ಕೊಪ್ಪಳ ನಗರ ಸಂಪೂರ್ಣ ಬಂದ್ ಗೆ ಉತ್ತಮ ಸ್ಪಂದನೆ - ಆಟೋ, ಬೈಕ್ ಮೂಲಕ ಪ್ರತಿಭಟನೆ ಬೆಳಗ್ಗಿಂದಲೇ ಪೊಲೀಸರ ಕಣ್ಣ್ ಗಾವಲು- ಬಿಕೋ ಎಂದ ಕೇಂದ್ರೀಯ ಬಸ್ ನಿಲ್ದಾಣ .

 

 ವರದಿ - ಮಂಜುನಾಥ ಕೋಳೂರು ಕೊಪ್ಪಳ 

 ಕೊಪ್ಪಳ ಜ 6 : - ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಇತ್ತೀಚಿಗೆ ಸಂಸತ ಕಲಾಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆ ಖಂಡಿಸಿ ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಂದ್ ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಬಂದ್ ಗೆ ದಲಿತ ಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಹೀಗೆ 30ಕ್ಕೂ ಹೆಚ್ಚು ಸಂಘಟನೆಗಳೂ ಬೆಂಬಲ ನೀಡಿದವು. ಬೆಳಿಗ್ಗೆ ಬೈಕ್ ಹಾಗೂ ಆಟೋಗಳ ಮೂಲಕ ನಗರದ ತಾಲೂಕು ಕ ಕ್ರೀಡಾಂಗಣದಿಂದ ತಹಸಿಲ್ದಾರ್ ಸರ್ಕಲ್ , ಗಂಜ ಸರ್ಕಲ್ , ಮೂಲಕ ಸರ್ಕಾರಿ ಆಸ್ಪತ್ರೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಿಂದ ಮರಳಿ ಗಂಜ ಸರ್ಕಲ್ , ಗವಿಸಿದ್ದೇಶ್ವರ ಮಠದ ಸರ್ಕಲ್, ಶಾರದಾ ಟಾಕೀಸ್ ಮಾರ್ಗವಾಗಿ , ಬಾಬು ಜಗಜೀವನ್ ರಾಮ್ ಸರ್ಕಲ್ , ಡಾ .ಬಿ ಆರ್ ಅಂಬೇಡ್ಕರ್ ಸರ್ಕಲ್ , ಕಿತ್ತೂರಾಣಿ ಚೆನ್ನಮ್ಮ ಸರ್ಕಲ್ , ಹೈದರ ಅಲಿ ಸರ್ಕಲ್, ತಾಲೂಕು ಪಂಚಾಯಿತಿ ಮುಂಭಾಗದಿಂದ ತಹಸಿಲ್ದಾರ್ ಆಫೀಸ್ ನಿಂದ ಅಶೋಕ ಸರ್ಕಲ್ , ಕೇಂದ್ರೀಯ ಬಸ್ ನಿಲ್ದಾಣ , ರೈಲ್ವೆ ಸ್ಟೇಷನ್ ಮಾರ್ಗವಾಗಿ - ಲೇಬರ್ ಸರ್ಕಲ್ ಮಾರ್ಗವಾಗಿ - ಪೊಲೀಸ್ ಸ್ಟೇಷನ್ ಮಾರ್ಗದಿಂದ ಗಡಿಯಾರ ಕಂಬ , ನಂತರ ಸಿಟಿ ಮಾರ್ಕೆಟ್ , ಜವಾಹರ ರೋಡ ಮಾರ್ಗದಿಂದ ಯಮನೂರಪ್ಪನ ದರ್ಗಾ ಮಾರ್ಕವಾಗಿ , ಬಂಡೆ ದುರ್ಗಮ್ಮ ದೇವಿ ಮೋಚಿಗಾರ ಓಣಿ , ಪಲ್ಲೇದರ್ ಓಣಿ , ದಿವಾಟರ ಸರ್ಕಲ್ ಮಾರ್ಗವಾಗಿ ಕೊಪ್ಪಳದ ಕೇಂದ್ರ ಬಿಂದು ಅಶೋಕ್ ಸರ್ಕಲ್ ವರೆಗೂ ಹೀಗೆ ನಗರದ ಹಲವು ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ಮೆರವಣಿಗೆ ನಡೆದವು. ನಂತರ ಸಂಘಟಕರು ಕೆಲವು ಕಡೆ ತೆರೆಯಲಾಗಿದ್ದ ಅಂಗಡಿಗಳನ್ನು ಪೆಟ್ರೋಲ್ ಬಂಕ್ ಮತ್ತು ಬ್ಯಾಂಕುಗಳನ್ನು ಬಂದು ಮಾಡಿಸಿದರು ಆಸ್ಪತ್ರೆ ಹಾಗೂ ವೈದ್ಯಕೀಯ ಔಷಧ ಅಂಗಡಿಗಳನ್ನು ಹೊರತುಪಡಿಸಿ ಬಹುತೇಕ ಕೊಪ್ಪಳ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಬಂದ್ ಆದವು. ಮುನ್ನೆಚ್ಚರಿಕ ಕ್ರಮವಾಗಿ ನಗರದ ಹೊರವಲಯದಿಂದಲೇ ಬಸ್ಸುಗಳನ್ನು ನಿಗದಿತ ರೂಟ್ ಗಳಿಗೆ ಕಳಿಸಲಾಗಿತ್ತು . ದೈನಂದಿನಿ ಜನಜಗಳಿಂದ ಕಂಗೊಳಿಸುತ್ತಿದ್ದ ಕೇಂದ್ರೀಯಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುವಷ್ಟು ಮಟ್ಟಿಗೆ ಬಂದ್ ಯಶಸ್ವಿಯಾಯಿತು. ನಗರದಲ್ಲಿ ಬಸ್ ಸಂಚಾರ ಬಂದ್ ಆಗಿದ್ದರಿಂದ ಜನ ಪರದಾಡಿದರು ಕುಷ್ಟಗಿ , ಹೊಸಪೇಟೆ , ಗಂಗಾವತಿ ಹಾಗೂ ಗದಗ್ ಮಾರ್ಗದಿಂದ ಬಂದ ಬಸ್ಸುಗಳನ್ನು ನಗರದ ಹೊರವಲಯದಲ್ಲಿಯೇ ನಿಲ್ಲಿಸಲಾಯಿತು.ಕೊಪ್ಪಳಕ್ಕೆ ಬರಬೇಕಾದ ಎರಡು ಮಾರ್ಗದ ಪ್ರಯಾಣಿಕರು ಹೊರವಲಯದಿಂದ ನಗರಕ್ಕೆ ನಡೆದುಕೊಂಡು ಬಂದರು . 

ಮುನ್ನೆಚ್ಚರಿಕಾ ಕ್ರಮವಾಗಿ ಖಾಸಗಿ ಶಾಲಾ-ಕಾಲೇಜುಗಳು ರಜಾ ಘೋಷಣೆ ಮಾಡಿದ್ದಾರೆ. ಆದರೆ ಸರ್ಕಾರಿ ಶಾಲೆಗಳಿಗೆ ರಜೆ ಇಲ್ಲವಾದರೂ ವಿದ್ಯಾರ್ಥಿಗಳು ಬಹಳ ಕಡಿಮೆ ಸಂಖ್ಯೆಯಿದ್ದರು. ಬಂದ ನಿಮಿತ್ತ ಚಳಿಯ ನಡುವೆ ಸಮಯ ಬೆಳಿಗ್ಗೆ 6:00 ಗಂಟೆಗೆ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಬಂದ್ ನಿರ್ವಹಣೆ ಕರ್ತವ್ಯಕ್ಕೆ ಹಾಜರಾದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರೀಯ ಬಸ್ ನಿಲ್ದಾಣ, ಗಡಿಯಾರ ಕಂಬ ವೃತ್ತ , ಅಶೋಕ ವೃತ್ತಾ, ಜವಾಹರ ರಸ್ತೆ , ತಹಸಿಲ್ದಾರ್ ವೃತ್ತ , ಗಂಜ್ ವೃತ್ತ ಹೀಗೆ ಜನನಿ ಬಿಡ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಿ ಅಲ್ಲಲ್ಲಿ ಪೊಲೀಸ್ ವಾಹನಗಳನ್ನು ನಿಲ್ಗಡೆ ಮಾಡಲಾಗಿತ್ತು. ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಪಡಿತರ ಸಾಗಾಟದ ಲಾರಿಯನ್ನು ಪ್ರತಿಭಟನಾಕಾರರು ತಡೆದ ಕಾರಣ , ಪ್ರತಿಭಟನಾ ನಿರತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.ಲಾರಿಗಳು ನಗರದಲ್ಲಿ ಸಂಚರಿಸುತ್ತವೆಕೇ ಬೈಪಾಸ್ ಮೂಲಕ ಹೋಗಬೇಕು ಬಂದ್ ವಿಫಲ ಗೊಳಿಸುವ ಕೆಲಸ ನಡೆಯುತ್ತಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು . ಇದೇ ಸಮಯಕ್ಕೆ ನೂರಾರು ಸಂಖ್ಯೆಯಲ್ಲಿ ಬಂದ ಪ್ರತಿಭಟನ ನಿರತರರು ಟೈರಗೆ ಬೆಂಕಿ ಹಚ್ಚಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಬೆಳಗ್ಗೆಯಿಂದ ಸಾಯಂಕಾಲ ತನಕ ವಿಧ ಅಂತಗಳಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಅಶೋಕ ವೃತ್ತದಲ್ಲಿ ವಿವಿಧ ಸಂಘಟನೆಯವರು ಒಂದೆಡೆ ಸೇರಿ ಸಂಘಟನೆಯವರು ಹಾಗೂ ಅನೇಕ ಸಮಾಜಗಳ ಮುಖಂಡರು ಮಾತನಾಡಿದ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತ ಅಮಿತ್ ಶಾ ದೇಶದ ಸಂವಿಧಾನವನ್ನು ಒಪ್ಪದಿದ್ದರೆ ದೇಶ ಬಿಟ್ಟು ಹೋಗಲಿ ಸಂವಿಧಾನದಿಂದಲೇ ಶಾ ದೇಶದ ಗೃಹ ಮಂತ್ರಿಯಾಗಿದ್ದಾರೆ ಅದರ ಬಗ್ಗೆ ಮಾತನಾಡುವ ಯಾವ ನೈತಿಕತೆಯು ಅವರಿಗಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಸಂಪುಟದಿಂದ ವಜಕ್ಕೆ ಅಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಹೋರಾಟಗಾರ ಬಸವರಾಜ್ ಶೀಲವಂತರ ಮಾತನಾಡುತ್ತಾ ಬಿಜೆಪಿ ದೇವರು , ಧರ್ಮ , ಜಾತಿಯ ಹೆಸರಿನಲ್ಲಿ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ ಯಾರ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡಿಲ್ಲ ಎಂದರು. ಸಾಹಿತಿ ಬಸವರಾಜ್ ಸೂಳಿಬಾವಿ ರವರು ಮಾತನಾಡುತ್ತಾ ದೇಶದ ಮೂಲೆ ಮೂಲೆಗಳಲ್ಲಿ ಜನ ಬಿ. ಆರ್ ಅಂಬೇಡ್ಕರ್ ಅವರ ಹೆಸರು ಹೇಳುತ್ತಿದ್ದಾರೆಯೇ ವಿನ: ಯಾವುದೇ ದೇವರ ಹೆಸರು ಅಲ್ಲ. ಧಮನಿತರಿಗೆ ಅಂಬೇಡ್ಕರ್ ಅವರೇ ದೇವರು ಎಂದು ಹೇಳಿದರು. ಹೋರಾಟಗಾರ್ತಿ ಸಾವಿತ್ರಿ ಮುಜಮದಾರ ಮಾತನಾಡುತ್ತಾ ಸಂವಿಧಾನ ಒಪ್ಪಿಕೊಳ್ಳಲು ಹಾಗೂ ಅಪ್ಪಿಕೊಳ್ಳಲು ಸಾಧ್ಯವಾಗದಿದ್ದವರು ದೇಶ ಬಿಟ್ಟು ಹೋಗಬಹುದು. ಸಂವಿಧಾನವೇ ದೇಶದ ಧಾರ್ಮಿಕ ಗ್ರಂಥ ಎಂದು ಹೇಳಿದರು. ಅಲ್ಲಲ್ಲಿ ನಗರಾಧ್ಯಾಂತ ಸಾರ್ವಜನಿಕರು ಸರ್ವ ಸಮಾಜದವರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಸಂಪೂರ್ಣವಾಗಿ ಹೋರಾಟಕ್ಕೆ ಬೆಂಬಲ ನೀಡಿ " ಕೊಪ್ಪಳಬಂದ್" ಯಶಸ್ವಿಯಾಗಿದೆ ಎಂದು ಮಾತನಾಡುವುದು ಸರ್ವೇಸಾಮಾನ್ಯವಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಅವರಿಗೆ ರಾಮಣ್ಣ ಚೌಡ್ಕಿ ಅವರು ಮನವಿಯನ್ನು ಓದಿ ಎಲ್ಲಾ ಹಿರಿಯ ಸಂಘಟಕರ ಹಾಗೂ ಸಾಹಿತಿಗಳ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಿ ಮನವಿಯನ್ನು ಇಂಗ್ಲಿಷ್ ಭಾಷೆಗೆ ತರ್ಜಿಮೆ ಮಾಡಿ ಮಾನ್ಯ ರಾಷ್ಟ್ರಪತಿಗಳಿಗೆ ತಲುಪಿಸುವಂತೆ ಮನವಿ ಸಲ್ಲಿಸಲಾಯಿತು. 
ನಂತರ ಶರಫ್ ಬೆಳೆಲೀ ಹಾಗೂ ಹಿರಿಯ ಸಾಹಿತಿಗಳು "ಗೆದ್ದೆ ಗೆಲ್ಲುವೆವು ನಾವು" ಎಂಬ ಕ್ರಾಂತಿ ಗೀತೆಯನ್ನು ಹಾಡುವುದರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ ಎಲ್ಲಾ ಸಂಘಟಕರಿಗೂ ಧನ್ಯವಾದಗಳು ತಿಳಿಸುತ್ತಾ ಹೋರಾಟವನ್ನು ಮುಕ್ತಾಯಗೊಳಿಸಲಾಯಿತು. ಪ್ರತಿಭಟನೆ ನೇತೃತ್ವವನ್ನು ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು , ಸಂಘಟಕರಾದ ಹನುಮೇಶ್ ಮ್ಯಾಗಳ ಮನಿ , ರಾಮಣ್ಣ ಚೌಡ್ಕಿ , ಕೆಬಿ ಗೋನಾಳ್, ಬಸವರಾಜ್ ಶೀಲವಂತರ, ಡಿ.ಹೆಚ್ ಪೂಜಾರ್ , ಚನ್ನಬಸಪ್ಪ ಹೆಚ್ ಹೊಳೆಪ್ಪನವರ್ , ಶುಕ್ರಾಜ್ ತಾಳಕೇರಿ , ಕೆ.ಭಾರದ್ವಾಜ್ , ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ಯಲ್ಲಪ್ಪ ಹಳೆಮನೆ, ಸಿದ್ದರಾಮ ಹೊಸಮನಿ , ಟಿ. ರತ್ನಾಕರ , ಈಶಪ್ಪ ಶಿರೂರು, ಮುದುಕಪ್ಪ ಹೊಸ್ಮನಿ, ಪರಶುರಾಮ್ ಕೆರಳ್ಳಿ, ಎಸ್. ಎ .ಗಫರ್ , ನಿಂಗು ಬೆಂಕಲ್ , ಮಾನ್ವಿ ಪಾಷಾ, ಕೃಷ್ಣ ಕವಲೂರ್ , ಆದಿಲ್ ಪಟೇಲ್ , ಶೇಷಣ್ಣ ಶಹಪುರ , ಚನಬಸವ ಜಾಲಿಹಾಳ , ಯಮನೂರಪ್ಪ ನಾಯಕ್ ,ಕಾಶಪ್ಪ ಚಲವಾದಿ , ಸಂಜಯ್ ದಾಸರ್ ಹನುಮಂತಪ್ಪ ಹ್ಯಾಟಿ , ನರಸಪ್ಪ ಹಾಸ್ಗಲ್, ಜ್ಯೋತಿ ಗೊಂಡಬಾಳ, ಪ್ರಕಾಶ್ ಹೊಳೆಪ್ಪನವರ್ , ಮಂಜುನಾಥ್ ಕೊಳೂರು, ಮೈಲಾರಪ್ಪ ಇಂದ್ರಗಿ , ಪಾಮಣ್ಣ ಅಳೆಗನ್ನೂರು ಕನಕಗಿರಿ , ಯಮನಪ್ಪ ಧನಕನ ದೊಡ್ಡಿ , ಶಿವಣ್ಣ ಹಟ್ಟಿ , ಮಂಜುನಾಥ್ ಗೊಂಡಬಾಳ , ಶರಣಪ್ಪ ಸಾಲ್ಮನಿ ಆಟೋ , ಸಲೀಂ ಅಳವಂಡಿ, ಶರೀಫ್ ಬೆಳೆಲಿ , ಗವಿಸಿದ್ದಪ್ಪ ಗಿಣಿಗೇರಿ, ಗಾಳೆಪ್ಪ ಪೂಜಾರ್ ಹೂವಿನಾಳ , ರಮೇಶ್ ಚಲವಾದಿ, ಶಿವಾನಂದ ಹೊಸಮನಿ, ಮಮ್ಮದ್ ಹುಸೇನಿ (ಭಲ್ಯಾ) , ಅಖಿಮ್ ದೇವರಾಜ್ ಅರಸ್ ಕಾಲೋನಿ , ಮಂಜುನಾಥ್ ಹಂದ್ರಾಳ , ಶಿವಪ್ಪ ಹಡಪದ್ , ಶಶಿಕಲಾ ಮಠದ , ಯಲ್ಲಪ್ಪ ದೇವರಮನಿ , ಯಲ್ಲಪ್ಪ ಮುದ್ದಾಬಳ್ಳಿ , ಭೀಮಣ್ಣ ಮುದ್ದಾಬಳ್ಳಿ , ನಾಸಿರ್ ಕಂಠಿ , ಮೆಜರ್ಮೆಂಟ್ ಮೇಸ್ತ್ರಿ ರಫಿ ಹಾಗೂ ದಲಿತ ಪರ ಸಂಘಟನೆಗಳು ಹಾಗೂ ಮುಸ್ಲಿಂ ಬಾಂಧವರು - ಪಂಚ್ ಕಮಿಟಿ ಅಧ್ಯಕ್ಷರು - ಸರ್ವ ಸದಸ್ಯರು , ಪ್ರಗತಿಪರ ಸಂಘಟನೆಗಳು ಹಾಗೂ ಜೈ ಭೀಮ್ ಅನುಯಾಯಿಗಳು , ಸಾರ್ವಜನಿಕರು ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು .

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*