ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ್ ಅನ್ವರಿ ಇವರಿಂದ. ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆ.
ಹಟ್ಟಿ ಚಿನ್ನದ ಗಣಿ ಗ್ರಾಮೀಣ ಪ್ರದೇಶಗಳಲ್ಲಿ ಕ್ರಿಕೆಟ್ ಅಂದರೆ. ಈಗಿನ ಯುವ ಪೀಳಿಗೆಗೆ ಅಚ್ಚುಮೆಚ್ಚು ಅಂತದರಲ್ಲಿ.ಹಟ್ಟಿ ಚಿನ್ನದ ಗಣಿ ಸಮೀಪದ ಆನ್ವರಿ ಗ್ರಾಮದಲ್ಲಿ ಇಂದಿನಿಂದ ಆನ್ವರಿ ಕ್ರಿಕೆಟ್ ಕ್ಲಬ್ ವತಿಯಿಂದ
ಶ್ರೀ ಹುಚ್ಚ ಬುಡ್ಡೆಶ್ವರ ಕ್ರೀಡಾಂಗಣದಲ್ಲಿ 36 ತಂಡಗಳು.34 ಪಂದ್ಯಗಳು.20 ದಿನ ನಡೆಯುವಂತ ಕ್ರಿಕೆಟ್ ಪಂದ್ಯ.ಪ್ರಥಮ ಬಹುಮಾನ 50,000 ರೂ ಒಂದು ಕಪ್.ದ್ವಿತೀಯ ಬಹುಮಾನ 25000 ರೂ ಒಂದು ಕಪ್.ಉತ್ತಮ ಬ್ಯಾಟ್ಸ್ ಮ್ಯಾನ್.ಉತ್ತಮ ಬಾಲರ್.ಉತ್ತಮ ಫಿಲ್ಟರ್.ತಲಾ 2100ರೂ ಹಾಗೂ ಒಂದು ಕಪ್ಪು ಕಪ್.
ಓಪನ್ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆಯನ್ನು ಪೂಜ್ಯರಾದ ಮಲ್ಲಣ್ಣ ತಾತ ಹಾಗೂ ಉದ್ಘಾಟಕರಾಗಿ ಮಾಜಿ ಕೇಂದ್ರ ಸಚಿವರಾದಂತ ಬಸವರಾಜ ಪಟೇಲ್ ಅನ್ವರಿ.ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಸವರಾಜ ಜಿರಾಳ.
ಮುಖ್ಯ ಅತಿಥಿಗಳಾಗಿ ಶಿವಶರಣಪ್ಪ ಗೌಡ ಮಾಜಿ ತಾ.ಪಂ. ಸದಸ್ಯರು. ಮೌಲಾಸಾಬ್ ಗ್ರಾ.ಪಂ. ಮಾಜಿ ಅಧ್ಯಕ್ಷರು.ಬಸವರಾಜ ಸಾಹುಕಾರ.ಅಯ್ಯನಗೌಡ.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಾಕೋಬ. ಅತಿಥಿಗಳಾದ ಅಮರೇಗೌಡ ಮಾಲಿ ಪಾಟೀಲ್.ಮುದಿಯಪ್ಪ ಕ್ವಾಟಿ.ಗಂಗಪ್ಪ ಅನಂದಗಲ್.ಗಂಗಪ್ಪ ಕಾವಲಿ.ಕಾಸಿಂಅಲಿ. ಹುಚುರಡ್ಡಿ.ತಿಪ್ಪಣ್ಣ ಹಾದಿಮನಿ.ಗಂಗಪ್ಪ ಬಡಿಗೇರ್.ಶರಣಪ್ಪ ನಿಲೋಗಲ್.ಸಂಗಪ್ಪ ಗೂಗೆಬಾಳ.ಹಾಗೂ ವೇದಿಕೆ ಮೇಲಿರುವಂತ ಗಣ್ಯ ಮಹನೀಯರಿಂದ ದೀಪ ಬೆಳಗಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶಿವಶರಣಪ್ಪ ಗೌಡ ಮಾತನಾಡಿ ನಮ್ಮೂರಲ್ಲಿ ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಂಡಿದ್ದು ನಮ್ಮೆಲ್ಲರಿಗೂ ಸಂತೋಷದ ವಿಷಯ.ಈ ಒಂದು ಕ್ರೀಡಾ ಮನೋಭಾವ ಮುಂದಿನ ದಿನಗಳಲ್ಲಿ ಹಳೆಯ ಕ್ರಿಕೆಟ್ ಆಟಗಾರರ ಜೊತೆ ಈಗಿನ ಹೊಸ ಕ್ರಿಕೆಟ್ ಕ್ರೀಡಾಪಟುಗಳು ಜೊತೆ ಸ್ನೇಹಿತರಾಗಿ ಒಳ್ಳೆಯ ಸ್ವಭಾವ ಬೆಳೆಸಿಕೊಳ್ಳುವುದಕ್ಕೆ ಇದು ಒಂದು ನಾಂದಿ.
ಇಂತಹ ಕ್ರಿಕೆಟ್ ಆಟವನ್ನು ಕ್ರೀಡಾಭಿಮಾನದಿಂದ ಸ್ವೀಕರಿಸಬೇಕು ಮತ್ತು ಅಂತಹ ಸ್ವಭಾವವನ್ನು ಬೆಳೆಸಿಕೊಳ್ಳುವುದಕ್ಕಾಗಿ ಇಂಥ ಟೂರ್ನಮೆಂಟ್ ಗಳು ಆಟೋಟಗಳು ಸಹಕಾರಿ ಆಗಬಹುದು ಎನ್ನುವಂತ ಭಾವನೆ ನನ್ನದು ಎಂದು ಮಾತನಾಡಿದರು.
ಉದ್ಘಾಟಕರಾಗಿ ಆಗಮಿಸಿದ ಮಾಜಿ ಕೇಂದ್ರ ಸಚಿವ ಬಸವರಾಜ ಪಟೇಲ್ ಅನ್ವರಿ ಮಾತನಾಡಿ ನಮ್ಮೂರಿನ ಯುವಕರು ಇಂತಹ ಒಂದು ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಂಡಿದ್ದು ಹಾಗೂ ನನ್ನನ್ನು ಈ ಕ್ರಿಕೆಟ್ ಉದ್ಘಾಟನೆಗೆ ಆಹ್ವಾನಿಸಿ ನನ್ನನ್ನು ಅಭಿನಂದಿಸಿದ್ದಕ್ಕಾಗಿ ಅನ್ವರಿ ಕ್ರಿಕೆಟ್ ಕ್ಲಬ್ ಕಮಿಟಿಗೂ ಅಭಿನಂದನೆ ಸಲ್ಲಿಸಿದರು.
ಈಗಿನ ಯುವ ಪೀಳಿಗೆಗೆ ಕ್ರಿಕೆಟ್ ಎಂದರೆ ಒಂದು ಹಬ್ಬ ಉತ್ಸವ ಇದ್ದಹಾಗೆ. ಆದರೆ ಅನೇಕ ಗ್ರಾಮಗಳಿಂದ ಬಂದಂತ ಕ್ರೀಡಾಪಟುಗಳು ಅನ್ವರಿ ಎನ್ನುವ ಹೆಸರು ಇನ್ನು ಎತ್ತರಕ್ಕೆ ಕೊಂಡುಕೊಂಡೈಯುವಂತ ಒಂದು ಕ್ರಿಕೆಟ್ ಟೂರ್ನಮೆಂಟ್ ಇದಾಗಲಿ.ಯಾವುದೇ ಕಾರಣಕ್ಕೂ ಆನ್ವರಿ ಹೆಸರಿಗೆ ಕಳಂಕ ತರುವಂತ ಕ್ರಿಕೆಟ್ ಟೂರ್ನಮೆಂಟ್ ಇದಾಗಬಾರದು.ಹಾಗೂ ಕ್ರಿಕೆಟ್ ಆಟದಲ್ಲಿ ಅಂಪೈರಗಳ ತೀರ್ಮಾನಕ್ಕೆ ಎಲ್ಲಾ ಆಟಗಾರರು ತಲೆಬಾಗಿ. ಕ್ರಿಕೆಟ್ ಆಟವನ್ನು ಬೆಳೆಸಿ.ಆನ್ವರಿ ಹೆಸರನ್ನು ಉಳಿಸಿ.ಮತ್ತು ಬೆಳೆಸಿ ಎಂದು ಮಾತನಾಡಿದರು. ಕ್ರಿಕೆಟ್ ಟೂರ್ನಮೆಂಟ್ ವ್ಯವಸ್ಥಾಪಕರಾದ ಎಂಡಿ ಪಾಶ ಮುಲ್ಲಾರ್.ಮೊಮ್ಮದ್ ರಫಿ.ಅಂಬರೀಶ್ ಬಾವಿ. ಹಾಗೂ ಅನ್ವರಿ ಕ್ರಿಕೆಟ್ ಕ್ಲಬ್ ಎಲ್ಲಾ ಸದಸ್ಯರು. ಮತ್ತು ಗ್ರಾಮಸ್ಥರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಮರೇಶ್ ಕವಿತಾಳ ಕಾರ್ಯಕ್ರಮದ ನಿರೂಪಣೆ ಮಾಡಿದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ