ಕಲೆ ಮತ್ತು ವಾಸ್ತಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ : ತಹಶೀಲ್ದಾರ್ ನಾಗರಾಜ್
ಮಸ್ಕಿ: ವಿಶ್ವಕರ್ಮ ಸಮುದಾಯವು ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದು ಗುಡದೂರು ಹೋಬಳಿಯ ಉಪ ತಹಶೀಲ್ದಾರ ನಾಗರಾಜ್ ರವರು ತಿಳಿಸಿದರು.
ತಾಲೂಕಿನ ಗುಡದೂರು ಗ್ರಾಮದ ನಾಡ ಕಚೇರಿಯಲ್ಲಿ ಕಂದಾಯ ನಿರಿಕ್ಷರು,ಗ್ರಾಮ ಲೆಕ್ಕ ಅಧಿಕಾರಿಗಳು, ಆಪರೇಟರ್ ಸಿಬ್ಬಂದಿಗಳ ಸಮ್ಮುಖದಲ್ಲಿ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ಹಾಗೆಯೇ ಪಟ್ಟಣದ ಪುರಸಭೆ ಮುಂಭಾಗದ ವಿಶ್ವಕರ್ಮ ವೃತ್ತಕ್ಕೆ ಮಾದೇವಪ್ಪಗೌಡ ಪೊಲೀಸ್ ಪಾಟೀಲ್, ಪುರಸಭೆ ಸದಸ್ಯರಾದ ರವಿಗೌಡ ಪೊಲೀಸ್ ಪಾಟೀಲ, ಚೇತನ ಪಾಟೀಲ,ಸಂತೋಷ ಪತ್ತಾರ, ಪೂಜೆ ಸಲ್ಲಿಸಿ ಸರಳವಾಗಿ ವಿಶ್ವ ಕರ್ಮ ಜಯಂತಿ ಯನ್ನು ಆಚರಣೆ ಮಾಡಲಾಯಿತು.
ನಂತರ ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಧನಗರವಾಡಿ ಯಲ್ಲಿ,ಪುರಸಭೆ, ಕೃಷಿ ಪತ್ತಿನ ಸಹಕಾರಿ ಯಲ್ಲಿ,ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ,ಕಾಂಗ್ರೆಸ್, ಬಿಜೆಪಿ ಪಕ್ಷದ ಕಛೇರಿಯಲ್ಲಿ, ಹಾಗೂ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಅಡವಿಭಾವಿ ತಾಂಡಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತ ರತ್ನ
ಡಾ.ಅಂಬೇಡ್ಕರ್ ವಸತಿ ಶಾಲೆ,ಜೋಗಿನ ರಾಮಣ್ಣ ಸ್ಮಾರಕ ಪ್ರಾಥಮಿಕ, ಪ್ರೌಢಶಾಲಾ,ಉನ್ನತಿ ಕರಿಸಿದ ಸ. ಹಿ,ಪ್ರಾ.ಶಾಲೆ ಜಂಗಮರ ಹಳ್ಳಿ, ಎಸ್ ರಾಮಲದಿನ್ನಿ, ತುಗ್ಗಲದಿನ್ನಿ, ಜಿನ್ನಾಪುರ, ಉದ್ಬಾಳ,
ಸ.ಹಿ.ಪ್ರಾ. ಶಾಲೆ ಕರಿಗುಡ್ಡ(ಮೆದಿಕಿನಾಳ),ಸರಕಾರಿ ಹಿರಿಯ ಮತ್ತು ಕಿರಿಯ ಪ್ರಾ.ಶಾಲೆಗಳಲ್ಲಿ, ಹಾಗೂ ಗೌಡನಭಾವಿ ,ಕೋಳಬಾಳ, ವಿವಿಧೋದ್ದೇಶ ಪತ್ತಿನ ಸೌಹಾರ್ದ ಸಹಕಾರಿ ಸಂಘ ಮೆದಿಕಿನಾಳ ಮತ್ತು ಗ್ರಾಮ ಪಂಚಾಯತಿಗಳು ಸೇರಿದಂತೆ ತಾಲೂಕಿನಾದ್ಯಂತ ಕಲ್ಯಾಣ ಕರ್ನಾಟಕ ದಿನಾಚರಣೆ ಹಾಗೂ ವಿಶ್ವಕರ್ಮ ಜಯಂತಿಯನ್ನು ಆಚರಣೆ ಮಾಡಲಾಯಿತು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ