ಅರ್ಚಕರ ಡಿ.ಬಿ.ಟಿ.ಮೂಲಕ ಹಣ ಪಾವತಿಸದೇ ಯಥಾಸ್ಥಿತಿ ಕಾಪಾಡಿ : ರಂಗರಾಜನ್ ಮನವಿ
ಮಸ್ಕಿ : ಕರ್ನಾಟಕ ಮಾನ್ಯ ಧಾರ್ಮಿಕ ದತ್ತಿ ಆಯುಕ್ತರು ಡಿ.19 2024 ರಂದು ರಾಜ್ಯದ ಅರ್ಚಕರಿಗೆ ಡಿಬಿಟಿ ಮೂಲಕ ತಸ್ತಿಕ ಪಾವತಿಸುವ ಸಂಬಂಧ , ಆನ್ ಲೈನ್ ಅರ್ಜಿ ಸಲ್ಲಿಸುವ ಬಗ್ಗೆ, ಈ ಆದೇಶ ವಾಪಸ್ ತೆಗೆದು ಕೊಳ್ಳುವಂತೆ ರಾಜ್ಯ ಮುಜರಾಯಿ ಅರ್ಚಕರ ಗ್ರೂಪ್ ಸಂಘಟನಾ ಕಾರ್ಯದರ್ಶಿ ರಂಗರಾಜನ್ ರವರು ಸರಕಾರಕ್ಕೆ ಮನವಿ ಮಾಡಿದ್ದಾರೆ.
ಪತ್ರಿಕೆಗೆ ಮಾತನಾಡಿದ ಅವರುರಾಜ್ಯದ ಎಲ್ಲಾ ತಾಲ್ಲೂಕು ಕಚೇರಿ ಗಳಲ್ಲಿ ಅರ್ಚಕರಿಗೆ ಗುರುತಿನ ಚೀಟಿ ಕೊಟ್ಟಿಲ್ಲ, ವಂಶ ಪಾರಂಪರ್ಯವಾಗಿ ಬಂದಿರುವ ಅರ್ಚಕರಿಗೆ ನೇಮಕಾತಿ ಆದೇಶ ಕೊಟ್ಟಿಲ್ಲ, ವಂಶ ಪಾರಂಪರ್ಯವಾಗಿ ಬಂದಿಲ್ಲದಿರುವ ಅರ್ಚಕರ ಬಳಿ ನೇಮಕಾತಿ ಆದೇಶ ಇಲ್ಲ, ನಿಮ್ಮ ಅರ್ಜಿ ತಿರಸ್ಕಾರ ಮಾಡುವ ಅಧಿಕಾರ ಸ್ಥಳೀಯ ಅಧಿಕಾರಿ ಅವರಿಗೆ ಇರುತ್ತದೆ, ದೇವಸ್ಥಾನ ಗಳಲ್ಲಿ ಮೊಬೈಲ್ ಫೋನ್ ನಿಷೇಧ ಆಗಿದೆ ಮತ್ತು ದೇವಸ್ಥಾನಗಳು ಪ್ರವಾಸ ಸ್ಥಳ ಅಲ್ಲ, ಅದು ದೇವರ ದರ್ಶನ ಮಾಡುವ ಪವಿತ್ರ ಸ್ಥಳ ಆ ಜಾಗದಲ್ಲಿ ಸುತ್ತಾ ಮುತ್ತಾ ಚಿತ್ರೀಕರಣ ಮಾಡುವಂತೆ ಇಲ್ಲ ಸುಪ್ರೀಂ ಕೋರ್ಟ್ ಆದೇಶ ನೀಡಿದೆ,
ಸ್ಥಳೀಯ ಅಧಿಕಾರಿಗಳು ಬೇರೆ ಬೇರೆ ಕೆಲಸಗಳಲ್ಲಿ ಹೆಚ್ಚಿನ ಜವಾಬ್ದಾರಿ ಇರುತ್ತದೆ,ನಮಗಾಗಿ ಸಮಯ ಮೀಸಲು ಇಟ್ಟು ಅರ್ಚಕರ ಕೆಲಸ ಮಾಡಿ ಕೊಡುವುದು
ಕಷ್ಟ ಸಾಧ್ಯ.ಆದ್ದರಿಂದ ಹಿಂದಿನ ಹಳೇ ಪದ್ಧತಿಯಂತೆ ರಾಜ್ಯದ ಎಲ್ಲಾ ತಾಲ್ಲೂಕು ಅರ್ಚಕರು ಸ್ವಯಂ ಘೋಷಣೆ ಅರ್ಜಿ ಸಲ್ಲಿಸಿ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿ ವರದಿ, ರಾಜಸ್ವ ನಿರೀಕ್ಷಕರ ವರದಿ, ಪಡೆದು ತಮ್ಮ ತಮ್ಮ ತಾಲ್ಲೂಕು ಕಚೇರಿಯಲ್ಲಿ ಅವರ ತಸ್ತಿಕ ಭತ್ಯೆ ಹಣ ಪಡೆದು ಕೊಳ್ಳುತ್ತಿದ್ದಾರೆ.
ಹಾಗಾಗಿ ಹಳೇ ಪದ್ಧತಿ ಸ್ವಯಂ ಘೋಷಣೆ ಅರ್ಜಿ ಕೊಟ್ಟು ಹಣ ಪಡೆಯುವ ಪದ್ಧತಿ ಮುಂದುವರೆಯಬೇಕು, ಇದನ್ನು ಬದಲಾಯಿಸುವುದು ಬೇಡ ಎಂದು ರಂಗರಾಜನ್ ರಾಜ್ಯ ಮುಜರಾಯಿ ಅರ್ಚಕರ ಗ್ರೂಪ್ ಸಂಘಟನಾ ಕಾರ್ಯದರ್ಶಿ ಯವರು ಸರಕಾರಕ್ಕೆ ಒತ್ತಾಯಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ