ಹಕ್ಕು ಪತ್ರ ವಿತರಿಸಿ 22 ವರ್ಷಗಳೇ ಗತಿಸಿದರೂ ನಿವೇಶನ ಭಾಗ್ಯ ಸಿಗದ ಫಲಾನುಭವಿಗಳು ಮುಖ್ಯಾಧಿಕಾರಿ ಮನವಿ ಸಲ್ಲಿಕೆ

ಮಸ್ಕಿ : ಪಟ್ಟಣದ ಪುರಸಭೆ ವ್ಯಾಪ್ತಿಯ ಲಿಂಗಸುಗೂರು ರಸ್ತೆಯಲ್ಲಿನ ಸರ್ವೆ ನಂ 32 ರಲ್ಲಿ 6 ಎಕರೆ ಜಮೀನಿನಲ್ಲಿ 2003-2004 ನೇ ಸಾಲಿನಲ್ಲಿ 151 ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿದ್ದು,ಜಮೀನನ್ನು ಅಕ್ಕ-ಪಕ್ಕ ಇರುವ ಜಮೀನು ಮಾಲೀಕರು ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು ಅದನ್ನು ತೆರವುಗೊಳಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸ ಬೇಕು ಎಂದು 

ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ್ ಡಾ ಎನ್.ಮೂರ್ತಿ ಸ್ಥಾಪಿತ ನಗರ ಘಟಕ ಮಸ್ಕಿ ವತಿಯಿಂದ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.



ಪಟ್ಟಣ ಪಂಚಾಯತ ಸಂದರ್ಭದಲ್ಲಿ ನಿವೇಶನ ಸಹಿತ 151 ಮನೆಗಳ ಪೈಕಿ 2001-2002 ನೇ ಸಾಲಿನ ನವಗ್ರಾಮ ಯೋಜನೆಯಲ್ಲಿ 50 ಮತ್ತು ಎ.ಸಿ.ಎ ಯೋಜನೆಯಲ್ಲಿ 100 ಮನೆಗಳು ಮಂಜುರಾಗಿದ್ದವು, ಅದರಂತೆ 151 ಫಲಾನುಭವಿಗಳಿಗೆ ಆಶ್ರಯ ಯೋಜನೆಯಡಿಯಲ್ಲಿ 151 ಮನೆಗಳನ್ನು ಕಳಪೆಕಾಮಗಾರಿ ನಿರ್ಮಾಣ ಮಾಡಿದ್ದು, ಮನೆಗಳು ವಾಸಕ್ಕೆ ಯೋಗ್ಯವಾಗಿರುವುದಿಲ್ಲ. ಲೋಕೋಪಯೋಗಿ ಇಲಾಖೆಯಿಂದ ಧೃಡೀಕರಣ ಪಡೆದು ಸದರಿ ಮನೆಗಳನ್ನು ಪುರಸಭೆ ವತಿಯಿಂದ ನೆಲಸಮಮಾಡಿರುತ್ತಾರೆ.


ಸುಮಾರು 20ವರ್ಷವಾದರು ಇನ್ನು ಫಲಾನುಭವಿಗಳಿಗೆ ಹಕ್ಕು ಪತ್ರ ಮಾತ್ರ ಸಿಕ್ಕಿದ್ದು ಇನ್ನು ತಮ್ಮ ಜಾಗಗಳನ್ನು ಗುರುತಿಸಲಿಕ್ಕೆ ಸಾಧ್ಯವಾಗುತ್ತಿಲ್ಲ ಇದಕ್ಕೆ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳನ್ನು ಕೇಳಿದರೆ ಅಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವದರಿಂದ ವಾಸಕ್ಕೆ ಯೋಗ್ಯವಿಲ್ಲವೆಂದು ತಿಳಿಸಿರುತ್ತಾರೆ, ಆದ್ದರಿಂದ ಅಲ್ಲಿ ಅನೇಕ ಸುತ್ತ-ಮುತ್ತ ಇರುವ ಸರ್ವೆ ನಂಬರ್ ಗಳ ಮಾಲೀಕರು ಈ ಜಾಗವನ್ನು ಒತ್ತುವರಿ ಮಾಡಿಕೊಂಡಿರುತ್ತಾರೆ, ಆದ್ದರಿಂದ ತಾವುಗಳು ಈ ಜಾಗವನ್ನು ಪುನಃ ಸರ್ವೆ ನಡಿಸಿ ಫಲಾನುಭವಿಗಳಿಗೆ ಹಕ್ಕು ಪಾತ್ರದಂತೆ 25X30 ಅಳತೆ ಪ್ರಕಾರ 151 ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಮತ್ತು ಈ ಜಾಗದಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಸಿ.ಸಿ ರಸ್ತೆ ನಿರ್ಮಿಸಿ ಹಕ್ಕುದಾರರು ವಾಸಿಸಲು ಅನುಕೂಲ ಮಾಡಿಕೊಡಬೇಕೆಂದು ಪುರಸಭೆ ಮುಖ್ಯಾಧಿಕಾರಿ ಗೆ ಮನವಿ ಪತ್ರವನ್ನು ಸಲ್ಲಿಸಿದರು.

ಈ ವೇಳೆಯಲ್ಲಿ ಮಲ್ಲಿಕ್ ಮುರಾರಿ,ನಾಗಭೂಷಣ ಬಾರಿಕೇರ,ಮಲ್ಲಯ್ಯ ಮುರಾರಿ,ರವಿಮಡಿವಾಳ, ಮರಿಸ್ವಾಮಿ ಹಸಮಕಲ್ ಸೇರಿದಂತೆ ಫಲಾನುಭವಿಗಳು ಇದ್ದರು.




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*