ಆಂಜನೇಯ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ₹150000 ಸಾವಿರ ಮೊತ್ತದ ಡಿ ಡಿ ವಿತರಣೆ ಕಾರ್ಯಕ್ರಮ.
ಮಸ್ಕಿ : ಆಂಜನೇಯ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ₹150000 ಸಾವಿರ ಮೊತ್ತದ ಡಿ ಡಿ ವಿತರಣೆ ಕಾರ್ಯಕ್ರಮ ನೆಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ (ರಿ) ಮಸ್ಕಿ ವತಿಯಿಂದ ತಾಲೂಕಿನ ಮೆದಿಕಿನಾಳ ವಲಯದ ತಲೆಖಾನ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನಕ್ಕೆ ಶ್ರೀ ಕ್ಷೇತ್ರದಿಂದ ಪೂಜ್ಯರು ಮಂಜೂರು ಮಾಡಿರುವ ₹150000 ಸಾವಿರ ಮೊತ್ತದ DD ವಿತರಣೆ ಮಾಡಲಾಯಿತು.
ಈ ವೇಳೆ, ಜಿಲ್ಲಾ ನಿರ್ದೇಶಕರಾದ ಮೋಹನ್ ನಾಯ್ಕ್ ಅವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ಸಮುದಾಯ ಅಭಿವೃದ್ಧಿ, ಸಾಮಾಜಿಕ ಯೋಜನೆಯ ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದ್ದರು.
ಮಸ್ಕಿ ತಾಲೂಕಿನ ಯೋಜನಾಧಿಕಾರಿಗಳು ಶ್ರೀಮತಿ ಶಾಲಿನಿ ರವರು ಮಾತನಾಡಿ ತಾಲುಕಿನ ವಿವಿಧ ಗ್ರಾಮೀಣ ಮಟ್ಟದಲ್ಲಿರುವ ದೇವಸ್ಥಾನ ಜೀರ್ಣೋದ್ದಾರಕ್ಕೆ ಕೈ ಜೋಡಿಸುತ್ತಿರುವ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಿಗೆ ಅಭಿನಂದನೆ ಗಳನ್ನು ಸಲ್ಲಿಸಿ ನಂತರ ಕ್ಷೇತ್ರದಿಂದ ಪೂಜ್ಯರು ಮಂಜೂರು ಮಾಡಿರುವ 150000/-ಮೊತ್ತವನ್ನು ವಿತರಿಸಲಾಯಿತು
ಈ ಸಂದರ್ಭದಲ್ಲಿ, ಶ್ರೀ ಆಂಜನೇಯ ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷ ನಾಗಪ್ಪ, ಕಾರ್ಯದರ್ಶಿ ಮಾಹಾಂತೇಶ,ಜನಜಾಗೃತಿ ಸದಸ್ಯ ರಾಜಣ್ಣ ಪರಡ್ಡಿ , ವಲಯದ ಮೇಲ್ವಿಚಾರಕ ಪ್ರಸನ್ನ,ಶರಣಮ್ಮ, ಸೇರಿದಂತೆ ಸ್ವಸಹಾಯ ಸಂಘದ ಸದಸ್ಯರು ದೇವಸ್ಥಾನ ಕಮಿಟಿ ಸದಸ್ಯರು ಗ್ರಾಮಸ್ಥರು ಇದ್ದರೂ.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ