ಅನಾಥಾಶ್ರಮದಲ್ಲಿ ಭಜನೆ ಮಾಡುವ ಮೂಲಕ ಹೊಸ ವರ್ಷಾಚರಣೆ

 


ಮಸ್ಕಿ : ಶ್ರೀ ಸತ್ಯ ಸೇವಾ ಸಮಿತಿಯು ಅಭಿನಂದನ್ ಸ್ಫೂರ್ತಿ ಧಾಮದಲ್ಲಿ ಹೊಸ ವರ್ಷದ ಪ್ರಯುಕ್ತವಾಗಿ ಭಜನಾ ಕಾರ್ಯಕ್ರಮ ಮಾಡುವ ಮೂಲಕ ವಿಭಿನ್ನ ರೀತಿ ಹೊಸ ವರ್ಷಾಚರಣೆ.

ಶ್ರೀ ಸತ್ಯ ಸೇವಾ ಸಮಿತಿಯು ಸ್ಪೂರ್ತಿಧಾಮದ ಮಕ್ಕಳಿಗೆ ಬೆಡ್ ಶೀಟ್, ಹಣ್ಣು ಹಂಪಲುಗಳನ್ನು ಹಾಗೂ ದಾಸೋಹ ಸೇವೆಯನ್ನು ಕೈಗೊಳ್ಳುವ ಮೂಲಕ ವಿಭಿನ್ನ ಹೊಸ ವರ್ಷವನ್ನು ಆಚರಣೆ ಮಾಡಲಾಯಿತು.

ಸುರೇಶ್ ಗುಲ್ಬರ್ಗ ಮಾತನಾಡಿ ಆಧುನಿಕ ಸಾಲದಲ್ಲಿ ಕೆಲಸದ ಒತ್ತಡದಲ್ಲಿ ಮಕ್ಕಳಿಗೆ ನಯ ವಿನಯತಿ ಶಿಸ್ತು ಸಂಸ್ಕಾರ ಆಟೋಪಚಾರ ಇವುಗಳ ಮಾಹಿತಿ ಇಲ್ಲದೆ ಯಂತ್ರದಂತೆ ಮಗುವಿನ ಬೆಳವಣಿಗೆಯಾಗುತ್ತಿದೆ ಹೊಸ ವರ್ಷವನ್ನು ಸಡಗರ ಸಂಭ್ರಮದಿಂದ ಆಚರಿಸಿ ಮಧ್ಯಪಾನ ಸ್ವೀಕರಿಸಿ ಧೂಮಪಾನ ಸ್ವೀಕರಿಸಿ ದೇಶದ ಸಂಸ್ಕೃತಿ ಸರ್ವನಾಶದತ್ತ ಸಾಗುತ್ತಿದೆ ಯುವತಿಯರು ಮದ್ಯಪಾನಪ್ರಿಯ ರಾಗುತ್ತಿರುವುದು ದೇಶದ ಸಂಸ್ಕೃತಿ ಸಾಗುತ್ತಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಸತ್ಯ ಸೇವಾ ಸಮಿತಿಯ ಸುಭಾಷ್ ಚಂದ್ರ ಬೋಸ್, ಸಮಿತಿಯ ಸದಸ್ಯರಾದ ಶ್ರೀನಿವಾಸ್,ಪರಮೇಶ್ ಅಂಗಡಿ ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಅಭಿನಂದನೆ ಸ್ಪೂರ್ತಿಧಾಮದ ಮಕ್ಕಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*