ಬಳ್ಳಾರಿಯ ಪ್ರತಿಭೆ, ಮುಖ್ಯ ಶಿಕ್ಷಕ ಎಚ್ .ತಿಪ್ಪೇಸ್ವಾಮಿಗೆ ಉತ್ತಮ ಶಿಕ್ಷಕ ಪ್ರಶಸ್ತಿ.
ಯಾದಗಿರಿ ಜಿಲ್ಲೆಯ, ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾವಿನಹಳಿಯ ಪ್ರಭಾರ ಮುಖ್ಯಗುರುಗಳಾದ ತಿಪ್ಪೇಸ್ವಾಮಿ.ಹೆಚ್ ಅವರಿಗೆ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಯಾದಗಿರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಯಾದಗಿರಿ ನೇತೃತ್ವದಲ್ಲಿ 2025 26 ನೇ ಸಾಲಿನ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕರಿಗೆ ಸನ್ಮಾನ ಸಮಾರಂಭ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಕಾರ್ಯಕ್ರಮ ನಡೆಯಿತು
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾವಿನಹಳಿಯ ಆವರಣದಲ್ಲಿ ಪ್ರಭಾರ ಮುಖ್ಯಗುರುಗಳಾದ ಇವರು 101 ಮರಗಳ ನೆಟ್ಟು ನೀರು ಹಾಕಿ ಪೋಷಿಸಿದ್ದಾರೆ.ಇನ್ನು ತಿಪ್ಪೇಸ್ವಾಮಿ.ಹೆಚ್ ಅವರು ಮಕ್ಕಳೊಂದಿಗೆ ಮಕ್ಕಳಂತೆ ಇದು ಉತ್ತಮವಾಗಿ ಸೃಜನಾತ್ಮಕವಾಗಿ, ಮಾನವೀಯ ಮೌಲ್ಯಗಳೊಂದಿಗೆ, ಪ್ರಾಯೋಗಿಕ ಬೋಧನೆ ಮಾಡಿ ಗಮನ ಸೆಳೆದಿದ್ದಾರೆ.
ಮೂಲತಃ ಬಳ್ಳಾರಿ ಗ್ರಾಮಾಂತರ ಸಿಂಧವಾಳ ಗ್ರಾಮದ ದಂಪತಿ ಧರ್ಮ ರೆಡ್ಡಿ, ರೇಣಕಮ್ಮ ಅವರ ಎರಡನೇ ಪುತ್ರ ರಾಗಿದ್ದಾರೆ. ಈ ಎಲ್ಲಾ ಸಾಧನೆಗೆ ತಂದೆ ತಾಯಿಗಳು ಮತ್ತು ಪೋಷಕರು ಹಾಗೂ ಯಾದಗಿರಿ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಶಿಕ್ಷಕರು ಪ್ರೋತ್ಸಾಹಕ್ಕೆ ಧನ್ಯವಾದಗಳು ತಿಳಿಸಿದ್ದಾರೆ.
ಈ ಸಮಯದಲ್ಲಿ ಬಾಬುರಾವ್ ಚಿಂಚನಸೂರು, ಶಾಸಕರಾದ ಚನ್ನ ರೆಡ್ಡಿ ಪಾಟೀಲ್ ತುನ್ನೂರ್, ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಬಾಬುರಾವ್ ಕಾಡ್ಲೂರು, ಡಯಟ್ ಯಾದಗಿರಿ ಪ್ರೀನ್ಸಿಪಾಲ ವೃಷಬೇಂದ್ರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಜಿ.ಕನ್ನಳ್ಳಿ , ಚೆನ್ನಪ್ಪ ಎಸ್ .ಕಲ್ಮನಿ, ಮಲ್ಲಿಕಾರ್ಜುನ್ ಪೂಜಾರಿ, ಸಿ.ಈ. ಓ ಮಲ್ಲಿಕಾರ್ಜುನ್ ಕವಲಿ, ಬಸವರಾಜ್ ಮನಗನಾಳ, ಸಿಆರ್.ಪಿ ಸುಬ್ರಮಣಿ, ಷಣ್ಮುಖಪ್ಪ ಮತ್ತು ತಾಲೂಕಿನ ಶಿಕ್ಷಕ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ