ರಾಂಪುರ ಗ್ರಾಮದಲ್ಲಿ ಅಸ್ಪೃಶ್ಯತಾ ಜಾಗೃತ ಕಾರ್ಯಕ್ರಮ

ಕೊಟ್ಟೂರು ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಅಸ್ಪೃಶ್ಯತಾ ಕಾಯಕ್ರಮ ಯಶಸ್ವಿಯಾಗಿ ನಡೆಯಿತು. ಪ್ರಸ್ತಾವಿಕ ನುಡಿಯನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶಾಹಿಕ ಮಹಮದಿ ಮಾತನಾಡಿದರು. ಡಿ.ಎಸ್.ಎಸ್. ಮುಖಂಡರಾದ ತೆಗ್ಗಿನಕೇರಿ ಕೊಟ್ರೇಶ್ ಮಾತನಾಡುತ್ತಾ ಅಸ್ಪೃಶ್ಯತೆ ಹಾಗೂ ಮೂಢನಂಬಿಕೆ ತೊಡೆದುಹಾಕಿ ಇತಿಹಾಸ ನಿರ್ಮಿಸಬೇಕು ಎಂದು ಹೇಳಿದರು. ಬಸವಣ್ಣ, ಬುದ್ಧ, ಬಾಬಾಸಾಹೇಬರು, ಕನಕದಾಸರು ನಮಗೆ ಆದರ್ಶವಾಗಬೇಕು. ಅನುಭವ ಮಂಟಪದ ಕಲ್ಪನೆಯೇ ಇಂದಿನ ಪಾರ್ಲಿಮೆಂಟ್ ಎಂದು ಹೇಳಿದರು. 

ಮತ್ತೊಬ್ಬ ಡಿ.ಎಸ್.ಎಸ್. ಮುಖಂಡರದ ಬಿ.ಮರಿಸ್ವಾಮಿ ಮಾತನಾಡಿ ನಮ್ಮ ಸಂವಿಧಾನದ ಆಶಯದಂತೆ ಎಲ್ಲರೂ ಬದುಕಬೇಕು ಜಾತಿಯನ್ನು ತೊಲಗಿಸಿ ನಾವೆಲ್ಲ ಒಂದು ಸಂವಿಧಾನ ಇಲ್ಲದೆ ಇದ್ದರೆ ದೇಶದಲ್ಲಿ ಅರಾಜಕತೆ ಸೃಷ್ಟಿ ಆಗುತ್ತಿತ್ತು ಪ್ರತಿ ಮನೆ ಮನೆಗಳಲ್ಲಿ ಅಂಬೇಡ್ಕರ್ ಸಂವಿಧಾನ ಪೂಜೆ ಮಾಡಬೇಕು, ಕಛೇರಿ ಇಲಾಖೆಗಳಲ್ಲಿ ಜಾತಿ ಧರ್ಮಗಳನ್ನು ಬಿಡಬೇಕು ಎಂದು ಹೇಳಿದರು.

ನಂತರ ವಕೀಲರಾದ ಹನುಮಂತಪ್ಪ ಮಾತನಾಡಿ ಪ.ಜಾತಿ, ಪ.ಪಂಗಡ ದೌರ್ಜನ್ಯ ಪ್ರತಿಬಂಧ ೧೯೮೯ ಹಾಗೂ ಅದರ ತಿದ್ದುಪಡಿ ಅಧಿನಿಯಮ ೧/೨೦೧೬ ಸಂಪೂರ್ಣ ವಿವರಣೆಯನ್ನು ಹೇಳಿದರು. ಅಂಬೇಡ್ಕರ್ ತತ್ವ ಸಿದ್ಧಾಂತ ಪಾಲನೆ ಮಾಡಿ ಪ್ರಜಾಪ್ರಭುತ್ವ ಉಳಿಸಿ ಸಮಾನತೆಯನ್ನು ಸಾರಿ ಎಂದು ಹೇಳಿದರು.

ನರೇಗಾ ಸಹಾಯಕ ನಿರ್ದೇಶಕರಾದ ವಿಜಯಕುಮಾರ ಮಾತನಾಡಿ ಸರ್ಕಾರಿ ಸೌಲಭ್ಯಗಳು ಎಸ್.ಸಿ./ಎಸ್.ಟಿ.ಯವರಿಗೆ ತಲುಪಿ ಎಲ್ಲದರಲ್ಲೂ ಸಮಾನ ಅವಕಾಶಗಳು ಸಿಗುವಂತೆ ನಾವು ನೀವೆಲ್ಲರು ಮಾಡಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ  ವ್ಯವಸ್ಥಾಪಕರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪೆಕೀರಪ್ಪ, ರಾಂಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್ ಎಸ್ ಬಸಪ್ಪ ,ರಾಂಪುರ  ಗ್ರಾಮ ಪಂಚಾಯಿತಿ  ಉಪಾಧ್ಯಕ್ಷ  ಮಹಾದೇವಮ್ಮ , ಗ್ರಾಮ ಪಂಚಾಯಿತಿ ಪಿಡಿಒ ಉಮಾಪತಿ, ರವಿಕುಮಾರ್ ಸಿಆರ್ಪಿ , ಶಾಲಾ ಶಿಕ್ಷಕರು,ಅಂಗನವಾಡಿ ಕಾರ್ಯಕರ್ತರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇನ್ನೂ ಅನೇಕ ಪ್ರಮುಖ ಮುಖಂಡರು ಉಪಸ್ಥಿತರಿದ್ದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*