ಸಮಾನತೆಯ ತತ್ವವನ್ನು ಜಗತ್ತಿಗೆ ಸಾರಿದವರು ಅಂಬಿಗರ ಚೌಡಯ್ಯ : ಆರ್ ಸಿದ್ದನಗೌಡ ತುರುವಿಹಾಳ

 

ಮಸ್ಕಿ : ಪಟ್ಟಣದ ಗಚ್ಚಿನ ಮಠದ ಹತ್ತಿರದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಜರುಗಿತು.

ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಗಚ್ಚಿನ ಹಿರೇಮಠದ ಶ್ರೀ ವರ ರುದ್ರಮುನಿ ಸ್ವಾಮಿಗಳು ಪುಷ್ಪ ನಮನ ಸಲ್ಲಿಸಿದರು.

 ಶರಣರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗೆ ಗೌರವ ಸಲ್ಲಿಸಿದಂತಾಗುತ್ತದೆ. 800 ವರ್ಷಗಳ ಹಿಂದೆ, 12ನೇ ಶತಮಾನದಲ್ಲಿ ಸಮಾನತೆಯ ತತ್ವವನ್ನು ಜಗತ್ತಿಗೆ ಸಾರಿದವರು ಅಂಬಿಗರ ಚೌಡಯ್ಯನವರು ಎಂದು ಕೆಪಿಸಿಸಿ ರಾಜ್ಯ ಪ್ರಧಾನದರ್ಶಿ ಎಸ್.ಟಿ ಘಟಕ ಆರ್.ಸಿದ್ದನಗೌಡ ತುರುವಿಹಾಳ ರವರು ಹೇಳಿದರು.

ನಂತರ ತಹಶೀಲ್ದಾರರಾದ ಡಾ.ಮಲ್ಲಪ್ಪ.ಕೆ.ಯರಗೋಳ ರವರು ಮಾತನಾಡಿ, ಹಿಂದಿನ ಕಾಲದಲ್ಲಿ ನದಿಯ ದಡವನ್ನು ದಾಟಲು ಯಾವುದೇ ಸೌಕರ್ಯಗಳಿರಲಿಲ್ಲ. ಅಂತಹ ಸಂದರ್ಭದಲ್ಲಿ ನದಿಯ ದಡವನ್ನು ಸೇರಿಸುತ್ತಿದ್ದರು. ಅಂಬಿಗರನ್ನು ನಂಬಿದವರ ಕೈಬಿಡುವುದಿಲ್ಲ ಎಂದು ಕಾರ್ಯಕ್ರಮದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.

ಈ ವೇಳೆ ಗ್ರೇಡ್ ೨ ತಹಶೀಲ್ದಾರರಾದ ಅಶೋಕ್ ಪವರ್, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ,ಪುರಸಭೆ ಉಪಾಧ್ಯಕ್ಷೆ ಗೀತಾ ಶಿವರಾಜ್ ಬುಕ್ಜಣ್ಣ, ಗಂಗಾಮತಸ್ಥ ಸಮಾಜದ ತಾಲೂಕು ಅಧ್ಯಕ್ಷ ನಾಗಭೂಷಣ ಬಾರಿಕೇರ,ಮಲ್ಲಯ್ಯ,ಗಂಗಾಮಸ್ಥ ಸಮಾಜದ ಹಿರಿಯ ಮುಖಂಡ ರಾಜನಾಯ್ಕ,ಮಲ್ಲಯ್ಯಬಳ್ಳಾ,ಮಲ್ಲಯ್ಯ ಮುರಾರಿ, ರವಿ ಮಡಿವಾಳ, ಅಶೋಕ ನಾಯ್ಕ,ಮಹಿಬೂಬು ಹಣಿಗಿ,ಸಿದ್ದು ಮುರಾರಿ, ವೆಂಕಪ್ಪ ನಾಯಕ,ಮಲ್ಲಣ್ಣ, ಮಲ್ಲಪ್ಪ ಬಾರಿಕೇರ, ಹುಸೇನಪ್ಪ, ಹನುಮಂತ, ಅಮರೇಶ್, ಮುದುಕಪ್ಪಸುಂಕನೂರ,ಹನುಮಂತ ಸಾನಬಾಳ,ಮಲ್ಲಯ್ಯ ಜಾಲಗಾರ,ಸೇರಿದಂತೆ ಸಮಾಜದ ಪ್ರಮುಖರು ಯುವಕರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*