ಅಮರಶಿಲಿ ಜಕಣಾಚಾರಿ ಕಲೆ ಉಳಿಸಿ: ತಹಶೀಲ್ದಾರ್ ಡಾ. ಮಲ್ಲಪ್ಪ. ಕೆ.ಯರಗೋಳ
ಮಸ್ಕಿ:ಅಮರ ಶಿಲ್ಪಿ ಜಕಣಾಚಾರಿ ಅವರು ರಚಿಸಿದ ಅದ್ಭುತ ಕಲಾಕೃತಿಗಳು ಇಂದಿಗೂ ನಮ್ಮನ್ನು ಬೆರಗುಗೊಳಿಸುತ್ತಿದ್ದು,ಇಂತಹ ಕಲೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಹಸಿಲ್ದಾರ್ ಡಾ. ಮಲ್ಲಪ್ಪ ಯೆರಗೋಳ ಸಲಹೆ ನೀಡಿದರು.
ನಗರದ ತಾಲೂಕ ಆಡಳಿತ ಭವನದಲ್ಲಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು
'ದೇವಾಲಯಗಳ ನಿರ್ಮಾಣ ಹಾಗೂ ವಾಸ್ತುಶಿಲ್ಪ ಕಲೆಯಲ್ಲಿ ಅಮರಶಿಲ್ಪಿ ಜಕಣಾಚಾರಿ ಅವರು ಕೈಗೊಂಡ ಅದ್ಭುತ ಕುಸುರಿ ಕೆಲಸ ಜಗತ್ತಿನಲ್ಲಿ ಎಲ್ಲೂ ಕೂಡ ಕಾಣುವುದಿಲ್ಲ. ಆಧುನಿಕ ತಂತ್ರಜ್ಞಾನ ಯುಗದಲ್ಲಿ ತಾಂತ್ರಿಕತೆ ಎಷ್ಟೇ ಮುಂದುವರಿದಿದ್ದರೂ ಅದನ್ನು ಪುನರ್ ನಿರ್ಮಿಸಲು ಸಾಧ್ಯವಿಲ್ಲ. ನಾಡಿನ ಶಿಲ್ಪಕಲೆಗೆ ಅವರು ನೀಡಿರುವ ಕೊಡುಗೆ ಅಮೋಘ. ಜಗತ್ತಿನ ಶ್ರೇಷ್ಠ ವಾಸ್ತುಶಿಲ್ಪಿ.
ತುಮಕೂರು ಜಿಲ್ಲೆಯ ಕೈದಾಳೆಯಲ್ಲಿ ಜನಿಸಿದ ಅಮರಶಿಲ್ಪಿ ಜಕಣಾಚಾರಿ ಅವರು ಮೈಸೂರು ಸೋಮನಾಥ ದೇವಾಲಯದಿಂದ ತನ್ನ ಕಲೆಯನ್ನು ಆರಂಭಿಸಿ ಹಳೇಬೀಡು, ಬೇಲೂರು ಮೊದಲಾದೆಡೆ ಹಲವು ದೇಗುಲಗಳನ್ನು ನಿರ್ಮಿಸುವ ಮೂಲಕ ಕಲಾವೈಭವ ಮೆರೆದಿದ್ದಾರೆ ಎಂದು ಹೇಳಿದರು.
ಈ ವೇಳೆ ಮಸ್ಕಿ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು,ಸಮಾಜದವರು ಹಾಗೂ ತಹಸೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ