ಗಚ್ಚಿನಮಠವನ್ನು ಕೂಡಲೆ ಧಾರ್ಮಿಕ ದತ್ತಿ ಇಲಾಖೆ ಸೇರಿಸಿ: ಕೆ ಕೊಟ್ರೇಶ್

 

ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವದ ಪೂರ್ವ ಬಾವಿ ಸಭೆ

ಕೊಟ್ಟೂರು ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವದ ಪ್ರಯುಕ್ತ ಬುದುವಾರ ಶ್ರೀ ಸ್ವಾಮಿಯ ಹಿರೇಮಠದ ಮುಂಬಾಗದಲ್ಲಿ ಹಾಕಲಾಗಿದ್ದ ವೇಧಿಕೆಯಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಥೋತ್ಸವದ ಪೂರ್ವ ಬಾವಿ ಸಭೆಯನ್ನು ಉದ್ದೇಶಿಸಿ ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿರಾಜ ನಾಯ್ಕ ಅವರು ಮಾತನಾಡಿದರು.

ಭವ್ಯ ಕೊಟ್ಟೂರೇಶ್ವರ ರಥೋತ್ಸವದ ಯಶಸ್ವಿಗೆ ಸಹಕರಿಸಿ ಜನಾಕರ್ಷಣೆಯ ರಥೋತ್ಸವ ಎಂದೇ ಬಿಂಬಿತಗೊಂಡಿರುವ ಪ್ರಸಿದ್ಧ ಕೊಟ್ಟೂರು ಕೊಟ್ರೂರೇಶ್ವರ ಸ್ವಾಮಿಯ ವಾರ್ಷಿಕ ಮಹಾ ರಥೋತ್ಸವ ಫೆಬ್ರವರಿ ೨೨ ರಂದು ನಡೆಯಲಿದ್ದು ಪಟ್ಟಣವನ್ನು ಸಂಪರ್ಕಿಸುವ ೬ ರಸ್ತೆಗಳನ್ನು ದುರಸ್ತಿ ಗೊಳಿಸುವ ಕಾರ್ಯವನ್ನ ಈಗಾಗಲೇ ಪ್ರಾರಂಭ ಮಾಡಿದ್ದೇವೆ. ಜಾತ್ರೆ ಒಳಗಡೆ ಮುಗಿಸುತ್ತೇವೆ. ಪಾದಯಾತ್ರೆಯಲ್ಲಿ ಬರುವ ಭಕ್ತಾಧಿಗಳಿಗೆ ತೊಂದರೆ ಯಾಗಬಾರದು ಎಂದು ಶಾಸಕ ಕೆ.ನೇಮರಾಜನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.

ಬುಧುವಾರ ಶ್ರೀಸ್ವಾಮಿಯ ಹಿರೇಮಠದ ಮುಂಬಾಗದಲ್ಲಿ ಹಾಕಲಾಗಿದ್ದ ವೇಧಿಕೆಯಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಥೋತ್ಸವದ ಪೂರ್ವ ಬಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕುಡಿಯುವ ನೀರಿನ ತೊಂದರೆ ಭಾದಿಸದಂತೆ ಹೆಚ್ಚುವರಿಯಾಗಿ ಟ್ಯಾಂಕರ್‌ಗಳನ್ನು ತರಿಸಿಕೊಂಡು ಪಟ್ಟಣದ ಜನತೆ ಮತ್ತು ಜಾತ್ರೆಗೆ ಆಗಮಿಸುವ ಭಕ್ತರಿಗೆ ನೀರು ಪೂರೈಸಬೇಕು ಈ ನಿಟ್ಟಿನಲ್ಲಿ ಸ್ಥಳಿಯ ಪಟ್ಟಣ ಪಂಚಾಯಿತಿ ಆಡಳಿತ ಗಮನಹರಿಸಬೇಕು ಎಂದ ಅವರು ಪಟ್ಟಣದ ೨೦ ವಾರ್ಡ ಗಳಲ್ಲಿ ಸ್ವಚ್ಚತಾ ಕೆಲಸ ನಿರಂತರವಾಗಿ ಮಾಡುವ ಮೂಲಕ ಕಸಕಡ್ಡಿಗಳ ರಾಶಿ ಎಲ್ಲಿಯೂ ಕಂಡುಬರದAತೆ ಮುಖ್ಯಾಧಿಕಾರಿ ಗಮನಹರಿಸಬೇಕು ಎಂದು ಅವರು ಹೇಳಿದರು.

ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ ರಾಜ್ಯದಲ್ಲಿಯೇ ಹೆಚ್ಚಿನ ಭಕ್ತರು ಆಗಮಿಸುವ ರಥೋತ್ಸವ ಎಂದು ಕೊಟ್ಟೂರೇಶ್ವರ ರಥೋತ್ಸವ ಖ್ಯಾತಿಯಾಗಿ ಇದಕ್ಕೆ ಅನುಗುಣವಾಗಿ ಪಟ್ಟಣದ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುವ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡು ರಥೋತ್ಸವಕ್ಕೆ ಮತ್ತೊಷ್ಟು ಮೆರುಗು ತರಬೇಕು ಎಂದರು.

ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಿ ಸ್ವಾಮಿಯ ರಥೋತ್ಸವಕ್ಕೆ ಬರುವ ಭಕ್ತಿಗಳ ಆಭರಣ, ಮೊಬೈಲ್, ಹಣ ಇನ್ನಿತರ ವಸ್ತುಗಳ ಕಳ್ಳರ ಪಾಲಾಗಬಾರದು, ಬ್ಯಾನರ್‌ಗಳನ್ನು ಪಟ್ಟಣದ ಒಳಗಡೆ ಎಲ್ಲಿಯೂ ಹಾಕಬಾರದು ಆದರೆ ಕಳ್ಳರ ಪೋಟೋಗಳನ್ನು ಊರಿನ ಹೊರಗಡೆ ಎಲ್ಲರಿಗೂ ಕಾಣುವಂತೆ ಹಾಕಬೇಕು ಎಂದು ಹೇಳಿದರು.

" ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನ ಪಟ್ಟಣದ ಇನ್ನೊಂದು ದೇವಸ್ಥಾನ ಗಚ್ಚಿನಮಠ ಖಾಸಗಿ ಅವರ ಸುಪರ್ಧಿಯಲ್ಲಿದ್ದು ವರ್ಷಕ್ಕೆ ಕೋಟಿ ಕೋಟಿ ರೂ. ಆದಾಯವಿರುವ ಗಚ್ಚಿನಮಠವನ್ನು ಕೂಡಲೆ ಧಾರ್ಮಿಕ ದತ್ತಿ ಇಲಾಖೆ ವಶಪಡಿಸಿಕೊಳ್ಳುವಂತೆ ಮತ್ತು ಹಿರೇಮಠದ 2019- 20 -21 ಸಾಲಿನ ಆಡಿಟಿಂಗ್ ನಲ್ಲಿ ಅವ್ಯವಾರ ನಡೆದಿದೆ ತನಿಖೆ ಮಾಡಿಸುವಂತೆ  ಕೆ ಕೊಟ್ರೇಶ್  ಜಿಲ್ಲಾಧಿಕಾರಿಗೆ ಗಮನ ಸೆಳೆದರು. ಡಿಸಿ ಪ್ರತಿಕ್ರಿಯಿಸಿ ಒಂದು ಹಂತದ ಕ್ರಮ ನಡೆದಿದ್ದು. ಅಧಿಕಾರಿಗಳೊಂದಿಗೆ  ಚರ್ಚಿಸಿ ಉಳಿದ ಮಠಗಳನ್ನು ಖಂಡಿತ ಧಾರ್ಮಿಕ ಇಲಾಖೆ ವಶಪಡಿಸಿಕೊಳ್ಳಲಿದೆ ಎಂದು ಡಿ.ಸಿ. ಭರವಸೆ ನೀಡಿದರು."

ಮುಖಂಡರುಗಳಾದ ಎಂ.ಎA.ಜೆ. ಹರ್ಷವರ್ಧನ್, ಬಿ.ಮರಿಸ್ವಾಮಿ, ಟಿ.ಹನುಮಂತಪ್ಪ ಮಂಜುನಾಥ ಗೌಡ, ರುದ್ರಪ್ಪ, ಕೂಡ್ಲಿಗಿ ಕೊಟ್ರೇಶ, ಅಡಕಿ ಮಂಜುನಾಥ ಸಭೆಗೆ ಸಲಹೆಗಳನ್ನು ನೀಡಿದರು.

ಕ್ರಿಯಾ ಮೂರ್ತಿಗಳಾದ ಶ್ರೀ ಶಿವಪ್ರಕಾಶ್ ಕೊಟ್ರೂರು ದೇವರು ಮಾಜಿ ಜಿಲ್ಲಾಪಂಚಾಯಿತಿ ಸದಸ್ಯ ಎಂ.ಎA.ಜೆ.ಹರ್ಷವರ್ಧನ್,ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪಿ.ಎಚ್.ದೊಡ್ಡರಾಮಣ್ಣ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ್, ಜಿಲ್ಲಾ ಪಂಚಾಯಿತಿ ಸಿಓ ಮಹಮದ್ ಅಲಿ ಅಕ್ರಮ್ ಷಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್ ಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಖಾ ಬದ್ದಿ ರಮೇಶ್, ತಹಶೀಲ್ದಾರ್ ಅಮರೇಶ್ ಜಿ.ಕೆ., ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಿ.ಸಿದ್ದಯ್ಯ, ಮಂಜುನಾಥ ಗೌಡ ಪ.ಪಂ ಸದಸ್ಯರುಗಳಾದ ಮರಬದಕೊಟ್ರೇಶ್, ತೋಟದ ರಾಮಪ್ಪ, ವೀಣಾ ವಿವೇಕಾನಂದಗೌಡ, ದಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಗಂಗಾದರಪ್ಪ, ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ವಿವಿದ ಇಲಾಖೆಯ ಅಧಿಕಾರಿಗಳು, ಅಯಾಗಾರ ಬಳಗದವರು ಸಭೆಯಲ್ಲಿಪಾಲ್ಗೊಂಡಿದ್ದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*