ಧರ್ಮಸ್ಥಳ ಸಂಸ್ಥೆ ಆಂಜನೇಯ ದೇವಸ್ಥಾನಕ್ಕೆ ಒಂದು ಲಕ್ಷ ಮೊತ್ತದ ಡಿಡಿ ವಿತರಣೆ
ಮಸ್ಕಿ : ತಾಲೂಕಿನ ಮೆದಕಿನಾಳ ವಲಯದ ಹಂಪನಾಳ ಗ್ರಾಮದ ಕಂಬಗಲ್ ಶ್ರೀ ಆಂಜನೇಯ ದೇವಸ್ಥಾನಕ್ಕೆ ಶ್ರೀ ಕ್ಷೇತ್ರದಿಂದ ಪೂಜ್ಯರು ಮಂಜೂರು ಮಾಡಿರುವ ₹1,00,000 ಲಕ್ಷ ಮೊತ್ತದ ಡಿಡಿ ವಿತರಣೆ ಮಾಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಮಸ್ಕಿ ವತಿಯಿಂದ ಡಿಡಿ ವಿತರಣೆ ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿಗಳಾದ ಶ್ರೀಮತಿ ಶಾಲಿನಿ ಮೇಡಂ ಅವರು ಸಂಸ್ಥೆಯ ಕಾರ್ಯಕ್ರಮಗಳ ಕುರಿತಾಗಿ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ, ಸಾಮಾಜಿಕ ಕಾರ್ಯಕ್ರಮ ಯೋಜನೆಯ ಹಲವು ಕಾರ್ಯಕ್ರಮಗಳ ಕುರಿತಾಗಿ ಗ್ರಾಮದ ಸಜ್ಜನರಿಗೆ ಮಾಹಿತಿ ನೀಡಿದರು ಮತ್ತು ಜನಜಾಗೃತಿ ಸದಸ್ಯರಾದ ರಾಜಣ್ಣ ಪರಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು ಮತ್ತು ಶ್ರೀ ಆಂಜನೇಯ ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷರು ಪಂಪಣ್ಣ , ಕಾರ್ಯದರ್ಶಿ ಸುಗರಯ್ಯ ಸ್ವಾಮಿ , ಕಮಿಟಿಯ ಸರ್ವ ಸದಸ್ಯರು,ಹಾಗೂ ಜನಜಾಗೃತಿ ಸದಸ್ಯರಾದ ರಾಜಣ್ಣ ಪರಡ್ಡಿ , ವಲಯದ ಮೇಲ್ವಿಚಾರಕರಾದ ಪ್ರಸನ್ನ ಸರ್ ಹಾಗೂ ಸ್ವಸಹಾಯ ಸಂಘದ ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು,ಎಷ್ಟೋ ಗ್ರಾಮ ಮಟ್ಟದಲ್ಲಿ ದೇವಸ್ಥಾನ ಜೀರ್ಣೋದ್ದಾರಕ್ಕೆ ಕೈ ಜೋಡಿಸುತ್ತಿರುವ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು ಮತ್ತು ಋಣಿಯಾಗಿರುತ್ತೇವೆ ಎಂದು ತಿಳಿಸಿದರು, ಕ್ಷೇತ್ರದಿಂದ ಪೂಜ್ಯರು ಮಂಜೂರು ಮಾಡಿರುವ 100000/-ಮೊತ್ತವನ್ನು ವಿತರಿಸಲಾಯಿತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ