ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ : ಶಾಸಕ ಬಸವನಗೌಡ ತುರುವಿಹಾಳ
ಮಸ್ಕಿ : ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ ವಾಗಿದೆ ಕಲ್ಯಾಣ ಕರ್ನಾಟಕ ಭಾಗ ಸೇರಿ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳ ಎಲ್ಲ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕವಾಗಿ ಈಡೇರಿಸಿದೆ' ಎಂದು ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ ಹೇಳಿದರು.
ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಮಸ್ಕಿ ತಾಲ್ಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರ ಸಂಘದ ವತಿಯಿಂದ ನಾಲ್ಕನೇ ವರ್ಷದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದ ಅವರು ಖಾಸಗಿ ಶಾಲೆ ಕಾಲೇಜು ಗಳು ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಿ ಪಡಿಸಿದರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ.ಸಮಾಜದಲ್ಲಿ ಶಿಕ್ಷಕರಿಗೆ ಇರುವ ಸ್ಥಾನಮಾನ ಯಾರಿಗೂ ಇಲ್ಲಾ ಶಿಕ್ಷಕರು ತಮ್ಮ ಸ್ಥಾನಮಾನಗಳಿಗೆ ಧಕ್ಕೆಯಾಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಮಸ್ಕಿ ಚರ್ಚ್ ಫಾಧರ್ಫಾ|| ಕ್ಷೇವಿಯರ್ ರವಿ,ರೋಪ್ಸೊ ಜಿಲ್ಲೆ ಅಧ್ಯಕ್ಷ ಶ್ರೀ ನಿವಾಸ,
ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಉಪಾಧ್ಯಕ್ಷೆ ಗೀತಾ ಶಿವರಾಜ ಬುಕ್ಕಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತ, ವೆಂಕಟರೆಡ್ಡಿ ಹಾಲಾಪೂರ, ಗ್ಯಾರಂಟಿ ಸಮಿತಿ ಅಧ್ಯಕ್ಷ, ಹನುಮಂತಪ್ಪ ಮುದ್ದಾಪೂರ, ಬಸನಗೌಡ ಪೊಲೀಸ್ ಪಾಟೀಲ,
ನಾಗೇಶ್ ಜಂಗಮರಹಳ್ಳಿ,ಸಿದ್ದರಾಮಯ್ಯ ಗದ್ದಿಮಠ,ಮಲ್ಲಿಕಾರ್ಜುನ ಅರವಿ,ಶರಣೆ ಗೌಡಗದ್ದಗೌಡ,ವೆಂಕಟೇಶಲ್ಲೂ,ಮಲ್ಲಿಕಾರ್ಜುನ ಹಿರೇಮಠ,ಸೇರಿದಂತೆ ಕಾಶಾಸಗಿ ಶಿಕ್ಷಣಸಂಘದ ಪದಾಧಿಕಾರಿಗಳು ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ