ಆರೋಪಿಗಳನ್ನು ಬಂಧಿಸಲು ಕೋರವ ಸಮಾಜ ಒತ್ತಾಯ

 

ಲಿಂಗಸಗೂರು -ಬಸವನಬಾಗೇವಾಡಿ ತಾಲೂಕಿನ ತೆಲಗಿ ಗ್ರಾಮದಲ್ಲಿ ಲಿಂಗರಾಜ ಹಾಗೂ ಅವರ ತಂದೆ ತಾಯಿ ಕೂಡಲೇ ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಬೇಕು ಎಂದು ಕೊರವ ಸಮಾಜದ ಮುಖಂಡರಾದ ರಾಜೇಶ್ ಮಾಣಿಕ್ ಹಾಗೂ ಹುಚ್ಚೇಶ್ವರ ಭಜಂತ್ರಿ ಬಾವಲತ್ತಿ ಒತ್ತಾಯಿಸಿದರು ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇದೇ ತಿಂಗಳು 13ರಂದು ನಡೆದ ವಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ತೆಲಗಿ ಗ್ರಾಮದ ಲಿಂಗರಾಜ್ ತನ್ನಪತ್ನಿ ಭಾಗ್ಯ ಹಾಗೂ ಅವರ ನಾಲ್ಕು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಇಬ್ಬರು ಅವಳಿ ಜವಳಿ ಗಂಡು ಮಕ್ಕಳು ನಿಡಗುಂದಿ ಬಳಿ ಬೇನಾಳ ಗ್ರಾಮದ ಹತ್ತಿರದ ಕಾ ಲುವೆಗೆ ನಾಲ್ಕು ಮಕ್ಕಳನ್ನು ಎಸೆದಿರುವ ಘಟನೆ ನಡೆದಿತ್ತು ಈ ಘಟನೆಯಲ್ಲಿ ತನು ರಕ್ಷಾ ಹಾಗೂ ಅವಳಿ ಮಕ್ಕಳದ ಹಸ್ಸನ್ ಹುಸೇನ್ ಸಾವನ್ನಪ್ಪಿದದ್ದಾರೆ ಇಡೀ ಪ್ರಕರಣದಲ್ಲಿ ನಾಲ್ವರ ಮಕ್ಕಳ ತಂದೆಯಾದ ಲಿಂಗರಾಜ್ ಹಾಗೂ ಆತನ ಮನೆಯವರು ಕಾರಣರಾಗಿದ್ದಾರೆ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಲಿಂಗರಾಜ್ ಪತ್ನಿ ಅಂದರೆ ಸಾವನ್ನಪ್ಪಿದ ನಾಲ್ಕು ಮಕ್ಕಳ ತಾಯಿ ಭಾಗ್ಯ ಕಾರಣವೆಂದು ಬಿಂಬಿಸಲಾಗುತ್ತದೆ ಇದು ಅತ್ಯಂತ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಭಾಗ್ಯ ಇವರ ಪತ್ನಿ ಲಿಂಗರಾಜ್ ಹಾಗು ಆತನ ಮನೆಯವರು ಸಂಪೂರ್ಣವಾಗಿ ಕಾರಣರಾಗಿದ್ದಾರೆ. ಭಾಗ್ಯ ಇವರ ತವರು ಮನೆ ಲಿಂಗ್ಸುರ್ ತಾಲೂಕಿನ ಕಸಬಾ ಲಿಂಗಸೂರ್ ಗ್ರಾಮದ ವಾಗಿದ್ದು ಇವರನ್ನು ತೆಲಗಿ ಗ್ರಾಮದ ಲಿಂಗರಾಜನಿಗೆ ಸಾಕಷ್ಟು ಬಂಗಾರ ವರದಕ್ಷಣಕೊಟ್ಟು ಸುಮಾರು ವರ್ಷ ಹಿಂದೆ ಮದುವೆ ಮಾಡಿಕೊಡಲಾಗಿತ್ತು ಲಿಂಗರಾಜ್ ತನ್ನ ವೈಯಕ್ತಿಕವಾಗಿ ಸಾಲ ಮಾಡಿ ಅದನ್ನು ತೀರಿಸಲು ಆಗದೆ ಪತ್ನಿ ಭಾಗ್ಯಗೆ ಕಿರುಕುಳ ನೀಡುತ್ತಿದ್ದ ಎಲ್ಲಾ ಸಾಲುಗಳನ್ನು ತೀರಿಸಲು ಲಿಂಗರಾಜ ತನ್ನ ತಂದೆಗೆ ನಮ್ಮ ಪಾಲಿನ ಜಮೀನು ಕೊಟ್ಟು ಬಿಡು ನಾನು ಮಾರಾಟ ಮಾಡಿ ಸಾಲ ತೀರಿಸಿಕೊಳ್ಳುತ್ತೇನೆ ಎಂದು ಈ ವಿಚಾರವಾಗಿ ಹಲವಾರು ಸಲ ಜಗಳವಾಗಿತ್ತು ನಿಂಗರಾಜ್ ಈ ವೇಳೆ ಪತ್ನಿಯ ಮೇಲೆ ಹಾಗೂ ತನ್ನ ತಂದೆ ತಾಯಿ ಮೇಲೆ ಈ ವಿಚಾರವಾಗಿ ಜಗಳ ಮಾಡ್ತಾ ಇದ್ದ ಚಿಕ್ಕ ಮಕ್ಕಳಿಗೆ ಘಟನೆ ನಡೆದ ದಿನ ಬೆಳಗ್ಗೆ ಕೆಮ್ಮಿನ ಸಿರಪ್ ಅದರಲ್ಲಿ ಒಂದು ಹನಿ ವಿಸಹಾಕಿ ಕುಡಿಸಿದ ನಂತರ ಅದೇ ದಿನ ಬೆಳಗ್ಗೆ ಪತ್ನಿಗೆ ನೀನು ರೆಡಿಯಾಗು ಮಕ್ಕಳನ್ನು ಕರೆದುಕೊಂಡು ಬೂದಿಹಾಳ್ ಯ ಲ್ಲಮ್ಮ ದೇವಸ್ಥಾನಕ್ಕೆ ಹೋಗೋಣ ಅಂತ ಹೇಳಿ ಕರೆದುಕೊಂಡು ಹೊಗಿ ಬೇನಾಳ ಗ್ರಾಮದ ಬಳಿಯ ಕಾಲುವೆ ಹತ್ತಿರ ನಿಲ್ಲಿಸಿ ಮೊದಲಿಗೆ ತನ್ನ ಪತ್ನಿ ಭಾಗ್ಯ ಹಾಗೂ ಒಂದು ಮಗುವನ್ನು ಕಾಲುವಿಗೆ ನೂಕಿ ಬಿಡುತ್ತಾನೆ. ನಂತರ ಇನ್ನೂ ಒಂದು ಮಗುವನ್ನು ಕಾಲುವೆಗೆ ಹಾಕಿ ಅದಾದ ನಂತರ ಎರಡು ಹೆಣ್ಣು ಮಕ್ಕಳನ್ನು ಕಾಲುವೆಗೆ ಹಾಕಿ ಬಿಡುತ್ತಾನೆ ಆ ಹೆಣ್ಣು ಮಗಳು ಭಾಗ್ಯ ಕಾಲುವೆಯಲ್ಲಿ ಸಾವಿನ ಮಧ್ಯೆ ಅಣ್ಣ ನನ್ನ ಕಾಪಾಡಿ ಕಾಪಾಡಿ ಎಂದು ಭಾಗ್ಯ ಕೂಗಿದಾಗ ಚಿರುತ್ತಾ ಹರಿದುಕೊಂಡು ಹೋಗ್ತಾ ಇದ್ದಾಗ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ನೋಡಿದ ಆ ವ್ಯಕ್ತಿ ಹೋಗಿ ಎಲೆಕ್ಟ್ರಿಕಲ್ ಸ್ಕೂಟಿ ವಯರ್ ತೆಗೆದುಕೊಂಡು ಬಂದು ರಕ್ಷಿಸುತ್ತಾನೆ ನಿಂಗರಾಜ ಮಕ್ಕಳನ್ನು ಕಾಲುವೆಯಲ್ಲಿ ನೂಕಿ ತಾನು ಸಾಯಲು ಮುಂದಾಗಿದ್ದನು ಆದರೆ ಮಕ್ಕಳನ್ನು ಸಾಯಿಸಿ ಪತ್ನಿಯ ಮೇಲೆ ಸುಳ್ಳು ತಲೆಕಟ್ಟಿ ಮಕ್ಕಳ ಕೊನೆಗೆ ಕಾರಣನಾಗಿದ್ದಾನೆ ಲಿಂಗರಾಜ್ ಮೂಲ ಗ್ರಾಮ ಪಂಚಾಯತ್ ಸದಸ್ಯನಾಗಿದ್ದು ನನ್ನ ಪ್ರಭಾವ ಬೆಳೆಸಿ ಇಲ್ಲಿವರೆಗೆ ಲಿಂಗರಾಜ್ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ ಕೂಡಲೇ ನಿಂಗರಾಜ್ ಹಾಗೂ ಆತನ ತಂದೆ ತಾಯಿಯನ್ನು ಬಂಧಿಸಿ ಲಿಂಗರಾಜನಿಗೆ ಶಿಕ್ಷೆ ವಿಧಿಸಿ ಮಹಿಳೆ ಭಾಗ್ಯಮ್ಮನಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ನಾವೆಲ್ಲರೂ ಒತ್ತಾಯಿಸುತ್ತಿದ್ದೇವೆ ಸಮಾಜದ ಮುಖಂಡರಾದ ದ್ಯಾಮಣ್ಣ ಭಜಂತ್ರಿ ಗೌರವ ಅಧ್ಯಕ್ಷರು AKMS ಜಿಲ್ಲಾ ಯುವ ಘಟಕ ರಾಯಚೂರು ಕೆಂಚಪ್ಪ ಗ್ರಾಮ ಪಂಚಾಯತ್ ಸದಸ್ಯರು ಗೊರೆಬಾಳ್ ಉಪಸ್ಥಿತರಿದ್ದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*