"ದೇಶದ ಅಭಿವೃದ್ಧಿಗೆ ಕೈಗಾರಿಕೆಗಳು ಅಗತ್ಯವಿದ್ದು ಉದ್ಯೋಗ ಸೃಷ್ಟಿಯಾಗುತ್ತವೆ" : ಸಂಸದ ರಾಜಶೇಖರ ಹಿಟ್ನಾಳ ಕಿರ್ಲೋಸ್ಕರ್ ಕಾರ್ಖಾನೆಯ ಸಾಮಾಜಿಕ ಸೇವೆ ಅನುಕರಣೀಯ

ವರದಿ - ಮಂಜುನಾಥ ಕೋಳೂರು ಕೊಪ್ಪಳ ಕೊಪ್ಪಳ ಸೆ- 18 : - ತಾಲೂಕಿನ ಬೇವಿನಹಳ್ಳಿಯ ಕಿರ್ಲೋಸ್ಕರ್ ಫೆರಸ್ ಕಂಪನಿಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ನಗರದ ಮಧುಶ್ರೀ ಗಾರ್ಡನ್ ನಲ್ಲಿ ಗುರುವಾರ ಏರ್ಪಡಿಸಿದ ಶಿಬಿರದಲ್ಲಿ 395 ಜನರು ಆರೋಗ್ಯ ತಪಾಸನೆ ಮಾಡಿಸಿಕೊಂಡರು . ಕಿರ್ಲೋಸ್ಕರ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ , ಹುಬ್ಬಳ್ಳಿಯ ವಿಹಾನ್ ಹೃದಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ , ಸ್ಥಳೀಯ ಕೆ. ಎಸ್. ಆಸ್ಪತ್ರೆ , ರೆಡ್ ಕ್ರಾಸ್ ಸಂಸ್ಥೆ , ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಯೋಗದಲ್ಲಿ ಶಿಬಿರವನ್ನು ಸಂಸದ ರಾಜಶೇಖರ ಹಿಟ್ನಾಳ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಯಾವುದೇ ಊರು, ರಾಜ್ಯ , ದೇಶ ಅಭಿವೃದ್ದಿಯಾಗಬೇಕಾದರೆ ಕಾರ್ಖಾನೆಗಳು ಅವಶ್ಯಕ. ಕಾರ್ಖಾನೆಗಳ ಸ್ಥಾಪನೆಯಿಂದ ಉದ್ಯೋಗಗಳು ಸೃಷ್ಟಿಯಾಗುತ್ತವೆ ಕಾರ್ಖಾನೆಗಳ ಮೂಲಕ ಎಲ್ಲ ರೀತಿಯ ಅಭಿವೃದ್ದಿ ಸಾಧ್ಯವಾಗುತ್ತದೆ. ಯಾವುದೇ ಕಾರ್ಖಾನೆಯಿಂದ 90% ರಷ್ಟು ಒಳಿತಾದರೆ 10% ಕೆಡಕು ಇದ್ದದ್ದೇ ಹಾಗಂತ ನಾವು ಎಲ್ಲಾ ಕಾರ್ಖಾನೆಗಳನ್ನು ವಿರೋದಿಸುವುದಕ್ಕಾಗುವುದಿಲ್ಲ. ಕೊಪ್ಪಳ ಜಿಲ್ಲೆಗೆ ಕಾರ್ಖಾನೆಗಳು ಬರುತ್ತಿವೆ. ಎಲ್ಲರ ಅಭಿಪ್ರಾಯ ಎಂದರೆ ಜನವಸತಿ ಪ್ರದೇಶದಿಂದ ಈ ಕಾರ್ಖಾನೆಗಳು ದೂರ ಇರಬೇಕು ಎನ್ನುವದು ಎಂದು ಹೇಳಿದರು. 

 ಕಿರ್ಲೋಸ್ಕರ್ ಕಾರ್ಖಾನೆಯು ತನ್ನ ಸಾಮಾಜಿಕ ಬದ್ದತೆಯನ್ನು ತೋರುತ್ತ ವಿವಿಧ ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡಿದೆ. ಕಳೆದ 30 ವರ್ಷಗಳಿಂದ ಕಾರ್ಖಾನೆಯ ಚಟುವಟಿಕೆಗಳನ್ನು ಅಭಿವೃದ್ದಿ ಕಾರ್ಯಗಳನ್ನು ನೋಡುತ್ತಾ ಬಂದಿದ್ದೇವೆ. ಇದಕ್ಕಾಗಿ ಕಾರ್ಖಾನೆಯ ಸಂಪೂರ್ಣ ಆಡಳಿತ ಮಂಡಳಿಗೆ ಅಭಿನಂದನೆಗಳು. ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಇತ್ತೀಚಿಗೆ ಹೊಸ ಹೊಸ ತಂತ್ರಜ್ಞಾನ ಬಂದಿದೆ, ಅವೆಲ್ಲವನ್ನೂ ಇತರೆ ಕಾರ್ಖಾನೆಗಳವರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. 

 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾ , ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೆ.ಎಫ್‌.ಐ.ಎಲ್ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಡಾ. ಪಿ. ನಾರಾಯಣರವರು ಸಂಸ್ಥೇ ನಡೆದು ಬಂದ ದಾರಿ ಹಾಗೂ ಈ ವರೆಗೆ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿರುವ ವಿವಿಧ ಅಭಿವೃದ್ಧಿ ಸಾಮಾಜಿಕ ಕಾರ್ಯಗಳ ಮಾಹಿತಿಯನ್ನು ನೀಡಿದರು .ಅಧ್ಯಕ್ಷತೆ ವಹಿಸಿಕೊಂಡಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕ( ಎಂ.ಡಿ ) ಆರ್.ವಿ.ಗುಮಾಸ್ತೆ ಮಾತನಾಡಿ ಕಾರ್ಖಾನೆಯು ಹಿಂದುಳಿದ ಪ್ರದೇಶವಾದ ಕೊಪ್ಪಳ ಜಿಲ್ಲೆಯ ಬೇವಿನಹಳ್ಳಿಯ ಹತ್ತಿರ 1993 ರಲ್ಲಿ ಸ್ಥಾಪಿನೆಗೊಂಡ ನಂತರ "ಬೀಡುಕಬ್ಬಿಣ ಮತ್ತು ಬೂದುಕಬ್ಬಿಣದ ಎರಕಗಳನ್ನು " ಉತ್ಪಾದಿಸುತ್ತಿದೆ. ಈ ಉತ್ಪನ್ನಗಳು ಮುಖ್ಯವಾಗಿ ವಾಹನ ತಯಾರಿಕಾ ವಲಯಕ್ಕೆ ಬಿಡಿಭಾಗಗಳನ್ನು ದೇಶ ವಿದೇಶದ ಗ್ರಾಹಕರಿಗೆ ಮಾರಾಟ ಮಾಡುತ್ತ ಬಂದಿದೆ ಹಾಗು ಸಂಸ್ಥೆಯು ಹಲವಾರು ಕಷ್ಟಕರ ಸಂದರ್ಭಗಳಲ್ಲೂ ಸಹ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುತ್ತಾ ಬಂದಿದೆ ಎಂದು ಹೇಳಿದರು. ಇಂದಿನ ದಿನಮಾನಗಳಲ್ಲಿ ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ಅಗತ್ಯವಾಗಿದೆ. ಪ್ರತಿವರ್ಷ ತಪ್ಪದೇ ಆರೋಗ್ಯದ ತಪಾಸಣೆ ಮಾಡಿಸಿಕೊಳ್ಳುತ್ತ ಬಂದರೆ ಕೊನೆಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ನೆರವಾಗುತ್ತದೆ. ಈ ನಿಟ್ಟಿನಲ್ಲಿ ಸಂಸ್ಥೆಯು ನಗರಪ್ರದೇಶದ ಜನರಿಗಾಗಿ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನ ಇದರ ಪ್ರಯೊಜನ ಪಡೆದುಕೊಳ್ಳಲಿ , ಮುಂದಿನ ದಿನಗಳಲ್ಲಿ ಗ್ರಾಮಾಂತರ ಭಾಗದಲ್ಲೂ ಆರೋಗ್ಯ ತಪಾಸಣೆಯನ್ನು ಹಮ್ಮಿಕಕೊಳ್ಳಲಾಗುವುದು ಎಂದು ಹೇಳಿದರು. .

  ಇದೇ ಸಂದರ್ಭದಲ್ಲಿ 200 ಕ್ಕೂ ಹೆಚ್ಚು ಜನ ದಾನಿಗಳು ರಕ್ತದಾನ ಮಾಡಿದರು. ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕರು 220 ಜನರು ಹೃದಯ ತಪಾಸಣೆ ಹಾಗೂ 175 ಜನರು ಮೂಳೆ ಸಾಂದ್ರತೆಯ ತಪಾಸಣೆ ಮಾಡಿಸಿಕೊಂಡರು. ಹಳ್ಳಿಗಳಿಂದ ಬಂದ0ತಹ ಜನರೂ ಸಹ ತಪಾಸಣೆ ಮಾಡಿಸಿಕೊಂಡು ಶಿಬಿರದ ಸದುಪಯೋಗವನ್ನು ಪಡೆದುಕೊಂಡರು. 

 ಈ ಸಂದರ್ಭದಲ್ಲಿ ಹುಬ್ಬಳ್ಳಿಯ ವಿಹಾನ್ ಆಸ್ಪತ್ರೆಯ ವೈದ್ಯರು , ಕಾರ್ಖಾನೆಯ ಹಿರಿಯ ಅಧಿಕಾರಿಗಳು, ಮಹಿಳಾ ಕ್ಲಬ್ ನ ಅಧ್ಯಕ್ಷರು , ಸದಸ್ಯರು, ಪದಾಧಿಕಾರಿಗಳು ಹಾಜರಿದ್ದರು. ಶಿವಯ್ಯ ಸ್ವಾಮಿ ಸ್ವಾಗತಿಸಿದರು, ರಮೇಶ ದೀಕ್ಷಿತ ನಿರೂಪಿಸಿದರು ಹಾಗೂ ಉದ್ದವ್ ಕುಲಕರ್ಣಿ ವಂದಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*