ಐಡಿಎಲ್ ಫೌಂಡೇಶನ್ ನಿಂದ ಹಿರಿಯರ ಆರೈಕೆ ಮನೆ “ಶೈನ್ ಬೆತ್ ಹರಾನ್” ಪ್ರಾರಂಭ
ಬೆಂಗಳೂರು, ಜ, 15; ಹಿರಿಯ ನಾಗರಿಕರ ಸಮಗ್ರ ಶ್ರೇಯೋಭಿವೃದ್ಧಿ ಉದ್ದೇಶದಿಂದ ಐಡಿಎಲ್ ಫೌಂಡೇಶನ್ ಹೊಸ ಹಿರಿಯರ ಆರೈಕೆ ಮನೆ “ಶೈನ್ ಬೆತ್ ಹರಾನ್” ಪ್ರಾರಂಭಿಸಿದೆ. ಭರವಸೆಯ ಮನೆ - ಹಿರಿಯರು ಮತ್ತು ನಿರ್ಗತಿಕರು ವಾಸಿಸುವ ಮನೆ ಚಿಕ್ಕಬಾಣಾವರದ ಹುರಳಿ ಚಿಕ್ಕನಹಳ್ಳಿಯಲ್ಲಿ ಪ್ರಾರಂಭಿಸಲಾಗಿದೆ.
ಐಡಿಎಲ್ ಫೌಂಡೇಶನ್ ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಟ್ರಸ್ಟಿ ಡಾ. ಶೈನಿ ಗ್ರೇಸ್ ಪಾಲ್ “ಶೈನ್ ಬೆತ್ ಹರಾನ್” ಗೆ ಚಾಲನೆ ನೀಡಿದರು.
ಹಿರಿಯರು ಮತ್ತು ನಿರ್ಗತಿಕರಿಗೆ ಇದು ಆಶಾಕಿರಣವಾಗಿದ್ದು, ಸಕಲ ಸೌಲಭ್ಯಗಳನ್ನು ಒಳಗೊಂಡ ಪ್ರಶಾಂತವಾದ ಮನೆಯಾಗಿದೆ
ಹೆಚ್ಚಿನ ಮಾಹಿತಿಗೆ: 9944011910, 9743791415 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ