ನಮ್ಮ ಪ್ರಜಾ ಸಾಕ್ಷಿ ವರದಿಗೆ ಎಚ್ಚೆತ್ತು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಹಾಗೂ ತಹಶೀಲ್ದಾರ್ ಸ್ಥಳ ಭೇಟಿ

ಫಲಶ್ರುತಿ ವರದಿ 

ವರದಿ : ಗ್ಯಾನಪ್ಪ ದೊಡ್ಡಮನಿ 

ಮಸ್ಕಿ : ಪಟ್ಟಣದ ತಹಶೀಲ್ದಾರ ಕಚೇರಿಯ ಹಿಂಭಾಗದ ಪರಿಶಿಷ್ಟ ಪಂಗಡ ಬಾಲಕಿಯರ ಮೆಟ್ರಿಕ್ ಪೂರ್ವ ವಸತಿ ನಿಲಯದ ವಿದ್ಯಾರ್ಥಿಗಳು ನಿಲಯ ಮೂಲಭೂತ ಸೌಕರ್ಯ ಹಾಗೂ ಪಾಲಕರ ವರ್ತನೆಯ ಕುರಿತು ತಹಶೀಲ್ದಾರರಾದ ಡಾ.ಮಲ್ಲಪ್ಪ.ಕೆ. ಯರಗೋಳ ಅವರಲ್ಲಿ ತಮ್ಮ ನೋವಿನ ಅಳಲನ್ನು ಪರಿಹರಿಸುವಂತೆ ವಿದ್ಯಾರ್ಥಿನಿಯರು ಮನವಿ ಪತ್ರವನ್ನು ಸಲ್ಲಿಸಿದ್ದಾರೆ.ನಮ್ಮ ಹಾಸ್ಟೆಲ್ ನಲ್ಲಿ 108 ವಿದ್ಯಾರ್ಥಿನಿಯರ ಹಾಜರಾತಿ ದಾಖಲಾಗಿದ್ದು ಇದರಲ್ಲಿ 48 ವಿದ್ಯಾರ್ಥಿನಿಯರು ಪ್ರಸ್ತುತ ಇದ್ದೇವೆ ನಮಗೆ ನಮ್ಮ ವಾರ್ಡನ್ ಮೇಡಂ, 

ಇವರು ಸರಿಯಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ತಿಂಗಳಗೊಮ್ಮೆ ಸರಿಯಾಗಿ ಕಿಟ್ ಕೊಡುತ್ತಿಲ್ಲ ಜೂನ್ ತಿಂಗಳಿಂದ ಇಲ್ಲಿಯರೆಗೆ ಒಂದು ಸಲ ಮಾತ್ರ ಕಿಟ್ ಕೊಟ್ಟಿದ್ದಾರೆ ಮತ್ತು ಅದರಲ್ಲಿ ನಮಗೆ ಕಡಿಮೆ ವಸ್ತುಗಳನ್ನು ಕೊಟ್ಟಿದ್ದಾರೆ. ನಮಗೆ ಈ ಸಾಮಗ್ರಿಗಳು ಸಾಕಾಗುತ್ತಿಲ್ಲ, ಆದುದರಿಂದ ನಾವು ಮನೆಯಿಂದ ಅಂಗಡಿಯಿಂದ ತರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಊಟದ ವಿವರಣೆಯಲ್ಲಿ ಮೂರು ವಾರಕ್ಕೊಮ್ಮೆ ಚಿಕನ್ ಮಾಡಬೇಕೆಂದು ಮೆನು ಚಾಟ್ ಪ್ರಕಾರ ನಿಯಮ ಇದೆ ಆದರೆ ನಮ್ಮ ವಾರ್ಡನ್ ಮೇಡಂ ಜೂನ್ ತಿಂಗಳಿಂದ ಇಲ್ಲಿಯವರೆಗೆ ಒಂದು ಸಲ ಮಾತ್ರ ಚಿಕನ್ ಮಾಡ್ಸಿದ್ದಾರೆ ಮತ್ತು ಎರಡು ವಾರದಿಂದ ಬಾಳೆಹಣ್ಣು ಕೊಟ್ಟಿಲ್ಲ ದಿನ ಪತ್ರಿಕೆ ತರಿಸುತ್ತಿಲ್ಲ ನಮಗೆ ಆಗಸ್ಟ್ 31 ರಂದು ಬೆಳಗ್ಗೆ 6 ರಿಂದ ಸಾಯಂಕಾಲ 5:30ರ ವರೆಗೆ ಕುಡಿಯಲು ಮತ್ತು ಸ್ನಾನ ಮಾಡಲು ನೀರಿಲ್ಲ ನಮ್ಮ ವಾರ್ಡನ್ ಮೇಡಂ ಇದರ ಬಗ್ಗೆ ಮಾಹಿತಿ ನೀಡಿದರೆ ಯಾವುದೇ ಉತ್ತರವಿಲ್ಲ. ನಾವೆಲ್ಲ ವಿದ್ಯಾರ್ಥಿನಿಯರು ನಮ್ಮ ಮೂಲಭೂತ ಸೌಕರ್ಯಗಳ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗನೆ ಪರಿಹರಿಸಲಿ ಹಾಗೂ ನಮ್ಮ ತಂದೆ - ತಾಯಿ ಹಾಸ್ಟೆಲ್ ಗೆ ಭೇಟಿಗೆ ಬಂದರೆ ಒಳಗಡೆ ಬಿಡುವುದಿಲ್ಲ.

ತಮ್ಮ ಆಫೀಸಿನಲ್ಲಿ ಒಬ್ಬ ಖಾಸಗಿ ವ್ಯಕ್ತಿಯನ್ನು ಕೂ ರಿಸಿಕೊಳ್ಳುತ್ತಿದ್ದು ಇದರಿಂದ ನಮಗೆ ತುಂಬಾ ತೊಂದರೆ ಆಗುತ್ತಿದ್ದು ಭಯಭೀತಿ ವಾತಾವರಣ ಸೃಷ್ಟಿಯಾಗಿದೆ ನಾವು ಇದನ್ನು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ದೂರು ನೀಡಿದರೇ ನಮಗೆ ನಮ್ಮ ವಾರ್ಡನ್ ಮೇಡಂ ತುಂಬಾ ಬೈದು ನಮ್ಮನ್ನು ಅಳಿಸಿ ತೊಂದರೆ ನೀಡುತ್ತಾರೆ. !ನಮ್ಮ ವಿದ್ಯಾಭ್ಯಾಸಕ್ಕೆ ಬಂದಿರುವ ಕಂಪ್ಯೂಟರ್ ಪುಸ್ತಕ, ಜಾಮೆಟ್ರಿ ಬಾಕ್ಸ್, ಇನ್ನಿತರ ವಸ್ತುಗಳು ಪಕ್ಕದ ಖಾಸಗಿ ಕೋಚಿಂಗ್ ಸೆಂಟರ್ ನಲ್ಲಿ ಇಟ್ಟಿದ್ದು 

ನಮ್ಮ ಗಮನಕ್ಕೆ ಬಂದಿದೆ ಆದ ಕಾರಣ ತಾವುಗಳು ಇದರ ಬಗ್ಗೆ ಗಮನ ಹರಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಎಂದು ಸಾಲು ಸಾಲು ಆರೋಪ ಮಾಡಿರುವ 

ಪರಿಶಿಷ್ಟ ಪಂಗಡ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರ ಸಮಸ್ಯೆಗೆ ಸ್ಪಂದಿಸಿ ವಸತಿ ನಿಲಯದ ನಿಲಯ ಪಾಲಕರ ಮೇಲೆ ಕ್ರಮ ಜರುಗಿಸುವರೇ ಕಾದು ನೋಡಬೇಕಿದೆ. ಎಂದು ನಮ್ಮ ಪ್ರಜಾ ಸಾಕ್ಷಿ ಪತ್ರಿಕೆಯಲ್ಲಿ ವರದಿ ಆಗುತ್ತಿದ್ದಂತೆಯೇ ಎಚ್ಚೆತ್ತ ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿ ವರ್ಗದವರು ಹಾಗೂ ತಹಶೀಲ್ದಾರ್ ರವರು ಸ್ಥಳ ಭೇಟಿ ಮಾಡಿದ್ದಾರೆ. ವಿದ್ಯಾರ್ಥಿಗಳೊಂದಿಗೆ ನಡೆದ ಘಟನೆಯ ಬಗ್ಗೆ ಹಾಗೂ ಮೂಲಭೂತ ಸೌಕರ್ಯ ನೀಡದ ಬಗ್ಗೆ ಚರ್ಚಿಸಿ ಮಾಹಿತಿ ಪಡೆದು ಸಂಭಂದಿಸಿದ ಹಾಸ್ಟೆಲ್ ವಾರ್ಡನ್ ಅವರ ಮೇಲೆ ಕ್ರಮ ಜರುಗಿಸುವ ಎಂದು ಸಭೆಯಲ್ಲೇ ಶಿವಮಾನಪ್ಪ ರಾಯಚೂರು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ತಹಶೀಲ್ದಾರರಾದ ಡಾ.ಮಲ್ಲಪ್ಪ.ಕೆ.ಯರಗೋಳ,ಮಹಾಂತೇಶ್ ಕಂದಾಯ ನಿರೀಕ್ಷಕರು ಮಸ್ಕಿ, ಗಂಗಪ್ಪ ಪವಾರ್ ಗ್ರಾಮ ಲೆಕ್ಕಾಧಿಕಾರಿ ಮಸ್ಕಿ,ಆರ್.ಕೆ ನಾಯಕ ಸಮುದಾಯದ ಮುಖಂಡರು ಹಾಗೂ ಹಾಸ್ಟೆಲ್ ವಿದ್ಯಾರ್ಥಿನಿಯರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*