ಕಿರ್ಲೋಸ್ಕರ್ ಫೆರಸ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಆರೋಗ್ಯ ತಪಾಸನೆ ಹಾಗೂ ರಕ್ತದಾನ ಶಿಬಿರ
ವರದಿ - ಮಂಜುನಾಥ್ ಕೋಳೂರು,
ಕೊಪ್ಪಳ ಕೊಪ್ಪಳ ಸೆ 17 : - ತಾಲೂಕಿನ ಬೇವಿನಹಳ್ಳಿಯ ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ತಪಾಸನೆ ಮತ್ತು ರಕ್ತದಾನ ಶಿಬಿರವನ್ನು ನಗರದ ಹೊಸಪೇಟೆ ರಸ್ತೆಯಲ್ಲಿರುವ ಮಧುಶ್ರೀ ಗಾರ್ಡನ್ ನಲ್ಲಿ ಗುರುವಾರ ಸೆ .18 ರಂದು ಹಮ್ಮಿಕೊಳ್ಳಲಾಗಿದೆ. ಹುಬ್ಬಳ್ಳಿಯ ವಿಹಾನ್ ಹೃದಯ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ , ನಗರದ ಸ್ಥಳೀಯ ಕೆ .ಎಸ್. ಆಸ್ಪತ್ರೆ ,ರೆಡ್ ಕ್ರಾಸ್ ಸಂಸ್ಥೆ , ಭಾರತೀಯ ವೈದ್ಯಕೀಯ ಸಂಸ್ಥೆ , ಸರ್ವೋದಯ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಯೋಗದಲ್ಲಿ ಶಿಬಿರ ನಡೆಯುತ್ತದೆ .
ಅಂದು ಬೆಳಗ್ಗೆ 9:00 ಗಂಟೆಯಿಂದ ಸಂಜೆ 4:00 ವರೆಗೆ ನಡೆಯುವ ಶಿಬಿರದಲ್ಲಿ 30 ರಿಂದ 45 ವಯೋಮಾನದವರಿಗೆ ಹೃದಯ ತಪಾಸನೆ , 45 ವರ್ಷ ಮೇಲ್ಪಟ್ಟವರಿಗೆ ಮೂಳೆ ಸಾಂದ್ರತೆಯ ತಪಾಸನೆ ಹಾಗೂ ರಕ್ತದಾನ ಮಾಡಲಾಗುವುದು. ತಪಾಸನಿಗೆ ಬರುವವರು ಕಡ್ಡಾಯವಾಗಿ ಆಧಾರ್ ಕಾರ್ಡನ್ನು ಜೊತೆಯಲ್ಲಿತರಬೇಕು. ಮಾಹಿತಿಗಾಗಿ :- ದೀಪ ಸುನಿಲ ಸಿ.ಇ.ಓ ಸರ್ವೋದಯ ಸಂಸ್ಥೆ - 8123045345 , ಡಾಕ್ಟರ್ ಪ್ರವೀಣ್ ಕುಮಾರ್ ಮೆಡಿಕಲ್ ಆಫೀಸರ್ ಕಿರ್ಲೋಸ್ಕರ್ -8123142049 , ದೇವರಾಜ್ .ಕೆ.ಎನ್ ನರ್ಸಿಂಗ್ ಆಫೀಸರ್ ಕಿರ್ಲೋಸ್ಕರ್- 9449613425 , ಉಮೇಶ್ ಎಚ್. ಆರ್. ಎಸ್ . ಓ.ಕಿರ್ಲೋಸ್ಕರ್ -9482813038 , ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ