಾಮರಡ್ಡಿ ಮಕ್ಕಳ ಆಸ್ಪತ್ರೆ,ಡಾ.ವಿದ್ಯಾಶ್ರೀ ವಿನೋದ ಅಂಗಡಿ ಎಂಡಿಬಿಎಸ್.ಎಂಡಿ. ಶರಣು ಶ್ರೀ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ನಾಗನಗೌಡ ಹಾಗೂ ಶರಣು ಶ್ರೀ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಸಿ ಇ ಓ ಸುರೇಶ ಪಾಟೀಲ್ , ಬಸವನ ಗೌಡ ಕರಡಕಲ್ ಸೇರಿದಂತೆ ಸಿಬ್ಬಂದಿಗಳು ವಿದ್ಯಾರ್ಥಿಗಳು,ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ