ವಿಜಯನಗರ ಜಿಲ್ಲಾ ಕವಿಗಳಿಂದ, 'ರೈತರ ಬಗ್ಗೆ' ಕವನ ರಚಿಸುವ ಜಿಲ್ಲಾ ಮಟ್ಟದ ಬೃಹತ್ ಕವಿಗಳ ಕಲರವ !
ವಿಜಯನಗರ:- ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮದ ಗುಡ್ಡಪ್ಪ. ಬಿ ಜಿಲ್ಲಾಧ್ಯಕ್ಷರು ಕರ್ನಾಟಕ ವಿಕಾಸ ರಂಗ ವಿಜಯನಗರ ಜಿಲ್ಲೆ ವತಿಯಿಂದ ವಿಜಯನಗರ ಜಿಲ್ಲಾ ಕವಿಗಳಿಂದ ಏಕಕಾಲದಲ್ಲಿ 21 ನಿಮಿಷದೊಳಗೆ ರೈತರ ಬಗ್ಗೆ ಕವನ ರಚಿಸುವ ಜಿಲ್ಲಾ ಮಟ್ಟದ ಬೃಹತ್ ಕವಿಗಳ ಕಲರವ -2025 ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಪ್ರಮಾಣಿಕ ಮನಸ್ಸುಗಳ ಸಂಗಮವೇ! ಈ ಕಾರ್ಯಕ್ರಮದ ಆಶಯ, ಇದು ಸ್ಪರ್ಧೆ ಅಲ್ಲ ಜಿಲ್ಲೆಯ ನಾನಾ ಭಾಗಗಳ ಕವಿಗಳ ಸಂಗಮ ಮತ್ತು ನಮ್ಮ ಅನ್ನದಾತನಿಗೆ ಗೌರವ ಸಲ್ಲಿಸುವ ಸಂಭ್ರಮ ಭಾಗವಹಿಸುವ ಕವಿಗಳು ಕ. ವಿ. ರಂಗ ಸಮಿತಿ, ನಿಯಮಾವಳಿಗೆ ಒಳಪಟ್ಟು ಭಾಗವಹಿಸಲು ವಿನಂತಿಸಿಕೊಂಡಿದ್ದಾರೆ.
ಭಾಗವಹಿಸುವ ಕವಿಗಳಿಗೆ ನಿಯಮಾವಳಿಗಳು:- 1) ರೈತರನ್ನು ಕುರಿತು ಕವನ ರಚಿಸಬೇಕು. 24 ಸಾಲುಗಳು ಮಿತಿಯಲ್ಲಿರಬೇಕು. 2) ನಿಗದಿಪಡಿಸಿದ ಅರ್ಧ ಗಂಟೆ ಮೊದಲೇ ಸಭಾಂಗಣದಲ್ಲಿ ಹಾಜರಿರಬೇಕು. 3) ಕರ್ನಾಟಕ ವಿಕಾಸ ರಂಗ, ನೀಡುವ ಬರವಣಿಗೆ ಪ್ರತಿಯಲ್ಲಿರುವ ಸೂಚನೆ ಪಾಲಿಸುತ್ತಾ ಅದರಲ್ಲಿಯೇ ಕವನ ರಚಿಸಬೇಕು. 4) ನಕಲು ಮಾಡಿ ಬರೆಯುವ ಹಾಗಿಲ್ಲ. ಪ್ರಮಾಣಿಕ ಮನಸ್ಸಿನೊಂದಿಗೆ ಭಾಗವಹಿಸಬೇಕು. 5) ಭಾಗವಹಿಸುವ ಕವಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಪುಸ್ತಕ ನೀಡಿ ಗೌರವಿಸಲಾಗುವುದು. 6) ಲಘು ಉಪಾಹಾರದ ವ್ಯವಸ್ಥೆ ಇರುತ್ತದೆ. 7) ಭಾಗವಹಿಸಲು ಇಚ್ಛಿಸುವ ಕವಿಗಳು ಪೂರ್ಣ ವಿಳಾಸದೊಂದಿಗೆ ಮೊದಲೇ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕಾದ ದೂರವಾಣಿ ಸಂಖ್ಯೆ:- ಕರ್ನಾಟಕ ವಿಕಾಸ ರಂಗ - 6362864776 (8) ಕವಿಗಳು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಕಡೆಯ ದಿನಾಂಕ:- 28/09/2025 ಸೂಚನೆ:- ಕವಿಗಳು ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ